ಬಂಟ್ವಾಳ: ಇಂದು ಶಿಕ್ಷಣ ಎನ್ನುವುದು ಕೇವಲ ಮಾಹಿತಿ ನೀಡಲಷ್ಟೇ ಸೀಮಿತವಾಗುತ್ತಿದೆ. ಸಾಕ್ಷರರ ಹೆಸರಿನಲ್ಲಿ ಅದರ ತದ್ವಿರುದ್ದ ರೂಪ ರಾಕ್ಷಸರನ್ನು ಸೃಷಿಸಲಾಗುತ್ತಿದೆ ಎಂದು ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ.ಪ್ರಭಾಕರ ಭಟ್ ಹೇಳಿದರು.
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಹಬಾಗಿತ್ವದೊಂದಿಗೆ ಬಿ.ಸಿ.ರೋಡಿನ ಅಜ್ಜಿಬೆಟ್ಟುವಿನಲ್ಲಿರುವ ಶ್ರೀ ಅಕ್ಕಮಹಾದೇವಿ ಶಿಶುಮಂದಿರದಲ್ಲಿ ಉಚಿತ ಮಧ್ಯಾಹ್ನದ ಭೋಜನ ವ್ಯವಸ್ಥೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಿಂದಲೇ ಮಕ್ಕಳಿಗೆ ಸಂಸ್ಕಾರಯುತವಾದ ಶಿಕ್ಷಣ ದೊರೆಯಬೇಕು. ಅಂತಹ ಶಿಕ್ಷಣ ಶಿಶುಮಂದಿರಗಳಿಂದ ಕೊಡಿಸಲಾಗುತ್ತಿದೆ. ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಿಶುಮಂದಿರಗಳಿಗೆ ಕಳುಹಿಸುತ್ತಿದ್ದೇವೆ ಎನ್ನುವ ಕೀಳರಿಮೆ ಬಿಟ್ಟು ಈ ದೇಶಕ್ಕೆ ಸಂಸ್ಕಾರಯುತವಾದ ಪ್ರಜೆಯನ್ನು ನೀಡಲು ಶಿಶುಮಂದಿರದಲ್ಲಿ ಶಿಕ್ಷಣ ಕೊಡಿಸುತ್ತಿದ್ದೇವೆ ಎನ್ನುವ ಹೆಮ್ಮೆ ಮಕ್ಕಳ ಪೋಷಕರಲ್ಲಿ ಬೇಕು ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಡಾ.ಕಮಲಾ ಪ್ರಭಾಕರ ಭಟ್, ಅಕ್ಕಮಹಾದೇವಿ ಶಿಶುಮಂದಿರದ ಗೌರವ ಅಧ್ಯಕ್ಷ ಮೋಹನ ಅಗ್ರಬೈಲು, ಅಧ್ಯಕ್ಷ ಪ್ರಮೋದ್ ಕುಮಾರ್ ವೇದಿಕೆಯಲ್ಲಿದ್ದರು. ವ್ಯವಸ್ಥಾಪಲ ಲಕ್ಷ್ಮಣ ಅಗ್ರಬೈಲು ಸಹಕರಿಸಿದರು. ಆಶಾ ಪ್ರಸಾದ್ ಕುಮಾರ್ ಸ್ವಾಗತಿಸಿದರು. ವೀಣಾ ವಂದಿಸಿದರು
Click this button or press Ctrl+G to toggle between Kannada and English