ಮಂಗಳೂರು : ‘ರಾಗತರಂಗ’ದ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ ಕಾರಂತರು (ಮಹಾಪ್ರಬಂಧಕರು – ಕರ್ನಾಟಕ ಬ್ಯಾಂಕ್) ಸೇವೆಯಿಂದ ನಿವೃತ್ತರಾದ ಶುಭ ಸಂದರ್ಭ ಅಭಿಮಾನಿಗಳೆಲ್ಲರೊಂದಾಗಿ ಗೌರವಿಸುವ ಸಮಾರಂಭ ಹಮ್ಮಿಕೊಂಡಿದ್ದರು. ಬೀಳ್ಕೂಡುಗೆ ಕಾರ್ಯಕ್ರಮ ಇತ್ತೀಚೆಗೆ ಎಸ್.ಡಿ.ಎಂ. ಕಾಲೇಜು ಸಭಾಂಗಣದಲ್ಲಿ ಕಾರ್ಯಕ್ರಮ ನೆರವೇರಿತು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ಡಾ. ದೇವರಾಜ ಕೆ. ಧರ್ಮದರ್ಶಿ ಹರಿಕೃಷ್ಣ ಪುನೂರೂರು, ಜನಾರ್ದನ ಹಂದೆ ಪಾಂಡುರಂಗ, ಸುರೇಂದ್ರ ಶೆಣೈ, ನಿತ್ಯಾನಂದ ಕಾರಂತ, ಪೂರ್ಣಿಮ, ಸೌಮ್ಯ – ಮುಂತಾದವರ ಸಮಕ್ಷಮ ಕಲ್ಕೂರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆದರ್ಶ ದಾಂಪತ್ಯ ಸಂಕೇತವಾಗಿ ಹಾರ, ಬಾಸಿಂಗ ತೊಡಿಸಿ, ಶೋಭನ ಹಾಡಿನೊಂದಿಗೆ ಬೆಳ್ಳಿ ಆರತಿ ಬೆಳಗಿ ಶುಭಕೋರಲಾಯಿತು.
Click this button or press Ctrl+G to toggle between Kannada and English