ಯಾರು ಹಿತವರು ನಮಗೆ ಈ ಮೂವರೊಳಗೆ

2:57 PM, Tuesday, April 8th, 2014
Share
1 Star2 Stars3 Stars4 Stars5 Stars
(No Ratings Yet)
Loading...

3 candidate

ಮಂಗಳೂರು : 16 ಲಕ್ಷ ಮತದಾರರಿರುವ ದಕ್ಷಿಣ ಕನ್ನಡ ಜಿಲ್ಲೆ ಮುಖ್ಯ ಪಕ್ಷಗಳಿಂದ ಬದಲಾವಣೆಯ ಆಶೆಯನ್ನು ಇಡಬಾರದು. ಏಕೆಂದರೆ, ಕಾಂಗ್ರೆಸ್ನ ಅಭ್ಯರ್ಥಿ ಸನ್ಮಾನ್ಯ ಜನಾರ್ಧನ ಪೂಜಾರಿಯವರು 8 ಸಲ, ಈ ಕ್ಷೇತ್ರದಿಂದ ಅವರ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ, ಚುನಾವಣೆಯಲ್ಲಿ 4 ಸಲ ಗೆದ್ದಿದ್ದಾರೆ, 4 ಸಲ ಸೋತಿದ್ದಾರೆ. ಇನ್ನೊಂದು 4 ಸಲ ಅವರನ್ನು ಅವರ ಪಕ್ಷ ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ. ಹಾಗಾದರೆ ಈ ಮಹಾನುಭಾವರು 8 ಸಲ ಪಾರ್ಲಿಮೆಂಟಿನಲ್ಲಿ ದಕ್ಷಿಣಕನ್ನಡದ ಪ್ರತಿನಿಧಿಯಾಗಿದ್ದರು. ಇವರು 80ರ ಅಂಚಿನಲ್ಲಿದ್ದಾರೆ. ನನ್ನ ಪ್ರಶ್ನೆ, ಒಂದೇ ಮನುಷ್ಯ 8 ಸಲ ಜನಸಾಮಾನ್ಯರ ಪ್ರತಿನಿಧಿಯಾಗಿದ್ದರೆ, ಅವರ ಪಕ್ಷದ ಪ್ರಕಾರ, ಅವರು ಅತ್ಯಂತ ಯೋಗ್ಯ ವ್ಯಕ್ತಿ. ಹಾಗಾದರೆ 16 ಲಕ್ಷ ಮತದಾರರಲ್ಲಿ ಈ ಕಾಂಗ್ರೆಸ್ ಪಕ್ಷಕ್ಕೆ ಬೇರೊಬ್ಬ ಯೋಗ್ಯ ವ್ಯಕ್ತಿ ಸಿಗಲಿಲ್ಲವೇ?

