ಆಶಾಲತಾ ನಾಪತ್ತೆ ಪ್ರಕರಣ: ಬಂಟ್ವಾಳ ಪೊಲೀಸರಿಗೆ ಅಭಿನಂದನೆ

7:00 PM, Friday, June 13th, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Bantwal Police

ಬಂಟ್ವಾಳ: ಪೋಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಕರಣವನ್ನು ಬೇಧಿಸುತ್ತಾರೆ, ಅವರಿಗೆ ಸಾರ್ವಜನಿಕರು ಕೂಡಾ ಸಹಾಯ ಮಾಡಬೇಕು ಎಂದು ಹಿಂದುಳಿದ ವರ್ಗ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ ಹೇಳಿದರು. ಅವರು ಬಂಟ್ವಾಳ ವೃತ್ತ ನಿರೀಕ್ಷಕ ಕಚೇರಿಯಲ್ಲಿ ಸರಪಾಡಿ ಅಪ್ರಾಪ್ತೆ ಆಶಾಲತಾ ನಾಪತ್ತೆ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳನ್ನು ಬಂಧಿಸಿದ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಗ್ರಾಮಾಂತರ ಠಾಣಾ ಉಪನೀರೀಕ್ಷಕ ನಾಗರಾಜ್ ಮತ್ತು ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಸಾಕಷ್ಟು ಉಹಾಪೋಹಗಳಿಗೆ ಕಾರಣವಾಗಿದ್ದ ಪ್ರಕರಣಕ್ಕೆ ಕೊನೆ ಸಿಕ್ಕಿದೆ. ಇಂತಹ ಪ್ರಕರಣವನ್ನು ಬೇಧಿಸಲು ಸದಾ ನಿಮ್ಮ ಜೊತೆ ಕೈಜೋಡಿಸಲು ತಯಾರಿದ್ದೇವೆ ಎಂದರು. ಈ ಸಂದರ್ಭ ಪ್ರಮುಖರಾದ ರೊನಾಲ್ಡ್ ಡಿ.ಸೋಜ, ಬಾಸ್ಕರ್ ಟೈಲರ್, ರಾಮ್ದಾಸ್ ಬಂಟ್ವಾಳ, ಚರಣ್ ಜುಮಾದಿಗುಡ್ಡೆ, ಗಣೇಶ್ ಮಾಣಿ, ಶ್ರೀನಿವಾಸ, ದನಂಜಯ ಶೆಟ್ಟಿ ಉಪಸ್ಥಿತರಿದ್ದರು.

Bantwal Police

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English