ಬಂಟ್ವಾಳ: ತೆಂಗು ಬೆಳೆಗಾರರು ಎಲ್ಲಾ ಒಂದಾದಾಗ ಮಾತ್ರ ಸರಕಾರದ ಸವಲತ್ತುಗಳನ್ನು ಪಡೆಯಲು ಸಾದ್ಯವಾಗುತ್ತದೆ, ಜೊತೆಗೆ ಸರಕಾರದ ಯೋಜನೆಗಳು ಕಾರ್ಯರೂಪಕ್ಕೆ ತರುವಲ್ಲಿಯೂ ಸಹಕಾರಿಯಾಗುತ್ತದೆ ಎಂದು ತೆಂಗು ಅಭಿವೃದ್ದಿ ಮಂಡಳಿ ನಿರ್ದೇಶಕ ಮ್ಯಾಥ್ಯೂ ಕುಟ್ಟಿ ಹೇಳಿದರು. ಅವರು ಕರ್ನಾಟಕ ರೈತ ಸಂಘ ಹಸಿರು ಸೇನೆ ಜಿಲ್ಲಾ ಸಮಿತಿ, ತೆಂಗು ಅಭಿವೃದ್ದಿ ಮಂಡಳಿ ಮತ್ತು ತೋಟಗಾರಿಕಾ ಇಲಾಖೆಯ ಜಂಟಿ ಅಶ್ರಯದಲ್ಲಿ ಬಿ.ಸಿ.ರೋಡ್ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ನಡೆದ ಸಮಗ್ರ ತೆಂಗು ಕೃಷಿಗೆ ತೆಂಗು ಅಭಿವೃದ್ದಿ ಮಂಡಳಿಯ ಯೋಜನೆಗಳು ಮತ್ತು ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳೆಗಾರರು ಸಂಘಗಳನ್ನು ಕಟ್ಟಿಕೊಂಡು ಸರಕಾರದ ಸವಲತ್ತುಗಳಿಗೆ ಮತ್ತು ಪರಿಹಾರಕ್ಕೆ ಹೋರಾಟಗಳನ್ನು ಮಾಡಿದಾಗ ಮಾತ್ರ ಸಮಸ್ಯೆಗಳು ಪರಿಹಾರಗೊಳ್ಳಬಹುದು ಎಂದು ಅವರು ಹೇಳಿದರು. ವೇದಿಕೆಯಲ್ಲಿ ತೆಂಗು ಅಭಿವೃದ್ದಿ ಮಂಡಳಿಯ ಅಭಿವೃದ್ದಿ ಅಧಿಕಾರಿ ಪ್ರಭಾಶಂಕರ್,ಸಿನಿ ತೋಟಗಾರಿಕಾ ಉಪನನಿರ್ದೇಶಕ ಯೋಗೇಶ್ ಹೆಚ್ ಆರ್, ಕೆ.ವಿ.ಕೆ ಯ ಮುಖ್ಯಸ್ಥ ಹನುಮಂತಪ್ಪ ಮತ್ತು ಸಂಘದ ಜಿಲ್ಲಾಧ್ಯಕ್ಷ ಶ್ರೀದರ್ ಸಂಘದ ಉಪಾಧ್ಯಕ್ಷ ಮುರುವ ಮಹಾಬಲ ಶೆಟ್ಟಿ ಹಸಿರು ಸೆನೆ ಕಾರ್ಯದರ್ಶಿ ಕುಮಾರ್ ಸುಬ್ರಹ್ಮಣ್ಯ ಶಾಸ್ತ್ರಿ ಉಪಸ್ಥಿತರಿದ್ದರು.
ಮನೋಹರ್ ಶೆಟ್ಟಿ ಸ್ವಾಗತಿಸಿದರು. ತೋಟಗಾರಿಕಾ ಅಧಿಕಾರಿ ಸಂಜೀವ ನ್ಯಾಕ್ ಪ್ರಸ್ತಾವಿಕವಾಗಿ ಮಾತನಾಡಿದರು. ನೋರ್ಬರ್ಟ ಮಥಾಯಿಸ್ ವಂದಿಸಿದರು
Click this button or press Ctrl+G to toggle between Kannada and English