ಡಾ| ಹೆಗ್ಗಡೆಯವರಿದ ಗಿನ್ನೆಸ್‌ ದಾಖಲೆ ಪತ್ರ ಪ್ರದಾನ

12:49 PM, Friday, April 4th, 2014
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು: ಧರ್ಮಸ್ಥಳದ ಶಾಂತಿವನ ಟ್ರಸ್ಟ್‌ ಏಕಕಾಲದಲ್ಲಿ ಅತಿ ಹೆಚ್ಚು ಯೋಗಾಸನ ಪ್ರದರ್ಶನ ಕಾರ್ಯಕ್ರಮ ಗಿನ್ನೆಸ್‌ ವಿಶ್ವದಾಖಲೆಗೆ ಸೇರ್ಪಡೆಗೊಂಡ ಪ್ರಯುಕ್ತ ಗುರುವಾರ ರಾಜಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯಪಾಲರು ಟ್ರಸ್ಟ್‌ನ ಅಧ್ಯಕ್ಷ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರಿಗೆ ಗಿನ್ನೆಸ್‌ ದಾಖಲೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಯೋಗಕ್ಕೆ ಸುದೀರ್ಘ‌ ಪರಂಪರೆ ಇದೆ. ಇಡೀ ವಿಶ್ವವೇ ಯೋಗವನ್ನು ಒಪ್ಪಿಕೊಂಡಿದೆ. ಆರೋಗ್ಯಕರ ಮತ್ತು ನೆಮ್ಮದಿಯ ಬದುಕಿಗೆ ಯೋಗಾಭ್ಯಾಸ ಉಪಯುಕ್ತ. ಆದರೆ, ಇತೀಚಿನ ದಿನಗಳಲ್ಲಿ ಯೋಗಾಭ್ಯಾಸವನ್ನು ಹೊಟ್ಟೆಪಾಡಿನ ವೃತ್ತಿ ಮಾಡಿಕೊಂಡಿರುವ ಕೆಲವು ನಕಲಿ ಯೋಗ ಗುರುಗಳಿಂದ ಯೋಗ ತನ್ನ ವೈಶಿಷ್ಟéತೆ ಕಳೆದುಕೊಳ್ಳುವಂತಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ್‌ ಹಾಗೂ ಇದೇ ರೀತಿ ಇನ್ನೂ ಕೆಲವು ಸಂಸ್ಥೆಗಳು ಯೋಗದ ವೈಶಿಷ್ಟéತೆ ಮರುಸ್ಥಾಪಿಸುವ ಕೆಲಸ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಸಂಸ್ಕೃತ ಭಾಷೆ ಭಾರತೀಯ ಪರಂಪರೆ ಪರಿಚಯಿಸುತ್ತದೆ. ಸಂಸ್ಕೃತ ಭಾಷೆ ಪ್ರಪಂಚದ ಬೇರೆ ಪುರಾತನ ಭಾಷೆಗಳ ಹಿರಿಯ ಸಹೋದರಿ ಇದ್ದಂತೆ. ಆದರೆ, ಅದನ್ನು ಬೆಳೆಸುವ ನಿಟ್ಟಿನಲ್ಲಿ ಆಗಬೇಕಾದಷ್ಟು ಕೆಲಸ ಆಗುತ್ತಿಲ್ಲ ಎಂದು ರಾಜ್ಯಪಾಲರು ಇದೇ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.

ವಿಶಿಷ್ಠ ವ್ಯಕ್ತಿತ್ವ : ವಿರೇಂದ್ರ ಹೆಗ್ಗಡೆ ಅವರದ್ದು ಅಪರೂಪದ ಮತ್ತು ವಿಶಿಷ್ಠ ವ್ಯಕ್ತಿತ್ವ. ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅವರ ಸಾಧನೆ ಬಹಳ ಎತ್ತರದ್ದು. ಸಂಸ್ಥೆಗಳನ್ನು ನಿರ್ವಹಿಸುವ ಅವರ ಸಾಮರ್ಥಯದಿಂದ ನಾನು ಪ್ರಭಾವಿತನಾಗಿದ್ದೇನೆ. ಹೆಗ್ಗಡೆ ಅವರ ಈ ಪ್ರಶಂಸನೀಯ ಸೇವೆ ಮುಂದುವರಿಯಲಿ. ಸಮಾಜ ಅವರಿಂದ ಇನ್ನೂ ಹೆಚ್ಚಿನದ್ದನ್ನು ಪಡೆದುಕೊಳ್ಳಲಿ. ಯೋಗಾಭ್ಯಾಸದ ಇವರ ಸಾಧನೆ ಗಿನ್ನಿಸ್‌ ದಾಖಲೆಗೆ ಸೇರಿರುವಂತೆ ಇತರ ಸೇವೆಗಳೂ ಗಿನ್ನೆಸ್‌ ದಾಖಲೆ ಪಟ್ಟಿಗೆ ಸೇರಲಿ ಎಂದು ರಾಜ್ಯಪಾಲರು ಹಾರೈಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English