ಮೂರು ವಿಶ್ವವಿದ್ಯಾಲಯ ಇರುವ ಈ ಪರಶುರಾಮ ಸೃಷ್ಟಿಯಲ್ಲಿ 70% ವಿದ್ಯಾಭ್ಯಾಸವುಳ್ಳ ಜನತೆಯಲ್ಲಿ ಈ ಭಾಜಪಕ್ಕೆ ಲೋಕಸಭೆಯ ಅಭ್ಯರ್ಥಿಯಾಗಿ ಒಂದು ಪದವಿದರರೂ ಸಿಗಲಿಲ್ಲವೇ? ಅವರು ಕನ್ನಡ ಮಾತ್ರ ಅರಿತವರಾದ್ದರಿಂದ ಅವರನ್ನು ಕರ್ನಾಟಕ ವಿಧಾನಸಭೆಗೆ ಕಳುಹಿಸುವ ಬದಲು ಅವರ ಪಕ್ಷ ಅವರನ್ನು 2009 ರಲ್ಲಿ ಲೋಕಸಭೆಗೆ ಅಭ್ಯರ್ಥಿಯಾಗಿಸಿತು. ಅದೃಷ್ಟವಶಾತ್ ರಾ.ಸ.ಸ. ಹಿನ್ನೆಲೆಯಲ್ಲಿ ಈ ತರುಣ ಇದೇ ಜನಾರ್ಧನ ಪೂಜಾರಿಯವರನ್ನು ಸೋಲಿಸಿ ಸಂಸದ್ ಭವನಕ್ಕೆ ಆಯ್ಕೆಯಾದರು. ಈ ಮಹಾನುಭಾವರು, ಹಿಂದಿ ಮತ್ತು ಇಂಗ್ಷಿಷನ್ನು ಕಳೆದ 5 ವರ್ಷಗಳಲ್ಲಿ ಕಲಿಯಲೂ ಇಲ್ಲವಂತೆ ಮತ್ತು ಕಲಿಯುವ ಪ್ರಯತ್ನವನ್ನು ಮಾಡಲಿಲ್ಲವಂತೆ. ಎಲ್ಲರೂ ಹೇಳುತ್ತಾರೆ, ದಕ್ಷಿಣ ಕನ್ನಡವು ಬುದ್ಧಿವಂತರ ಜಿಲ್ಲೆ ಎಂದು. ಹಾಗಾದರೆ, ಈ ಕಾಂಗ್ರೆಸ್ ಮತ್ತು ಭಾಜಪಾ ದಕ್ಷಿಣ ಕನ್ನಡದ ಎಲ್ಲ ಮತದಾರರನ್ನು ಅವಮಾನಗೊಳಿಸುವುದಲ್ಲವೇ? 5 ವರ್ಷದ ನಂತರ 2014 ರಲ್ಲಿ ಎದುರಾಳಿಗಳು ಇವರಿಬ್ಬರೆ. ಹಾಗಾದರೆ ಬದಲಾವಣೆ ಎಲ್ಲಿ ಬಂತು? ಈ ಮುಖಾಮುಖಿಯಲ್ಲಿ ಹಾಗಾದರೆ ಈ ಎರಡೂ ಪಕ್ಷಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಕಂಡು ಬರುತ್ತದೆ.

“ಯುಪಿಎ ಅಧಿಕಾರಕ್ಕೇರಿದರೆ ಆರೋಗ್ಯದ ಹಕ್ಕು ಅನುಷ್ಟಾನ” ಎಂದು ರಾಹುಲ್ ಗಾಂಧಿ ಹೇಳಿದರಂತೆ. ಹಾಗಾದರೆ, ಕಳೆದ 66 ವರ್ಷಗಳ ನಂತರವೂ, ಅದರಲ್ಲಿ 52 ವರ್ಷ ಸರ್ಕಾರ ಮಾಡಿಯೂ, ಆರೋಗ್ಯ ಹಕ್ಕು ಈ ಕಾಂಗ್ರೆಸ್ ಪಕ್ಷಕ್ಕೆ ಕೊಡಲಾಗಲಿಲ್ಲ, ಬರುವ 5 ವರ್ಷಗಳಲ್ಲಿ ಕೊಡುತ್ತಾರಂತೆ. ಏನು ಕುಚೋದ್ಯ! 5 ದಶಕದಲ್ಲಿ ಕೊಡಲಾಗದನ್ನು 5 ವರ್ಷಗಳಲ್ಲಿ ಕೊಡುತ್ತಾರೆ ಎಂದು ಹೇಳುವುದು ಕಲ್ಪನಾತೀತ. ಇದು ಅಭಿವೃದ್ಧಿಯಲ್ಲಿ ಮೋಸಮಾಡುವ ಹೇಳಿಕೆ.

‘ಮೋದಿಯವರಿಂದ ದೇಶದ ಪ್ರಗತಿ’ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರಂತೆ. ಹಾಗಾದರೆ ನಿಮ್ಮಿಂದ ಪ್ರಗತಿ ಅಸಾಧ್ಯವೆಂದು ಈಗ ನೀವೇ ಒಪ್ಪಿಕೊಂಡಿದ್ದೀರಿ. ಮೋದಿಯಿಂದ ದೇಶದ ಪ್ರಗತಿ ಸಾಧ್ಯವೋ ಇಲ್ಲವೋ ಅದು ಬೇರೆ ಪ್ರಶ್ನೆ. ‘ಮೋದಿ ಮಹಾಸುಳ್ಳುಗಾರ’ ಎಂದು ಪೂಜಾರಿ ಹೇಳಿದರಂತೆ. ಆದರೆ ಅವರ ಪಕ್ಷದಲ್ಲೆ ಒಬ್ಬ ಕರ್ನಾಟಕ ಮಾಜಿ ಮುಖ್ಯಮಂತ್ರಿ ಮತ್ತು ಈಗಿನ ಕೇಂದ್ರ ಮಂತ್ರಿಯೊಬ್ಬರು ದೊಡ್ಡ ಸುಳ್ಳಗಾರ ಎಂಬುದು ಪ್ರಚಲಿತ. ಹಾಗಾದರೆ ಸತ್ಯ ಯಾರು ಹೇಳುವುದು?

