ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾ ಸದಸ್ಯರಿಂದ ಪ್ರತಿಭಟನೆ

5:59 PM, Friday, May 2nd, 2014
Share
1 Star2 Stars3 Stars4 Stars5 Stars
(5 rating, 6 votes)
Loading...
Kranti Sena

ಮಂಗಳೂರು: ನಗರದ ಪಳ್ನೀರ್ ಬಳಿ ಇರುವ ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾದ ಸದಸ್ಯರು ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ರವಾನೆ ಮಾಡಿಸಲು ಹಿಂದೂ ಯುವಕರನ್ನು ಮಲಬಾರ್ ಗೋಲ್ಡ್ ಸಂಸ್ಥೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೆಲವು ದಿನಗಳ ಹಿಂದೆ ಭಾರತ್ ಕ್ರಾಂತಿ ಸೇನಾದ ಸಂಸ್ಥಾಪಕ ಪ್ರಣವಾನಂದ ಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಲಬಾರ್ ಗೋಲ್ಡ್ ಸಂಸ್ಥೆ ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದೆ. ಇದಕ್ಕೆ ಹಿಂದೂ ಯುವಕರನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರಾಂತಿ ಸೇನೆಯ ಐದು ಮಂದಿ ಕಾರ್ಯಕರ್ತರನ್ನು ಬಂಧಿಸಿದರು.

ಇಂದು ಅಕ್ಷಯ ತೃತೀಯ ದಿನವಾದ್ದರಿಂದ ಮಳಿಗೆಯಲ್ಲಿ ಜನ ಸಂದಣಿ ಜಾಸ್ತಿಯಾಗಿತ್ತು, ಪೊಲೀಸರು ಬಿಗು ಭದ್ರತೆಯನ್ನು ಏರ್ಪಡಿಸಿದ್ದರು. ಕಾರ್ಯಕರ್ತರು ಬ್ಯಾನರ್ ಹಿಡಿದು ಧಿಕ್ಕಾರ ಕೂಗಿದರು. ಪೊಲೀಸರು ಪ್ರತಿಭಟನೆ ಮಾಡದಂತೆ ಕಾರ್ಯಕರ್ತರಿಗೆ ವಿನಂತಿಸಿದರು. ಪ್ರತಿಭಟನೆ ನಿಲ್ಲಿಸದೇ ಇದ್ದುದರಿಂದ ಕ್ರಾಂತಿ ಸೇನೆಯ ಐದು ಮಂದಿ ಕಾರ್ಯಕರ್ತರನ್ನು ಬಂಧಿಸಲಾಯಿತು.

ಕ್ರಾಂತಿ ಸೇನೆಯ ರಾಜೇಶ್ ಪೂಜಾರಿ, ಲೋಹಿತ್ ಕುಮಾರ್, ಉದಯ ಶಂಕರ್, ನವೀನ್, ಹೇಮಂತ್ ಕುಮಾರ್‌ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Kranti Sena

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English