ರಾಜ್ಯದ 13 ಕಡೆ 11,500 ಪೊಲೀಸ್ ವಸತಿ ಗೃಹಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿ

8:48 PM, Wednesday, April 23rd, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Geroge

ಬೆಂಗಳೂರು : ಶಿವಾಜಿನಗರದಲ್ಲಿನ ಪೊಲೀಸ್ ವಸತಿ ಗೃಹಗಳಿಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಬುಧವಾರ ಭೇಟಿ ನೀಡಿದರು. ರಾಜ್ಯದ 13 ಕಡೆ 11,500 ಪೊಲೀಸ್ ವಸತಿ ಗೃಹಗಳನ್ನು 1800 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಅದರಲ್ಲಿ ಬೆಂಗಳೂರಿನಲ್ಲಿ 2500 ವಸತಿ ಗೃಹಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದು ಅವರು ಈ ಸಂಧರ್ಭ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಶಿವಾಜಿನಗರದ ವಸತಿ ಗೃಹದಲ್ಲಿರುವವರನ್ನು ನೂತನ ವಸತಿ ಗೃಹಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

ಸ್ಥಳಾಂತರ ಪೂರ್ಣಗೊಂಡ ಬಳಿಕ ಶಿವಾಜಿನಗರ ವಸತಿ ಗೃಹವಿರುವ ಸ್ಥಳದಲ್ಲಿ ನೂತನ ಬಹುಮಹಡಿ ಕಟ್ಟಡದ ವಸತಿ ಗೃಹ ನಿರ್ಮಿಸಲಾಗುವುದು ಎಂದು ಸಚಿವರು ಹೇಳಿದರು. ಶಿವಾಜಿನಗರದಲ್ಲಿನ ವಸತಿ ಗೃಹದಲ್ಲಿ ಕುಡಿಯುವ ನೀರಿಗೆ ಕೊಳಚೆ ನೀರು ಸೇರ್ಪಡೆಯಾಗುತ್ತಿರುವ ಬಗ್ಗೆ ನಿವಾಸಿಗಳು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿ ಹಾಜರಿದ್ದ ಜಲಮಂಡಳಿ ಇಂಜಿನಿಯರ್ ಅವರಿಗೆ ಸಮಸ್ಯೆಯನ್ನು ಒಂದು ತಿಂಗಳಿನಲ್ಲಿ ಸರಿಪಡಿಸಬೇಕು ಎಂದು ಗೃಹ ಸಚಿವರು ಗಡುವು ನೀಡಿದರು.

ಪೊಲೀಸ್ ವಸತಿ ಗೃಹಗಳ ಕುರಿತು ಮಾಹಿತಿ ನೀಡಿದ ಕೆ.ಜೆ.ಜಾರ್ಜ್ ರಾಜ್ಯದಲ್ಲಿ ಶೇ.40ರಷ್ಟು ಪೊಲೀಸರಿಗೆ ಮಾತ್ರ ವಸತಿ ಗೃಹಗಳ ಸೌಲಭ್ಯ ದೊರಕಿದೆ. ಶೇ.60ರಷ್ಟು ಪೊಲೀಸರಿಗೆ ವಸತಿ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿರುವ ಎಲ್ಲಾ ಪೊಲೀಸರಿಗೂ ವಸತಿ ಗೃಹದ ಸೌಕರ್ಯವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ಇದಕ್ಕಾಗಿ ಅಗತ್ಯ ಅನುದಾನವನ್ನು ನೀಡಲಾಗುವುದು ಎಂದು ಜಾರ್ಜ್ ಹೇಳಿದರು.

ಮೂಲ ಸೌಕರ್ಯ ಸಚಿವ ರೋಷನ್ ಬೇಗ್, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಪೊಲೀಸ್ ಹೌಸಿಂಗ್ ಕಾರ್ಪೋರೇಷನ್‌ನ ಎಡಿಜಿಪಿ ಪ್ರವೀಣ್‌ ಸೂದ್ ಮುಂತಾದವರು ಗೃಹ ಸಚಿವರ ಜೊತೆ ಬುಧವಾರ ನಗರದ ವಿವಿಧ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿದರು.

Vedavyas Diwali

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English