ಸುರತ್ಕಲ್ ನ MLA Bawa ರವರು ಹೇಳಿದರಂತೆ “ದಕ್ಷಿಣ ಕನ್ನಡ ಅಭವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ”. ಹಾಗಾದರೆ ಈ ಸುರತ್ಕಲ್ ಜಿಟಥಿಠತಜಡಿ ಏಕೆ ಶಾಪಗ್ರಸ್ತ? 2 ವರ್ಷದ ಕಾಮಾಗಾರಿ, 8 ವರ್ಷದ ನಂತರವೂ ಆಗುತ್ತಾ ಇದೆ. ಬಾವರವರಿಗೆ ಅರ್ಥಶಾಸ್ತ್ರ ಅರ್ಥವಾಗುತ್ತದೋ? PUBLIC EXPENDITURE MUST CREATE PUBLIC SERVICE, NOT PUBLIC PROBLEMಅಲ್ಲದೆ, ಈಗಿನ ಸಂಸದರೂ ಕೂಡಾ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಹಾಗಾದರೆ ಇವರು ಏನು ಮಾಡಿದರು ಈ 5 ವರ್ಷಗಳಲ್ಲಿ? MP LAD ಫಂಡನ್ನು ಬಟವಾಡೆ ಮಾತ್ರ ಮಾಡಿದ್ದಲ್ಲವಾ. ಬಟವಾಡೆ ಮಾಡಲಿಕ್ಕೆ M.P. ಆಗಬೇಕೋ?

