ಭರತನಾಟ್ಯ ಎಂಬುದು ಇನ್ಸ್ಟಂಟ್ ಕಾಫಿ ಅಲ್ಲ: ಮಂಗೇಶ್ ಭಟ್

9:22 PM, Saturday, January 8th, 2011
Share
1 Star2 Stars3 Stars4 Stars5 Stars
(No Ratings Yet)
Loading...

ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯಮಂಗಳೂರು, ಜ 7: ಮಂಗಳೂರಿನ ಆಕಾಶಭವನದಲ್ಲಿ ಶ್ರೀ ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯವನ್ನು ಶುಕ್ರವಾರ ನೃತ್ಯಶಿಕ್ಷಕಿ ಚಿತ್ರಲೇಖಾ ಶೆಟ್ಟಿ  ಉದ್ಘಾಟಿಸಿದರು.
ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯವ್ಯಕ್ತಿಯ ಬಾಳಿನಲ್ಲಿ ಬಾಲ್ಯ ಎಂಬುದು ಅಮೂಲ್ಯ ಸಮಯ. ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಇದೇ ಸುಸಂದರ್ಭ. ಮಕ್ಕಳು ಜನ್ಮತಃ ಪ್ರತಿಭಾವಂತರು. ಅವರಿಗೂ ಸೂಕ್ತ ಮಾರ್ಗದರ್ಶನ ನೀಡಿದರೆ ಅವರ ಪ್ರತಿಭೆಯನ್ನು ಹೊರಗೆಡಹಬಹುದು. ಭರತನಾಟ್ಯ ಇನ್ಸ್ಟಂಟ್ ಕಾಫಿ ಅಲ್ಲ. ಅದೊಂದು ಕಲೆ. ಈ ಕಲೆ ಸಿದ್ಧಿಸಲು ಸೂಕ್ತ ಪರಿಶ್ರಮ, ತಾಳ್ಮೆ ಹಾಗೂ ಗುರುವಿನ ಮಾರ್ಗದರ್ಶನ ಮುಖ್ಯ ಎಂದು ಗಣಪತಿ ಹೈಸ್ಕೂಲ್  ನ ಮುಖ್ಯ ಶಿಕ್ಷಕ ಮಂಗೇಶ್ ಭಟ್ ಅಭಿಪ್ರಾಯಪಟ್ಟಿದ್ದಾರೆ.
ದುರ್ಗಾಂಬಾ ನೃತ್ಯನಿಕೇತನ ನಾಟ್ಯಾಲಯಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಂಗಭಾರತಿ ನಿರ್ದೇಶಕ ಕೆ.ವಿ. ರಮಣ್ ದುರ್ಗಾಂಬಾ ನೃತ್ಯ ಕಲಾನಿಕೇತನಕ್ಕೆ ಶುಭಹಾರೈಸಿದರು. ವಿದ್ಯಾರ್ಥಿಗಳು ಕಲಿಕೆಯ ಬಗ್ಗೆ ಯಾವತ್ತೂ ಆಸಕ್ತಿ ಕಳೆದುಕೊಳ್ಳಬಾರದು. ಕಲಿಯುವ ಉತ್ಸಾಹ, ಆಸಕ್ತಿಯೊಂದಿಗೆ ಪರಿಶ್ರಮಪಟ್ಟರೆ ಸಾಧನೆ ತನ್ನಿಂದ ತಾನೇ ಸಿದ್ಧಿಸುತ್ತದೆ ಎಂದು ಅವರು ಹೇಳಿದರು.
ದುರ್ಗಾಂಬಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿದ್ವಾನ್ ಮಂಜುಳಾ ಸುಬ್ರಹ್ಮಣ್ಯ, ಭರತನಾಟ್ಯ ಕಲೆಗೆ ಹೆಚ್ಚೆಚ್ಚು ಪ್ರೋತ್ಸಾಹ ಸಿಗುವಂತಾಗಬೇಕು, ಈ ನಿಟ್ಟಿನಲ್ಲಿ ನಾಡಿನ ಸಂಘ-ಸಂಸ್ಥೆಗಳು, ಸರ್ಕಾರದ ವಿವಿಧ ಇಲಾಖೆಗಳು ಮುತುವರ್ಜಿ ವಹಿಸಬೇಕು ಎಂದು ಆಶಿಸಿದರು.  ಈಗಿನ ಆಧುನಿಕ ಯುಗದಲ್ಲಿ ಯಾರಿಗೂ ತಾಳ್ಮೆ ಇಲ್ಲ. ಎಲ್ಲವೂ ಕ್ಷಿಪ್ರವಾಗಿ ನಡೆಯಬೇಕು  ಎಂದು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English