ಮಂಗಳೂರು : ನಗರದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಇನ್ಸ್ಪಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಸುಬಿನ್ ಡಿ ತಂಬಿ ಹಾಗೂ ಅನಜು ಐಸಾಕ್ ಇವರು, ಪ್ರೋ. ಪಿ. ರಮೇಶ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ವಿಶಿಷ್ಟ ರೀತಿಯ ಆಧುನಿಕ ದ್ವಿಚಕ್ರ ವಾಹನ ‘ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್’ವನ್ನು ನಿರ್ಮಿಸುವ ಮೂಲಕ ದ್ವಿಚಕ್ರ ವಾಹನಗಳ ಯುಗದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ್ದಾರೆ. ಈ ದ್ವಿಚಕ್ರ ವಾಹನದಲ್ಲಿ ಗ್ರಾಹಕರಿಗೆ ಎರಡು ಆಯ್ಕೆಗಳಿದ್ದು, ಇದು ಪೆಟ್ರೋಲ್ ಅಥವಾ ಬ್ಯಾಟರಿ ಚಾಲಿತ ಯಂತ್ರಗಳ ಸಹಾಯದಿಂದ ಚಲಿಸಬಲ್ಲುದು. ಇದರ ಮುಂದಿನ ಚಕ್ರಕ್ಕೆ ಬ್ಯಾಟರಿ ಚಾಲಿತ ವಿದ್ಯುನ್ಮಾನ ಮೋಟಾರ್ಗಳನ್ನು ಅಳವಡಿಸಲಾಗಿದ್ದು, ಇದು ಪೆಟ್ರೋಲ್ ಮುಗಿದರೂ ವಿದ್ಯುನ್ಮಾನ ಯಂತ್ರದ ಸಹಾಯದ ಮೂಲಕ ಚಲಾಯಿಸಬಹುದಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಮತ್ತು ಬ್ಯಾಟರಿ ಚಾಲಿತ ವಿದ್ಯುನ್ಮಾನ ಶಕ್ತಿ ಇವೆರಡನ್ನು ಉಪಯೋಗಿಸಿಕೊಂಡರೆ ಸಾಮಾನ್ಯ ದ್ವಿಚಕ್ರ ವಾಹನಗಳಿಗಿಂತ ಅಧಿಕ ಶಕ್ತಿ ಮತ್ತು ಲಾಭವನ್ನು ಪಡೆಯಬಹುದು.
ಸಾಮಾನ್ಯ ದ್ವಿಚಕ್ರ ವಾಹನದ ಹಿಂದಿನ ಚಕ್ರಕ್ಕೆ ಮಾತ್ರ ಯಾಂತ್ರಿಕ ಚಲನಾ ಶಕ್ತಿಯನ್ನು ಅಳವಡಿಸಲಾಗುತ್ತದೆ, ಆದರೆ ಈ ಹೈಬ್ರಿಡ್ ಬೈಕ್ನ ಎರಡು ಚಕ್ರಗಳಿಗೂ ಚಲನಾ ಶಕ್ತಿಯನ್ನು ಅಳವಡಿಸಲಾಗಿದ್ದು ಮುಂದಿನ ಚಕ್ರಕ್ಕೆ ಅಳವಡಿಸಿದ ವಿದ್ಯುನ್ಮಾನ ಮೋಟಾರ್ನಿಂದಾಗಿ ದುರ್ಗಮದ ಹಾದಿಯಲ್ಲಿಯೂ ಸವಾರರು ಯಾವುದೇ ಅಡಚಣೆ ಇಲ್ಲದೆ ಸುಲಭವಾಗಿ ಸಾಗಲು ಸಹಾಯಕವಾಗಿದೆ. ಈ ದ್ವಿಚಕ್ರ ವಾಹನ ಚಲಿಸುವ ಸಂದರ್ಭದಲ್ಲಿ ಮುಂದಿನ ಚಕ್ರಕ್ಕೆ ಅಳವಡಿಸಿದ ಮೋಟರ್ನ ಸಹಾಯದಿಂದ ಬ್ಯಾಟರಿಗೆ ಬೇಕಾದ ವಿದ್ಯುತ್ ಪೂರೈಸಲ್ಪಡುತ್ತದೆ. ಇದು ಅಟೊಮೊಬೈಲ್ ಇಂಡಸ್ಟ್ರಿಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಪೆಟ್ರೋಲ್ ದರ ಗಗನಕ್ಕೆ ಏರುತ್ತಿರುವ ಈ ಸಮಯದಲ್ಲಿ ಪೆಟ್ರೋಲ್ ಹಾಗೂ ವಿದ್ಯುತ್ ಚಾಲಿತ ‘ಹೈಬ್ರಿಡ್ ಬೈಕ್ ವಿದ್ ಟು ವೀಲ್ ಡ್ರೈವ್’ ವಾಹನವು ಗ್ರಾಹಕರಿಗೆ ಹೆಚ್ಚು ಲಾಭದಾಯಕವಾಗಬಹುದು.