“ಮೋದಿ ಬಿರುಗಾಳಿ, ವಿರೋಧಿಗಳಿಗೆ ಚಳಿ” ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದ್ದರಂತೆ. ಯಾಕೆಂದರೆ ಮೋದಿಯವರ ಬಾಯಲ್ಲಿ ಈಗ AK 47 ಇರುವುದರಿಂದವೋ? ‘ಕಾಂಗ್ರೆಸ್ ಮುಕ್ತ ಭಾರತ ಕಾಣಲು ಬಿಜೆಪಿಗೆ ಅಸಾಧ್ಯ’ ಎಂದು ಉಡುಪಿಯ ಕೇಂದ್ರ ಮಂತ್ರಿಯೊಬ್ಬರು ಹೇಳಿದರಂತೆ. ಯಾವಾ ರಾಜಕೀಯ ಪಕ್ಷದಿಂದಲೂ ಮುಕ್ತಿ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಈ ಮಂತ್ರಿಗಳಿಗೆ ಯಾವಾಗ ತಿಳಿಯುವುದು. ಭಾರತದೇಶ ಒಂದು ಪ್ರಜಾಸತ್ತಾತ್ಮಕ ದೇಶ ಇಲ್ಲಿ ಎಲ್ಲರಿಗೂ ಅವಕಾಶ ಇದೆ. ಇದನ್ನು ಕಾಂಗ್ರೆಸ್ಗೆ ಅಥವಾ ಬಿಜೆಪಿಗೆ ಬಿಟ್ಟು ಕೊಟ್ಟಿಲ್ಲ. ‘ಭಾರತವನ್ನು ಇಡೀ ಜಗತ್ತಿನಲ್ಲಿಯೇ ಒಂದನೇ ಸ್ಥಾನಕ್ಕೆ ತರುವುದು ರಾಜೀವ ಗಾಂಧಿ ಕನಸಾಗಿದೆ’ ಎಂದು ಈ ಕೇಂದ್ರ ಮಂತ್ರಿಗಳು ಹೇಳಿದರಂತೆ. ಈ ಮಂತ್ರಿಗಳಿಗೆ ಮರೆತು ಹೋಯಿತೇ? ಇದೇ ರಾಜೀವ್ ಗಾಂಧಿ ಇಂದಿರಾಗಾಂಧಿ ಹತ್ಯಾನಂತರ, ಪ್ರಥಮ ಬಾರಿ 400 ಸೀಟುಗಳಿಗಿಂತಲೂ ಹೆಚ್ಚು ಗೆದ್ದು, 5 ವರ್ಷದಲ್ಲಿ ಎಲ್ಲವನ್ನೂ ಕಳೆದುಕೊಂಡ ಕಾಂಗ್ರೆಸ್ ನಾಯಕರು. 75% ಲೋಕಸಭಾಸೀಟುಗಳು ಕಾಂಗ್ರೆಸ್ ಪರ ಇದ್ದ್ದೂ, ಅವರು ಭಾರತವನ್ನು ಒಂದನೇ ಸ್ಥಾನಕ್ಕೆ ತರುವುದರಲ್ಲಿ ಅಸಫಲರಾಗಿದ್ದರು, ಹಾಗಾದರೆ ಈಗಿನ 100/120 ಸೀಟು ಬರುವಂತಹ ಪರಿಸ್ಥಿತಿಯಲ್ಲಿ ಈ ಮಂತ್ರಗಳು ಹೇಗೆ ತಾನೇ ದೇಶವನ್ನು ಉತ್ತುಂಗಕ್ಕೆ ತರಬಹುದು? ‘ನೈತಿಕ ಶಕ್ತಿ ಇಲ್ಲದ ಬಿಜೆಪಿ’ ಎಂದು ಅಭ್ಯರ್ಥಿಯೊಬ್ಬರು ಹೇಳಿದರು. ಇವರು ಯಾವ ನೈತಿಕ ಶಕ್ತಿ ಬಗ್ಗೆ ಮಾತಾಡುವುದು? ಅವರ 8 term ನಲ್ಲಿ ಅವರು ಮಾಡಿದ ದೊಡ್ಡ ಕಾರ್ಯವೆಂದರೆ LOAN MELA. ಒಂದು Bank Manager ಪ್ರಕಾರ “To be frank, instead of saying 0% I can say only 10% recovery”. ಹಾಗಾದರೆ ಉಳಿದ 90% NPA ಗೆ ಯಾರು ಜವಾಬ್ದಾರಿ? ಇಲ್ಲಿ ನೈತಿಕತೆ ಎಲ್ಲಿ ಹೋಯಿತು? ಇದು ಯಾರ ಹಣ? ಕೋಟ್ಯಾಂತರ ರೂಪಾಯಿಯ ಸೊತ್ತಿಗೆ ಯಾರು ಹೊಣೆ? ಇದು ನಮ್ಮ ನಿಮ್ಮೆಲ್ಲರ ಹಣವಲ್ಲವಾ?

ಈ ಎರಡೂ ಪಕ್ಷಗಳು ಒಟ್ಟು ಕೂಡಿ ಆಆಪನ್ನು ದೆಹಲಿಯಲ್ಲಿ ಕೆಲಸ ಮಾಡದ ಹಾಗೆ, ಮಾಡಿದರೆಂದು ಒತ್ತಿ ಹೇಳುವ ಅಗತ್ಯವಿಲ್ಲ. ವಿವೇಚನೆ ಇಲ್ಲದವರು ಹೇಳುತ್ತಾರೆ ಆಆಪ ಸರಕಾರ ಆಡಳಿತ ನಡೆಸಿ ಗೊತ್ತಿಲ್ಲದೆ ಓಡಿ ಹೋಯಿತು ಎಂದು. ಆದರೆ ಇದೇ ಆಆಪ್ ಸರಕಾರ, ತನ್ನ 49 ದಿನಗಳ ಸರಕಾರದಲ್ಲಿ ಬೇರೆ ಯಾವ ಸರಕಾರವೂ ಮಾಡದನ್ನು ತೋರಿಸಿಕೊಟ್ಟಿದ್ದಾರೆ. 29 ಮಹತ್ತರವಾದ ಕಾರ್ಯಗಳನ್ನು ಮಾಡಿದ ಪಟ್ಟಿ ಇದೆ.

