ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ 21 ಜೋಡಿಗಳ ಸಾಮೂಹಿಕ ವಿವಾಹ

6:14 PM, Monday, May 5th, 2014
Share
1 Star2 Stars3 Stars4 Stars5 Stars
(4 rating, 6 votes)
Loading...

Rosario Cathedral

ಮಂಗಳೂರು : ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ (ಎಸ್‌.ವಿ.ಪಿ.)ದ 40ನೇ ವರ್ಷದ ಸಾಮೂಹಿಕ ವಿವಾಹ ರವಿವಾರ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ 21 ಜೋಡಿಗಳು ಸತಿ ಪತಿಗಳಾಗಿ ದಾಂಪತ್ಯ ಜೀವನ ಪ್ರವೇಶಿಸಿದರು.

ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ ಪರವಾಗಿ ನವ ದಂಪತಿಗಳಿಗೆ ತಲಾ 5 ಸಾವಿರ ರೂ. ಠೇವಣಿ ಪತ್ರ, ಅಡುಗೆ ಸಾಮಗ್ರಿ ಮತ್ತು ಬಟ್ಟೆ ಬರೆ ಸಹಿತ ಒಟ್ಟು 10,000 ರೂ. ಮೌಲ್ಯದ ಉಡುಗೊರೆ ನೀಡಲಾಯಿತು.

ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿ ನೂತನ ವಧು-ವರರನ್ನು ಹರಸಿದರು. ಧರ್ಮ ಪ್ರಾಂತದ ಪ್ರಧಾನ ಗುರು ಮೊ| ಡೆನಿಸ್‌ ಮೊರಾಸ್‌ ಪ್ರಭು, ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನ ಪ್ರಧಾನ ಧರ್ಮ ಗುರು ಫಾ| ಜೆ.ಬಿ. ಕ್ರಾಸ್ತಾ ಮತ್ತು ಇತರ 14 ಮಂದಿ ಗುರುಗಳು ಉಪಸ್ಥಿತರಿದ್ದು ವಧು-ವರರನ್ನು ಆಶೀರ್ವದಿಸಿದರು.

ಶಾಸಕ ಜೆ.ಆರ್‌. ಲೋಬೊ ಅವರು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದರು. ಧಾರ್ಮಿಕ ವಿಧಿ ವಿಧಾನದ ಬಳಿಕ ವಧು-ವರನ್ನು ಅಭಿನಂದಿಸುವ ಸಮಾರಂಭ ಜರಗಿತು. ಎಲ್ಲ ವಧು-ವರರ ಪರವಾಗಿ ವಿನೋದ್‌ ರೋಶನ್‌ ಡಿ’ಸೋಜಾ (ಬೆಂದೂರು) ಮತ್ತು ಮರೀನಾ ಒಲಿವಿಯಾ ಡಿ’ಸೋಜಾ (ವಾಮಂಜೂರು) ಅವರು ದೀಪ ಬೆಳಗಿಸಿದರು. ಫಾ| ಜೆ.ಬಿ. ಕ್ರಾಸ್ತಾ ಸ್ವಾಗತಿಸಿದರು.
ಪಂಜದ ಹರೀಶ್‌ ಡಿ’ಸೋಜಾ ಮತ್ತು ಸ್ಟೆಲ್ಲಾ ಡಿ’ಸೋಜಾ ಅವರು ಕೃತಜ್ಞತೆ ಸಲ್ಲಿಸಿದರು.

ಎಸ್‌ವಿಪಿ ಅಧ್ಯಕ್ಷ ಜೋಕಿಂ ಮೊಂತೇರೊ ಅವರು ಸಮಸ್ತ ವಧುಗಳ ಪರವಾಗಿ ವಧುಗಳನ್ನು ವರರ ಕುಟುಂಬಕ್ಕೆ ಒಪ್ಪಿಸಿಕೊಡುವ ಹಾಗೂ ಎಸ್‌ವಿಪಿ ಸದಸ್ಯೆ ರೀಟಾ ಮೊಂತೇರೊ ಅವರು ಸಮಸ್ತ ವರರ ಪರವಾಗಿ ವಧುಗಳನ್ನು ಸ್ವೀಕರಿಸುವ ಪ್ರಕ್ರಿಯೆ ನೆರವೇರಿಸಿದರು.

ಎಸ್‌.ವಿ.ಪಿ. ಕೇಂದ್ರೀಯ ಸಮಿತಿ ಅಧ್ಯಕ್ಷ ಆಲ್ಬರ್ಟ್‌ ಸಿಕ್ವೇರಾ, ರೊಜಾರಿಯೋ ಚರ್ಚ್‌ನ ಸಹಾಯಕ ಗುರುಗಳಾದ ಫಾ| ಅಮಿತ್‌ ರೊಡ್ರಿಗಸ್‌, ಫಾ| ಆಲ್ವಿನ್‌ ಸೆರಾವೊ, ಫಾ| ರೊಕಿ ಫೆರ್ನಾಂಡಿಸ್‌ ಮೊದಲಾದವರು ಉಪಸ್ಥಿತರಿದ್ದರು. ವಿಕ್ಟರ್‌ ಜೆ. ಮಿನೇಜಸ್‌ ಅತಿಥಿಗಳನ್ನು ಪರಿಚಯಿಸಿದರು. ಎಸ್‌.ವಿ.ಪಿ. ರೊಜಾರಿಯೋ ಘಟಕದ ಕಾರ್ಯದರ್ಶಿ ಮೌರಿಸ್‌ ಮೊಂತೇರೊ ವಂದಿಸಿದರು. ಪ್ರೊ| ಜಾನ್‌ ಡಿ’ಸಿಲ್ವಾ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English