ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್ ಅವರ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಪ್ರಕರಣ ದಾಖಲಿಸಿದ್ದಾರೆ.ತನ್ನ ಖಾಸಗಿ ಮೊಬೈಲ್ ನಂಬರ್ ನಿಂದ ಮಾಡಿದ ಕರೆಯ ಮಾಹಿತಿ ಬಹಿರಂಗಗೊಂಡ ಬಗ್ಗೆ ಖಾಸಗಿ ದೂರವಾಣಿ ಕರೆಗಳ ವಿವರಗಳನ್ನು ಸೋರಿಕೆ ಮಾಡಿರುವ ಭಾರ್ತಿಏರ್ಟೆಲ್ ಸಂಸ್ಥೆಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಸುದತ್ತ ಜೈನ್ ಹಾಗೂ ಕ್ರಿಮಿನಲ್ ವಕೀಲರೊಬ್ಬರು ಚುನಾವಣಾ ಮುನ್ನಾ ದಿನ ಅಪಪ್ರಚಾರ ಮಾಡಲು ಬಳಕೆ ಮಾಡಿಕೊಂಡಿದ್ದಾರೆ ಎಂದು ನಳಿನ್ ಕುಮಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ಸಂಸದರ ವೈಯಕ್ತಿಯ ದೂರವಾಣಿ ಕರೆಯ ಮಾಹಿತಿಯನ್ನು ಬೇರೆ ವ್ಯಕ್ತಿಗಳಿಗೆ ಸಿಗುವಂತೆ ಮಾಡಿದ್ದು ಯಾಕೆ ಎಂದು ಸ್ಪಷ್ಟ ಪಡಿಸಬೇಕೆಂದು ಬಂದರು ಪೊಲೀಸರು ಭಾರತಿ ಏರ್ ಟೆಲ್ ಕಂಪೆನಿಗೆ ನೋಟಿಸ್ ನೀಡಿದ್ದಾರೆ. ಈ ವಿಷಯದಲ್ಲಿ ಹೆಚ್ಚಿನ ದಾಖಲೆ ಒದಗಿಸುವಂತೆ ನಳಿನ್ ಕುಮಾರ್ ಅವರಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ.
ನಳೀನ್ ಕುಮಾರ್ ಅವರು ಯುವತಿಯೊಬ್ಬಳಿಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 3,642 ಕರೆಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿತ್ತು. ಇದು ಬಿಜೆಪಿಯಲ್ಲಿರುವ ನಳೀನ್ ಕುಮಾರ್ ಅವರ ವಿರೋಧಿಗಳ ಸಂಚು, ಭಾರತಿ ಏರ್ ಟೆಲ್ ನಲ್ಲಿರುವ ಸಂಘ ಪರಿವಾರದ ಹಿತೈಷಿಗಳಿಂದಲೇ ನಳೀನ್ ಕುಮಾರ್ ಅವರ ದೂರವಾಣಿ ಕರೆ ದಾಖಲೆ ಬಹಿರಂಗ ಮಾಡಲಾಗಿದೆ, ಈ ಬಗ್ಗೆ ಬಗ್ಗೆ ಸೂಕ್ತ ತನಿಖೆಯಾಗಲಿ ಎಂದು ಸುದತ್ತ ಜೈನ್ ಹೇಳಿದ್ದಾರೆ.
Click this button or press Ctrl+G to toggle between Kannada and English