ಬಂಟ್ವಾಳ : ಒಳ್ಳೆಯ ಚಿಂತನೆಗಳು ಯೋಜನೆಗಳನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದೆಲ್ಲವೂ ದೇಶಕ್ಕೆ ಸಮರ್ಪಿತವಾದಾಗ ಅದರಿಂದ ನಮಗೂ ಒಳಿತೇ ಸಂಭವಿಸುತ್ತದೆ. ನಾವು ಯಾವುದೇ ವೃತ್ತಿಯಲ್ಲಿದ್ದರೆ ನಮ್ಮ ತನುಮನ ಧನ ದೇಶಕ್ಕೆ ಸಮರ್ಪಿತವಾದಾಗ ನಿಜವಾಗಿ ನಾವು ತೃಪ್ತರಾಗಲು ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ| ಪ್ರಭಾಕರ ಭಟ್ ಹೇಳಿದರು.
ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಆಗತ ಸ್ವಾಗತ’ ಇದರಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಾ, ಪರೀಕ್ಷೆ ,ಅಂಕಗಳು ವಿದ್ಯಾಭ್ಯಾಸದ ಒಂದು ಭಾಗವಾದರೆ , ಇನ್ನೊಂದು ಬದಿಯಲ್ಲಿ ವಿದ್ಯಾರ್ಥಿಗಳು ನಿಸ್ವಾರ್ಥವಾಗಿ ಸಮಾಜ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಇಂಡೋ-ಆರ್ಯ ಸಾರಿಗೆ ವ್ಯವಸ್ಥೆಯ ವ್ಯವಸ್ಥಾಪನಾ ಅಧಿಕಾರಿ ಶ್ರೀ ನರೇಶ್ ಶರ್ಮಾ, ‘ಉತ್ತಮ ಚಿಂತನ, ಉತ್ತಮ ಕಾರ್ಯಗಳು ನಿರಂತರವಗಿ ನಡೆಯುತ್ತಿರಲಿ. ಆ ಮೂಲಕ ಸಮಾಜಕ್ಕೆ ದೇಶಕ್ಕೆ ಒಳಿತಾಗಲಿ’ ಎಂದು ಹೇಳಿದರು.
ಸಂಸ್ಥೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರುಗಳಿಗೆ ಹೋಮಕುಂಡಕ್ಕೆ ಹವಿಸ್ಸನ್ನು ಅರ್ಪಿಸಿ, ಹಿರಿಯರು ತಿಲಕಧಾರಣೆ ಮಾಡಿ ಭಾರತ ಮಾತೆಗೆ ಪುಷ್ಪಾರ್ಚನೆ ಮಡುವ ಮೂಲಕ ಅವರನ್ನು ಬರಮಾಡಿಕೊಳ್ಳಲಯಿತು.
ಸಂಸ್ಥೆಯ ಅಧ್ಯಕ್ಷ ನಾರಾಯಣ ಸೋಮಯಾಜಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಇಂಡೋ-ಆರ್ಯ ಸಾರಿಗೆ ವ್ಯವಸ್ಥೆಯ ವ್ಯವಸ್ಥಾಪನಾ ಅಧಿಕಾರಿ ಶ್ರೀ ಹೆಚ್ ಕೃಷ್ಣಾ ಹಾಗು ಪಧ್ಮನಾಭ ಟಿ.ಕೆ, ವಿ ಪದ್ಮಿನಿ ರಾಮ್ ಭಟ್ ಉಪಸ್ಥಿತರಿದ್ದರು. ಉಪಪ್ರಾಚಾರ್ಯ ವಸಂತ ಬಲ್ಲಾಳ್ ಸ್ವಾಗತಿಸಿ, ಜೀವಶಾಸ್ತ್ರ ಉಪನ್ಯಾಸಕಿ ಕುಮಾರ ಶೈಲಿನಿ ವಂದಿಸಿದ ಕಾರ್ಯಕ್ರಮವನ್ನು ಶ್ರೀಮತಿ ಶೋಭಾ ನಿರೂಪಿಸಿದರು.
Click this button or press Ctrl+G to toggle between Kannada and English