ಮಂಗಳೂರು : ನಗರದ ಕೊಟ್ಟಾರ ಚೌಕಿ ಸಮೀಪದಲ್ಲಿರುವ ಅಂತರಾಷ್ಟ್ರೀಯ ಖ್ಯಾತಿಯ ಪ್ರತಿಷ್ಠಿತ ಕರಾವಳಿ ಕಾಲೇಜಿಗೆ ಎಪ್ರಿಲ್ 2014ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಅಂತಿಮ ವರ್ಷ (6ನೇ ಸೆಮಿಸ್ಟರ್) ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿರುತ್ತದೆ. ಈ ವಿಶೇಷ ಸಾಧನೆಗಾಗಿ ಕಾಲೇಜಿನ ವಿದ್ಯಾರ್ಥಿ ವೃಂದ ಮತ್ತು ಅಧ್ಯಾಪಕ ವೃಂದವನ್ನು ಕಾಲೇಜಿನ ಆಡಳಿತ ಮಂಡಳಿ ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಅಧ್ಯಕ್ಷರಾಗಿರುವ ಶ್ರೀ ಎಸ್. ಗಣೇಶ್ ರಾವ್ ಇವರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಕರಾವಳಿ ಕಾಲೇಜಿನ ಬಹತೇಕ ಹೆಚ್ಚಿನ ಎಲ್ಲಾ ಕೋರ್ಸ್ಗಳ ಅಂತಿಮ ವರ್ಷದಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಾಗುತ್ತಿದ್ದು, ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ಆಡಳಿತ ಮಂಡಳಿ, ಅಧ್ಯಾಪಕ ವೃಂದದ ಬದ್ಧತೆ ಮತ್ತು ಶಿಸ್ತಿಗೆ ಸಾಕ್ಷಿಯಾಗಿದೆ ಹಾಗೂ ಕೋರ್ಸ್ ಮುಗಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶೇಕಡಾ 100 ಉದ್ಯೋಗಾವಕಾಶ ದೊರಕಿರುವುದು ಕಾಲೇಜಿನ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದಿದ್ದಾರೆ.
ಕರಾವಳಿ ಕಾಲೇಜು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಳಪಟ್ಟ ಎಮ್.ಎಸ್ ಡಬ್ಲ್ಯೂ, ಬಿ.ಎಸ್ಸಿ ಇಂಟೀರಿಯರ್ ಡಿಸೈನ್, ಬಿ.ಎಸ್ಸಿ. ಫ್ಯಾಶನ್ ಡಿಸೈನ್, ಬಿ.ಸಿ.ಎ, ಬಿ.ಬಿ.ಎಂ, ಬಿ.ಕಾಂ, ಬಿ.ಎಸ್ಸಿ. ಆ್ಯನಿಮೇಷನ್, ಬಿ.ಎಸ್ಸಿ ಹಾಸ್ಪಿಟಾಲಿಟಿ ಸೈನ್ಸ್, ಎಮ್.ಬಿ.ಎ, ಬ್ಯಾಚುಲರ್ ಇನ್ ಹೋಟೇಲ್ ಮ್ಯಾನೇಜ್ಮೆಂಟ್ (ಬಿ.ಎಚ್.ಎಂ), (ಬಿ.ಎಚ್.ಎಸ್) ಮತ್ತು ಬಿ.ಎಡ್ ಪದವಿ, ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಬಿ.ಎಸ್ಸಿ ನರ್ಸ್ಸಿಂಗ್, ಎಮ್.ಎಸ್ಸಿ. ನರ್ಸ್ಸಿಂಗ್, ಪೋಸ್ಟ್ ಬಿ.ಎಸ್ಸಿ, ನರ್ಸ್ಸಿಂಗ್, ಬಿ.ಫಾರ್ಮ, ಎಮ್ ಫಾರ್ಮ, ಪಾರ್ಮಾ ಡಿ, ಪೋಸ್ಟ್ ಬಾಕ್ಯುಲರೇಟ್ ಫಾರ್ಮ ಡಿ ಪದವಿಗಳನ್ನು ಮತ್ತು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ, ಎಮ್-ಟೆಕ್ ಕನ್ಸ್ಟ್ರಕ್ಷನ್ ಟೆಕ್ನಾಲಜಿ, ಎಮ್-ಟೆಕ್ ಇಂಡಸ್ಟ್ರಿಯಲ್ ಆಟೋಮೆಷನ್ ಎಂಡ್ ರೋಬೋಟಿಕ್ಸ್, ಎಮ್-ಟೆಕ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಎಮ್-ಟೆಕ್ ಮೆಷಿನ್ ಡಿಸೈನ್ ಎಂ.ಬಿ.ಎ, ಬಿ.ಇ ಏರೋನಾಟಿಕಲ್, ಬಿ.ಇ. ಇನ್ಪಾರ್ಮೇಶನ್ ಸೈನ್ಸ್ ಆಂಡ್ ಇಂಜಿನಿಯರಿಂಗ್, ಬಿ.ಇ. ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಬಿ.ಇ. ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್, ಬಿ.ಇ. ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್, ಬಿ.ಇ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮತ್ತು ಬಿ.ಇ. ಸಿವಿಲ್ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಏರೋನಾಟಿಕಲ್, ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಇಲೆಕ್ಟ್ರಾನಿಕ್ಸ್, ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಮೆಕ್ಯಾನಿಕಲ್, ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಸಿವಿಲ್, ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ ಮತ್ತು ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಆಟೋಮೊಬೈಲ್ ಕೋರ್ಸ್ಗಳನ್ನು ನಡೆಸುತ್ತಿದೆ.
Click this button or press Ctrl+G to toggle between Kannada and English