ಮಂಗಳೂರು: ತುಂಗಭದ್ರ ಫಿಲಮ್ಸ್ ಸಂಸ್ಥೆಯ ಬ್ಯಾನರ್‌ನಡಿ ತಯಾರಾದ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳುಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ಚಿತ್ರದ ನಿರ್ಮಾಪಕ, ನಿರ್ದೇಶಕ ರಾಜಶೇಖರ ಕೋಟ್ಯಾನ್ ಅವರ ತಾಯಿ ಕಲ್ಯಾಣಿ ಯವರು ಮೇ 2, ಶುಕ್ರವಾರ ಜ್ಯೋತಿ ಸಿನಿಮಾ ಮಂದಿರದಲ್ಲಿ ನೆರವೇರಿಸಿದರು.
ನಾರಾಯಣಗುರುಗಳ ಕಾಲದ ಪ್ರಾಕೃತಿಕ ಹಳ್ಳಿ ಸೊಗಡಿನ ಜನಜೀವನ ತೆರೆದಿಡುವಂತಹ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ಮೂಲ್ಕಿ, ಕಾರ್ಕಳ, ಬಾರ್ಕೂರು, ಸುರತ್ಕಲ್, ಬ್ರಹ್ಮಾವರ, ಕುದ್ರೋಳಿ ಹಾಗೂ ಕೇರಳದ ಶಿವಗಿರಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕ ರಾಜಶೇಖರ ಕೋಟ್ಯಾನ್ ಹೇಳಿದರು.
ವಿಜಯ ರಾಘವೇಂದ್ರ, ಸೂರ್ಯೋದಯ, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಸೇರಿದಂತೆ ಹಲವು ಕಲಾವಿದರು ಮುಖ್ಯ ತಾರಾಗಣದಲ್ಲಿದ್ದಾರೆ. ಸಚಿವ ಅಭಯಚಂದ್ರ ಜೈನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾನಾಥ ಕೋಟ್ಯಾನ್, ಜಯ ಸಿ. ಸುವರ್ಣ ಮುಂತಾದವರು ಅಭಿನಯಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರಿನ ಜ್ಯೋತಿ, ಉಡುಪಿಯ ಕಲ್ಪನಾ, ಬಿ.ಸಿ ರೋಡಿನ ನಕ್ಷತ್ರ, ಕಾರ್ಕಳದ ರಾಧಿಕಾ ಚಿತ್ರ ಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡಿದೆ.
Click this button or press Ctrl+G to toggle between Kannada and English