ನ್ಯಾಯದ ನಿರೀಕ್ಷೆ ಮೂಡಿದೆ : ಮುನೀರ್ ಕಾಟಿಪಳ್ಳ

8:22 PM, Wednesday, July 2nd, 2014
Share
1 Star2 Stars3 Stars4 Stars5 Stars
(5 rating, 4 votes)
Loading...
Muneer Katipalla

ಮಂಗಳೂರು : ಎರಡು ತಿಂಗಳ ನಿರಂತರ ಹೋರಾಟದ ನಂತರ ಸರಕಾರ ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಮರು ತನಿಖೆಗೆ ಆದೇಶಿಸಿದೆ. ಸರಕಾರದ ಈ ನಿರ್ಧಾರದಿಂದ ಪ್ರಕರಣದಲ್ಲಿ ನ್ಯಾಯದ ನಿರೀಕ್ಷೆ ಮೂಡಿದೆ ಎಂದು ಆಙಈ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳು ಎಂದು ಮಲ್ಲೂರು ಗ್ರಾಮದ ಹುಸೈನ್, ಇಮ್ರಾನ್, ಇರ್ಷಾದ್ ಎಂಬ ಅಮಾಯಕ ಯುವಕರ ಬಂಧನವಾದಾಗಲೇ ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಕಂಡು ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಆನಂತರ ನಿರಂತರವಾಗಿ ಹೋರಾಟಗಳನ್ನು ನಡೆಸಿ ಮರು ತನಿಖೆಗೆ ಒತ್ತಾಯಿಸಲಾಗಿತ್ತು. ಈಗ ಹೋರಾಟದ ತೀವ್ರತೆಗೆ ಮಣಿದು ಸರಕಾರ ತಡವಾಗಿಯಾದರೂ ಅಆ ತನಿಖೆಗೆ ಆದೇಶಿಸಿರುವುದು ಸ್ವಾಗತಾರ್ಹ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಈ ಪ್ರಕರಣ ತೀರಾ ಸೂಕ್ಷ್ಮವಾಗಿರುವುದರಿಂದ ಕೇವಲ ಕಾಟಾಚಾರದ ಅಆ ತನಿಖೆ ನಡೆದರಷ್ಟೇ ಸಾಲದು ಅಲ್ಲಿರುವ ದಕ್ಷ ಅಧಿಕಾರಿಗಳ ತಂಡಕ್ಕೆ ತನಿಖೆಯ ಹೊಣೆಯನ್ನು ವಹಿಸಬೇಕು ಹಾಗೂ ಅಮಾಯಕರ ಬಿಡುಗಡೆಯ ಜೊತೆಗೆ ನೈಜ ಕೊಲೆಗಾರರ ಬಂಧನವೂ ನಡೆದು ಕಾಲಮಿತಿಯ ಒಳಗಡೆ ತನಿಖೆ ಪೂರ್ಣಗೊಳ್ಳುವಂತೆ ಸರಕಾರ ನಿಗಾ ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English