ಮಂಜೇಶ್ವರ : ಪತ್ರಿಕೆಗಳು ಸಮಾಜದ ಕಣ್ಣು , ಪತ್ರಕರ್ತರು ಸಮಾಜದ ಏಳಿಗೆಗಾಗಿ ಪ್ರತಿಭದ್ದವಾಗಿ ದುಡಿಯಬೇಕು ಮತ್ತು ಪತ್ರಿಕೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕೆಂದು ಹಿರಿಯ ಪತ್ರಕರ್ತ ಮಲಾರ್ ಜಯರಾಂ ರೈ ನುಡಿದಿದ್ದಾರೆ. ಅವರು ಮಂಜೇಶ್ವರ ಪ್ರೆಸ್ ಕ್ಲಬ್ ನ ನೂತನ ಕಛೇರಿಯನ್ನು ಉದ್ಗಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿನ ಕುಂದು ಕೊರತೆಗಳನ್ನು ಎತ್ತಿ ತೋರಿಸುವಲ್ಲಿ ಪತ್ರಕರ್ತರು ಮಾಡುವ ಕೆಲಸ ಪ್ರಶಂಸನಾರ್ಹ, ಈ ನಿಟ್ಟಿನಲ್ಲಿ ಯುವ ಪತ್ರಕರ್ತರು ಪತ್ರಿಕಾ ರಂಗಕ್ಕೆ ಬರುವುದು ಬಹಳ ಸಂತೋಷದ ವಿಷಯ ಎಂದರು.
ಸಭಾ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದ ಮಂಜೇಶ್ವರ ಶಾಸಕ ಪಿ.ಬಿ ಅಬ್ದುರ್ರಝ್ಝಾಕ್ ಆದುನಿಕ ಪತ್ರಿಕೆಗಳು ದೋಷಪೂರಿತ ವರದಿಗಳನ್ನು ಪ್ರಕಟಿಸುತ್ತಿದೆಯೆಂದರು. ಪ್ರೆಸ್ ಕ್ಲಬ್ ಅಧ್ಯಕ್ಷ ರೆಹ್ಮಾನ್ ಉದ್ಯಾವರ ಅಧ್ಯಕ್ಷತೆ ವಹಿಸಿದರು.
ಕಾಸರಗೋಡು ಜಿಲ್ಲಾ ವರ್ತಾಧಿಕಾರಿ ಅಬ್ದುಲ್ ರಹಿಮಾನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಮುಮ್ತಾಝ್ ಸಮೀರಾ, ಉಪಾಧ್ಯಕ್ಷ ಹರ್ಷಾದ್ ವರ್ಕಾಡಿ , ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷೆ ಆಯಿಶತ್ ತಾಹಿರಾ, ಪೈವಳಿಕೆ ಪಂಚಾಯತ್ ಅಧ್ಯಕ್ಷ ಮಣಿಕಂಠ ರೈ, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾರ್ಯದರ್ಶಿ ಬಿ.ಮೊಹಮ್ಮದ್ , ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುನಿತಾ ವಸಂತ್, ಮಂಜೇಶ್ವರ ಚರ್ಚ್ ಧರ್ಮಗುರು ರೆ| ಫಾ| ವಲೇರಿಯನ್ ಲೂಯಿಸ್, ವಿವಿಧ ಪಕ್ಷಗಳ ನೇತಾರರುಗಳಾದ ಡಿ.ಎಂ.ಕೆ ಮೊಹಮ್ಮದ್, ಬಿ.ವಿ ರಾಜನ್, ಕೆ.ಆರ್ ಜಯಾನಂದ, ಪತ್ರಕರ್ತರಾದ ಹನೀಸ್ ಉಪ್ಪಳ, ರವಿ ಪ್ರತಾಪ್ ನಗರ, ಸಾಯಿಬದ್ರ ರೈ , ಜಗದೀಶ್, ಸಲಾಂ ವರ್ಕಾಡಿ, ರತನ್ ಕುಮಾರ್ ಮತ್ತಿತರರು ಉಪಸ್ತಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿದರು. ರಾಜೇಶ್ ದಡ್ಡಂಗಡಿ ವಂದಿಸಿದರು.
Click this button or press Ctrl+G to toggle between Kannada and English