ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧಿಕೃತ ವೆಬ್ಸೈಟ್ ಉದ್ಘಾಟನಾ ಸಮಾರಂಭವು ಪಕ್ಷದ ಚುನಾವಣಾ ಪ್ರಚಾರ ಕಛೇರಿಯಲ್ಲಿ ಮಂಗಳವಾರ ಸಂಜೆ ನಡೆಯಿತು. ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಬಿ. ರಮಾನಾಥ ರೈ ವೆಬ್ ಸೈಟ್ ಉದ್ಫಾಟನೆ ಮಾಡಿದರು.
ಸಾಮಾಜಿಕ ತಾಣಗಳಲ್ಲಿ ಸಾರ್ವಜನಿಕರ ಹಾದಿ ತಪ್ಪಿಸುವ ಷಡ್ಯಂತ್ರಗಳು ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಜನರಿಗೆ ವಸ್ತುಸ್ಥಿತಿಯ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜನಸಾಮಾನ್ಯರಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾವಂತ ಯುವ ಸಮೂಹದಲ್ಲಿ ಮತದಾನದ ಜನಜಾಗೃತಿ ಮೂಡಿಸುವುದು. ಪಕ್ಷದ ಧ್ಯೇಯ, ಧೋರಣೆ, ಚಟುವಟಿಕೆಗಳ ಪರಿಚಯ ಹಾಗೂ ಸಾಧನೆಗಳನ್ನು ತಿಳಿಸುವುದು ಈ ವೆಬ್ಸೈಟ್ನ ಉದ್ದೇಶವಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ನೂತನವಾಗಿ ಉದ್ಫಾಟನೆಗೊಂಡ ವೆಬ್ಸೈಟ್ www.dkcongresscommittee.com ಆಗಿದ್ದು ಯುಟ್ಯೂಬ್, ಫೇಸ್ಬುಕ್, ಲಿಂಕ್ಡಿನ್ ಹಾಗೂ ಟ್ವಿಟ್ಟರ್ಗೆ ಸಂಪರ್ಕ ಹೊಂದಿರುತ್ತದೆ.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸದಸ್ಯರಾದ ಪಿ.ವಿ. ಮೋಹನ್, ಪಕ್ಷದ ವಕ್ತಾರರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಶಾಹುಲ್ ಹಮೀದ್ ಕೆ.ಕೆ., ಹಾಗೂ ಪಕ್ಷದ ಮುಖಂಡರಾದ ಹರಿಕೃಷ್ಣ ಬಂಟ್ವಾಳ್, ಎ.ಸಿ. ಭಂಡಾರಿ ಹಾಗೂ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English