1. VIP ಕಾರುಗಳ ಮೇಲೆ ಹಾಕುವ ಕೆಂಪು ದೀಪಕ್ಕೆ ತಡೆ ಮಾಡಿದ್ದಾರೆ. ಇದನ್ನು ಈಗ ಬೇರೆಯವರು ಅನುಕರಿಸುತ್ತಾರೆ.
2. 400 ಯೂನಿಟ್ ಒಳಗೆ ವಿದ್ಯುತ್ ಬಳಸುವವರಿಗೆ ವಿದ್ಯುತ್ ದರ 1/2 ಕ್ಕೆ ಕಡಿಮೆ. ಇದನ್ನು ಕೂಡಾ ಬೇರೆ ರಾಜ್ಯದಲ್ಲಿ ಮಾಡುವ ಪ್ರಯತ್ನ ಜಾರಿಯಲ್ಲಿದೆ.
3. 20 KL ಒಳಗೆ ನೀರು ಬಳಸುವವರಿಗೆ ಉಚಿತ ನೀರಿನ ಸರಬರಾಜು. ಇದರ ಬಗ್ಗೆಯೂ ಅನುಕರಣೆ ಆರಂಭವಾಗಿದೆ.
4. ಚಿಲ್ಲರೆ ವ್ಯಪಾರದಲ್ಲಿ (Retail Trade) ವಿದೇಶಿ ವಿನಿಮಯ ರದ್ದು
5. ಈಗ ಇರುವ 175 ಹಳೆ ರಾತ್ರಿ ತಂಗುದಾಣಗಳ ಜೊತೆಗೆ 58 ಹೊಸ ರಾತ್ರಿ ತಂಗುದಾಣಗಳ ಸ್ಥಾಪನೆ
6. ಹಲವಾರು ವರ್ಷಗಳ ಹಿಂದಿನ ಸರಕಾರದಿಂದ ಸಾಧ್ಯವಾಗದೆ ಇಲ್ಲದ ವಿದ್ಯುತ್ ಮಂಡಳಿಗಳ ಲೆಕ್ಕ ಪರಿಶೋಧನೆಗೆ ಅಪ್ಪಣೆ
7. ನೀರಾವರಿ ಇಲಾಖೆಯ 800 ಸಿಬ್ಬಂದಿಗಳ ವರ್ಗಾವಣೆ ಮತ್ತು 3 ಸಿಬ್ಬಂದಿಗಳ ಅಮಾನತು
8. ನೀರಿನ ಟ್ಯಾಂಕರ್ ಮಾಫಿಯಾಗೆ ತಡೆ
9. ನೀರಾವರಿ ಇಲಾಖೆ ಹಗರಣದ FIR ನೋಂದಾವಣಿ
10. ಭ್ರಷ್ಟಾಚಾರ ಸಹಾಯವಾಣಿ ಸಂಖ್ಯೆ 1031 ಸ್ಥಾಪನೆ
11. ಭ್ರಷ್ಟಾಚಾರ ನಿರ್ಮೂಲ ನೆಗೆ ಶೀಘ್ರ ಚಾಲನೆ. TIMES OF INDIA ಸಮೀಕ್ಷೆ ಪ್ರಕಾರ 45 ದಿವಸದೊಳಗೆ ಪರಿಣಾಮ ಕಂಡುಬಂದಿದೆ.
12. ನರ್ಸರಿ ಶಾಲೆ ಪ್ರವೇಶಕ್ಕೆ ಸಹಾಯವಾಣಿ ಸಂಖೈ 011-27352525
13. ಶಾಲೆಗಳಲ್ಲಿ ದೇಣಿಗೆ (Donation) ನಿಷೇಧ
14. ಪಡಿತರ ಮಾಫಿಯಾ ತಡೆ
15. ಪೋಲಿಸ್ ಹುತಾತ್ಮರ ಪತ್ನಿಗೆ 1 ಕೋಟಿ ರೂಪಾಯಿ ಕೊಡುಗೆ
16. ದೆಹಲಿ ಜನಲೋಕಪಾಲ್ ಮತ್ತು ನಗರ ಸ್ವರಾಜ್ ಬಿಲ್ ಮಂತ್ರಿ ಮಂಡಲದಿಂದ cleared (ಬಿಡುಗಡೆ)
17. ಎಲ್ಲಾ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಉತ್ತಮ ಗೊಳ್ಳಿಸಲು ತಲಾ 1 ಲಕ್ಷ ರೂಪಾಯಿ ಕೊಡುಗೆ
18. 5500 ರಿಕ್ಷಾ ಚಾಲನೆಗೆ ಪರವಾನಿಗೆ
19. 1984 ರ ಸಿಖ್ ವಿರೋಧಿ ದಂಗೆ ತನಿಖೆಗೆ ಖಖಿ ಸಮಿತಿ ರಚನೆ
20. ಮಹಿಳಾ ಭದ್ರತಾ ಪಡೆ ಮಾಡಲು ಸಮಿತಿ ರಚನೆ
21. ಗುತ್ತಿಗೆದಾರ ನೌಕರರು ಮತ್ತು ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಲು ಸಮಿತಿ ರಚನೆ
22. ಸರಕಾರಿ ಆಸ್ಪತ್ರೆ, ಶಾಲೆ, ರಾತ್ರಿ ತಂಗುದಾಣ ಮತ್ತು ಬಸ್ ತಾಣಗಳನ್ನು ಪರೀಕ್ಷಿಸಲು ದಿಡೀರ್ ಭೇಟಿ
23. ಕೀಡಾಪಟುಗಳಿಗೆ ಸನ್ಮಾನ
24.ವಿದ್ಯಾರ್ಥಿ ಗಳಿಗೆ ಬಸ್ ಪಾಸ್ ಸೌಲಭ್ಯ
25. ಸರಕಾರಿ ನೌಕರರ ನೇಮಕಾತಿ
26. ದೋಷಪೂರಿತ ಮತ್ತು ವೇಗದ ವಿದ್ಯುತ್ ಮೀಟರ್ ಗಳ ತಪಾಸಣೆ
27. ಕಾಮನ್ ವೆಲ್ತ್ ಆಟಗಳಲ್ಲಾದ ಹಗರಣದ FIR ನೋಂದಾವಣಿ. ಇದಕ್ಕೂ ಮತ್ತು ಶೀಲಾ ದೀಕ್ಷಿತ್ ಅವರನ್ನು ದಿಡೀರ್ ರಾಜ್ಯಪಾಲರಾಗಿ ಮಾಡಲು ಏನಾದರೂ ಸಂಬಂಧ ಇದೆಯೋ?
28. ರಿಲಾಯನ್ಸ್ ಗ್ಯಾಸ್ ದರ ಹಗರಣದ FIR ನೋಂದಾವಣಿ
29. 1 ಕೋಟಿ ಕೆಳಗಡೆ ವಹಿವಾಟು ನಡೆಸುವ ಸಣ್ಣ ಪ್ರಮಾಣದ ಕೈಗಾರಿಕಾ ಸಂಸ್ಥೆಗಳಿಗೆ VAT ಮತ್ತು ತೆರಿಗೆ ರಿಯಾಯಿತಿ ಮತ್ತು ಸರಳೀಕರಣ

