ಬೀಚ್ ಉತ್ಸವ ಜನವರಿ 21, 22

10:14 PM, Monday, January 17th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಬೀಚ್ ಉತ್ಸವ ಮಂಗಳೂರು: ಕರಾವಳಿ ಉತ್ಸವ 2010-11ರ ಅಂಗವಾಗಿ ಇದೇ ತಿಂಗಳ 21, 22 ಮತ್ತು 23 ಈ ಮೂರು ದಿನಗಳಂದು ಪಣಂಬೂರು ಬೀಚ್ನಲ್ಲಿ ಬೀಚೋತ್ಸವವು ಜರಗಲಿರುವುದು ಎಂದು ಸಹಾಯಕ ಆಯುಕ್ತ  ಪ್ರಭುಲಿಂಗ ಕಾವಳಿಕಟ್ಟಿ ತಿಳಿಸಿದರು.
ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಬೀಚ್ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಅವರು ತಿಳಿಸಿದರು.
21ರಂದು ಸಂಜೆ 4 ಗಂಟೆಗೆ ಬೀಚ್ ಉತ್ಸವವನ್ನು ಮಾನ್ಯ ಮೇಯರ್ ರವರು ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 9 ಗಂಟೆಯಿಂದ ಬೀಚ್ ವಾಲಿಬಲ್ ಹಾಗೂ ತ್ರೋಬಾಲ್ ಪಂದ್ಯಾಟಗಳು ನಡೆಯಲಿದ್ದು ಅದೇ ದಿನ ಸಂಜೆ 6 ಗಂಟೆಗೆ ಆಯ್ದ 20 ತಂಡಗಳಿಂದ ನೃತ್ಯ ಸ್ಪರ್ದೆ ನಡೆಯಲಿದೆ. ಪ್ರತೀ ತಂಡಕ್ಕೆ 5000  ರೂಪಾಯಿಗಳನ್ನು ನೀಡಲಾಗುವುದು. ಇದರಲ್ಲಿ ಆಯ್ದ 2 ಉತ್ತಮ ತಂಡಗಳಿಗೆ 15,000 ರೂ ನಗದನ್ನು ಬಹುಮಾನವಾಗಿ ನೀಡಿ, ಆ ತಂಡಗಳನ್ನು ಬೀದರ್ ಉತ್ಸವದಲ್ಲಿ ಪಾಳ್ಗೊಳ್ಳಲು ಅವಕಾಶವನ್ನು ನೀಡಲಾಗುವುದು. ಟೀಮ್ ಮಂಗಳೂರು ಇವರಿಂದ ಆಕರ್ಷಕ ಗಾಳಿಪಟ ಪ್ರದರ್ಶನ ನಡೆಯಲಿರುವುದು. ಬೀಚ್ ಉತ್ಸವದ ಜೊತೆ ಆಹಾರ ಉತ್ಸವದ ಉದ್ಘಾಟನಾ ಕಾರ್ಯಕ್ರಮವು ನಡೆಯಲಿರುವುದು ಎಂದು ಕಾವಲಿಕಟ್ಟೆ ತಿಳಿಸಿದರು.
ದಿನಾಂಕ 23 ರಂದು ಶಾಲಾ ಮಕ್ಕಳಿಗೆ ಸ್ಕೇಟಿಂಗ್ ಸ್ಪರ್ದೆ, ಈಜು ಸ್ಪರ್ಧೆ, ನಾಡದೋಣಿ ಸ್ಪರ್ಧೆ, ಮರಳಲ್ಲಿ ಆಕೃತಿ ರಚನೆ ಸ್ಪರ್ಧೆ, ಶ್ರೀ ಪ್ರಸಾದ್ ಕಾರ್ಪಡೆ ಪೂಣೆ ಇವರಿಂದ ಉದಯರಾಗ ಕಾರ್ಯಕ್ರಮ ನಡೆಯಲಿದೆ. ಸಂಜೆ ಪ್ರಖ್ಯಾತ ಗಾಯಕರಾದ ಶ್ರಿ ರಾಜೇಶ್ ಕೃಷ್ಣನ್, ಶ್ರೀ ಗಣೇಶ್ ನಾರಾಯಣ್, ಗಾಯಕಿ ಕುಮಾರಿ ಚೈತ್ರ ಮತ್ತು ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿರುವುದು.
ಬೀಚೋತ್ಸವದಲ್ಲಿ ಸಿ ಸಿ ಟೀವಿಯನ್ನು ಅಳವಡಿಸಲಾಗುವುದು. ಕಳೆದ ಬಾರಿ ಬೀಚೋತ್ಸವದ ಸಮಯ ರಸ್ತೆ ದುರಾವಸ್ಥೆಯಾಗಿತ್ತು. ಈ ಸಲ 7, 8 ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು ವಿಶೇಷ ವಾಹನ ಪಾಸ್ಗಳನ್ನು ನೀಡಲಾಗುತ್ತದೆ. ಈ ಪಾಸ್ನ ಅವಧಿಯು ಮಧ್ಯಾಹ್ನ 2.30ರ ತನಕ ಸೀಮಿತ ಮಾಡಲಾಗಿದ್ದು, ಮಾಹಿತಿ ಕೇಂದ್ರ ಹಾಗೂ ಪೋಲಿಸ್ ಪಡೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಪ್ರಭುಳಿಂಗ ಕಾವಳಿಕಟ್ಟಿ ತಳಿಸಿದರು.
ಸುರೇಶ್ ಕುಮಾರ್, ಯತೀಶ್ ಬೈಕಂಪಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English