ಈ ವಾಹನದ ವಿಶೇಷತೆಗಳು:-
ಮುಂದಿನ ಚಕ್ರಕ್ಕೆ ವಿದ್ಯುನ್ಮಾನ ಚಲನಶಕ್ತಿ.:
ಈ ವಾಹನದಲ್ಲಿ ಮುಂದಿನ ಚಕ್ರಕ್ಕೆ ವಿದ್ಯುನ್ಮಾನ ಮೋಟಾರನ್ನು ಅಳವಡಿಸಲಾಗಿದ್ದು ಇದಕ್ಕೆ ಬೇಕಾದ ವಿದ್ಯುತ್ತನ್ನು ಬ್ಯಾಟರಿಯ ಮುಖಾಂತರ ಪೂರೈಸಲಾಗುತ್ತದೆ, ಹಾಗೂ ವಾಹನ ಚಲಿಸುವಾಗ ಬ್ಯಾಟರಿಯು ತನ್ನಷ್ಟಕ್ಕೆ ತಾನೇ ಚಾಜರ್್ ಆಗುವ ವ್ಯವಸ್ಥೆಯನ್ನು ಅಳವಡಿಲಾಗಿದೆ.
ತ ಚಲನ ಶಕ್ತಿಯ ಪರಿಪೂರ್ಣ ಬಳಕೆ :-
ಸವಾರ ಆತನ ಅನೂಕೂಲಕ್ಕನುಗುಣವಾಗಿ ಎರಡು ವ್ಯವಸ್ಥೆಗಳನ್ನು ಉಪಯೋಗಿಸಬಹುದು. ಪೆಟ್ರೋಲ್ ಮುಗಿದರೂ ಬ್ಯಾಟರಿಯ ಸಹಾಯದಿಂದ ಚಲಾಯಿಸಬಹುದು. ಎತ್ತರದ ಪ್ರದೇಶಗಳಲ್ಲಿ ಸ್ಥಿರ ವೇಗವನ್ನು ಕಾಪಾಡಲು ಈ ಪ್ರಯತ್ನ ಸಹಕಾರಿಯಾಗಿರುವುದು.
ತ ಪರಿಸರ ಸ್ನೇಹಿ ಹಾಗೂ ಮಿತವ್ಯಯ :-
ಬ್ಯಾಟರಿ ಚಾರ್ಜ್ ಮಾಡಲು ಮೂರು ಯೂನಿಟ್ಗಳ ಅವಶ್ಯಕತೆ ಇದ್ದು, ಈ ಮೂರು ಯೂನಿಟ್ಗಳಿಗೆ ತಗಲುವ ವೆಚ್ಚ ಹತ್ತು ರೂಪಾಯಿಗಳು. ಈ ವೆಚ್ಚದಲ್ಲಿ 45 ಕಿ.ಮೀ. ದೂರವನ್ನು ಕ್ರಮಿಸಬಹುದಾಗಿದೆ ಹಾಗೂ ವಾಯುಮಾಲಿನ್ಯದ ಸಮಸ್ಯೆಯೂ ಇರುವುದಿಲ್ಲ. ಏರು ಇಳಿತಗಳ ಮತ್ತು ತುಂಬಾ ಟ್ರಾಫಿಕ್ ಇರುವ ಸಂದರ್ಭದಲ್ಲಿ ಅಧಿಕ ಪೆಟ್ರೋಲ್ ವ್ಯತ್ಯಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಬ್ಯಾಟರಿ ಮೋಡ್ಗೆ ಬದಲಾಯಿಸಿಕೊಂಡು ಪೆಟ್ರೋಲ್ ವೆಚ್ಚವನ್ನು ಉಳಿಸಿಕೊಳ್ಳಬಹುದು.
ವಿದ್ಯಾರ್ಥಿಗಳ ಈ ಅಪೂರ್ವ ಸಾಧನೆಗೆ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್. ಎಜ್ಯುಕೇಶನ್ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷರಾದ ಶ್ರೀ ಎಸ್. ಗಣೇಶ್ ರಾವ್ರವರು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ಆರ್.ಕೆ. ಭಟ್ ಅವರು ಅಭಿನಂದಿಸಿ ಶುಭ ಹಾರೈಸಿದರು.
Click this button or press Ctrl+G to toggle between Kannada and English