ಮತದಾರರೆಲ್ಲರಿಗೆ ಒಂದು ಪ್ರಶ್ನೆ: ಓಡಿ ಹೋಗುವವರು 49 ದಿನಗಳಲ್ಲಿ ಇಷ್ಟೆಲ್ಲಾ ಕೆಲಸಗಳನ್ನು ಮಾಡಬಹುದೋ? ಕಾಂಗ್ರೆಸ್, ಭಾಜಪಾ, ಎರಡೂ ಪಕ್ಷಗಳೂ ಅಂಬಾನಿ ಕಂಪನಿಗಳಿಂದ ಆರ್ಥಿಕ ಸಹಾಯ ಪಡೆಯುವವರು. ಆಆಪ ಕಾರ್ಯಗಳಿಂದ ಏರಡೂ ಪಕ್ಷಗಳಿಂದ ತೊಂದರೆಯಾಗತೊಡಗಿತು. ಆದ್ದರಿಂದ ಏರಡೂ ಪಕ್ಷಗಳು ಕೂಡಿ ಅವರ ಜನಲೋಕಪಾಲ ಮಸೂದೆಯನ್ನು ಪಾಸ್ ಮಾಡಲು ಬಿಡಲಿಲ್ಲ. ಈ ಮಸೂದೆಯು, ಆಆಪದ ಅಸ್ಥಿತ್ವದ ಪ್ರಶ್ನೆಯಾಗಿತ್ತು. 28 ಸೀಟ್ ಇದ್ದವರು ಇಷ್ಟೆಲ್ಲಾ ಮಾಡಿದ್ದಾರೆ ಹಾಗಾದರೆ 32 ಸೀಟುಗಳು ಇದ್ದವರು ಹೇಡಿಗಳಲ್ಲವೇ? ಈ ಪ್ರಶ್ನೆಯನ್ನು ಯಾರು ಕೇಳಲಿಲ್ಲ.

