ಸಾಮಾಜಿಕ ಶಾಂತಿಗೆ ಪೊಲೀಸರ ಕೊಡುಗೆ ಗಮನೀಯ:ಸುಬೋಧ್ ಯಾದವ್

7:17 PM, Tuesday, January 11th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಪೋಲಿಸ್ ವಾರ್ಷಿಕ ಕ್ರೀಡಾಕೂಟಮಂಗಳೂರು ಜ 11: ದಕ್ಷಿಣಕನ್ನಡ ಜಿಲ್ಲೆಯಲ್ಲಿನ ಅರಕ್ಷಕರ ಸಮಯ ಪ್ರಜ್ಞೆ ಮುಂಜಾಗ್ರತೆ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಸಾಮಾಜಿಕ ಶಾಂತಿ ಮತ್ತು ಸೌಖ್ಯ ನೆಲೆಸಿದೆ ಎಂದು ದಕ್ಷಿಣಕನ್ನಡ ಪೊಲೀಸರ ಕಾರ್ಯ ವೈಖರಿಯನ್ನು ಜಿಲ್ಲಾಧಿಕಾರಿ ಶ್ರೀ ಸುಬೋಧ್ ಯಾದವ್ ಪ್ರಶಂಸಿಸಿದರು.
ಪೋಲಿಸ್ ವಾರ್ಷಿಕ ಕ್ರೀಡಾಕೂಟಅವರು ಇಂದು ಮಂಗಳೂರಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳೂರು ನಗರ ಪೊಲೀಸ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಪೋಲಿಸ್ ವಾರ್ಷಿಕ ಕ್ರೀಡಾಕೂಟನಿರಂತರವಾಗಿವಿವಿಧ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆಯುತ್ತಿದ್ದರೂ ಶಾಂತಿ, ಸುವ್ಯವಸ್ಥೆಯಪಾಲನೆಯಲ್ಲಿ ಲೋಪಗಳಿಲ್ಲ. ಪೊಲೀಸರ ಬಿಡುವಿಲ್ಲದ ಕೆಲಸದ ನಡುವೆ ವಾರ್ಷಿಕ ಕ್ರೀಡಾಕೂಟ ಅವರಲ್ಲಿ ನವೋಲ್ಲಾಸ ಮೂಡಿಸಿ ಚೈತನ್ಯ ತುಂಬಲಿದೆ. ಕ್ರೀಡೆಗಳು ಕ್ರೀಡಾ ಮನೋಭಾವದಿಂದ ಭಾಗವಹಿಸಲು ಪೊಲೀಸರಿಗೆ ಕರೆಯಿತ್ತರು.
ಪೋಲಿಸ್ ವಾರ್ಷಿಕ ಕ್ರೀಡಾಕೂಟಮಂಗಳೂರು ಪೊಲೀಸ್ ಆಯುಕ್ತ ಶ್ರೀ ಸೀಮಂತ ಕುಮಾರ್ ಸಿಂಗ್ ಎಲ್ಲರನ್ನು ಸ್ವಾಗತಿಸಿದರು. ಪೊಲೀಸ್ ಅಧೀಕ್ಷಕರಾದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ವಂದಿಸಿದರು.
ದಿನಾಂಕ 11-1-11 ರಿಂದ 12-1-11 ರ ವರೆಗೆ ಎರಡು ದಿನಗಳ ಕಾಲ ನಡೆಯುವ ಕ್ರೀಡಾ ಕೂಟದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮಂಗಳೂರು,ಪಣಂಬೂರು, ಪುತ್ತೂರು ಉಪ ವಿಭಾಗ ಹಾಗೂ ಮಹಿಳಾ ಪೊಲೀಸ್ ತಂಡಗಳು ಸೇರಿದಂತೆ 5 ತಂಡಗಳು ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿವೆ.ಆರ್.ಎಸ್.ಐ.ಸತೀಶ್ ಕ್ರೀಡಾ ಪ್ರಮಾಣವಚನ ಬೋಧಿಸಿದರು.

image description

1 ಪ್ರತಿಕ್ರಿಯೆ - ಶೀರ್ಷಿಕೆ - ಸಾಮಾಜಿಕ ಶಾಂತಿಗೆ ಪೊಲೀಸರ ಕೊಡುಗೆ ಗಮನೀಯ:ಸುಬೋಧ್ ಯಾದವ್

  1. muyzpqr, ywoumwoqrnvn.com/

    6ohVzm jfhwxwkjrpup, [url=http://lurrgwfmqogl.com/]lurrgwfmqogl[/url], [link=http://lruikmvsgthw.com/]lruikmvsgthw[/link], http://bktaujoocjho.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English