ಇನ್ನು ನಿಮ್ಮ ಮುಂದಿರುವ 3 ಅಭ್ಯರ್ಥಿಗಳು ಕಾಂಗ್ರೆಸ್, ಭಾಜಪಾ ಮತ್ತು ಆಆಪ ಅಭ್ಯರ್ಥಿ ಎಂ.ಆರ್. ವಾಸುದೇವ. ಹೇಗೆ ತುಲನೆ ಮಾಡಿದರೂ ಇವರು ಅತ್ಯುತ್ತಮ ಅಭ್ಯರ್ಥಿ. ಸಂಖ್ಯಾ ವಿಜ್ಞಾನದಲ್ಲಿ ಸ್ನಾತ್ತಕ್ಕೋತ್ತರ ಪದವೀಧರರು. ಇನ್ನೂ ಹಲವು ವಿದ್ಯಾರ್ಹತೆಗಳು. ಸದ್ರಿ Engineering College ನಲ್ಲಿ ಕಲಿಸುತ್ತಿದ್ದಾರೆ. ಒಂದು ಖಾಸಗೀ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. 2012ರಲಿ Airport Authority of India ಮಂಗಳೂರು ಪ್ರಾಧಿಕಾರದ ನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. 28 ತಿಂಗಳ ಅಂತರರಾಷ್ಡ್ರಿಯ ವಿಮಾನನಿಲ್ದಾಣ ನಿರ್ಮಾಣದ ಕೆಲಸವನ್ನು ಕೇವಲ 24 ತಿಂಗಳಲ್ಲಿ ಮಾಡಿ ಮುಗಿಸಿದ ಕೀರ್ತಿ ಇವರಿಗಿದೆ. ಭಾರತದಲ್ಲಿ ಪ್ರಾಜೆಕ್ಟ್ ಮಾಡುವಾಗ ಸಮಯ ಮತ್ತು ಖರ್ಚು, ಕಡಿವಾಣವಿಲ್ಲದೆ ಹೆಚ್ಚಾಗುವುದು ಮಾಮೂಲಿ. ಆದರೆ ವಾಸುದೇವರು, ವ್ಯವಸ್ಥೆಯೊಳಗೆ ಹೇಗೆ ಒಂದು ಸುಂದರ ಭಾರತವನ್ನು ನಿರ್ಮಾಣ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ.

ಯಾರದೇ ಸರಕಾರ ಬರಲಿ, ಉತ್ತಮ ಕೆಲಸ ಮಾಡುವ ಅಭ್ಯರ್ಥಿ ಇರಬೇಕು. ಯಾರು ಹಿತವರು ನಮಗೆ ಈ ಮೂವರೊಳಗೆ? ಆಆಪ ದ ವಾಸುದೇವರು ಹಿತವರೆಂದು ಹೇಳಲು ಯಾವ ಸಂದೇಹವೂ ಇಲ್ಲ.

By. J.Shriyan – AAP Press release

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English