ಮಂಗಳೂರು: ಮಂಗಳೂರು ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಗರದ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ 33/11 ಕೆ.ವಿ ವಿತರಣಾ ಕೇಂದ್ರಗಳ ಚಾಲನೆಗೊಲಿಸುವ ಮೂಲಕ ಶೋಭಾಕರಂದ್ಲಾಜೆ ಉದ್ಘಾಟನೆ ನಡೆಸಿದರು.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಕುದ್ರೋಳಿ ಹಾಗೂ ನಂದಿಗುಡ್ಡದಲ್ಲಿ ನೂತನವಾಗಿ 33/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲಾಗಿದ್ದು. ಮಂಗಳೂರು ಮಹಾನಗರ ವ್ಯಾಪ್ತಿಯ ಗ್ರಾಗಕರಿಗೆ ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಲು ಅನುಕೂಲವಾಗುವಂತೆ ಸ್ಥಾಪಿತವಾಗಿರುವ ಈ ನೂತನ ವಿದ್ಯುತ್ ಉಪಕೇಂದ್ರಗಳಾದ ಕುದ್ರೋಳಿಯಲ್ಲಿ 5 ಎಮ್. ವಿ. ಎ ಸಾಮಥ್ರ್ಯದ ಎರಡು ಪವರ್ ಟ್ರಾನ್ಸ್ಫಾರ್ಮರ್ಗಳನ್ನು ಹಾಗೂ ನಂದಿಗುಡ್ಡದಲ್ಲಿ ಒಂದು ಪವರ್ ಟ್ರಾನ್ಸ್ ಫಾರ್ಮರ್ಗಳನ್ನು ಅಳವಡಿಸಲಾಗಿದೆ.
ಉದ್ಘಾಟನೆಯ ನಂತರ ಮಾತನಾಡಿದ ಶೋಭಾಕರಂದ್ಲಾಜೆಯವರು ಮಂಗಳೂರಿನ ವೋಲ್ಟೇಜ್ ಸಮಸ್ಯೆಯನ್ನು ತೆಗೆದುಹಾಕಿ ಶಾಶ್ವತವಾಗಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಇದನ್ನು ಆರಂಬಿಸಿದ್ದೇವೆ. ಬೇಸಿಗೆ ಕಾಲದಲ್ಲಿ ಪೂರ್ಣವಾಗಿ ವಿದ್ಯುಚ್ಛಕ್ತಿ ಪೂರೈಸಲು ಬೇಕಾಗುವಷ್ಟು ನೀರನ್ನು ಸಂಗ್ರಹಿಸಿದ್ದೇವೆ. ರೈತರಿಗೆೆ ರಾತ್ರಿಯ ಹೊತ್ತಿನಲ್ಲಿ ವಿದ್ಯುತ್ ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕನರ್ಾಟಕ ವಿದ್ಯುತ್ ಸರಬರಾಜಿನಲ್ಲಿ ಸ್ವಾವಲಂಬಿಯಾಗಬೇಕು. ಹೊಸ ತಂತ್ರಜ್ಞಾನವನ್ನು ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ತರಲಾಗುವುದು. 8 ಘಟಕಗಳಲ್ಲಿ 1500 ಎಮ್.ವಿ.ಎ (ಮೆಗಾವ್ಯಾಟ್) ವಿದ್ಯುತ್ಚ್ಚಕ್ತಿ ಉತ್ಪತ್ತಿ ಮಾಡಿದ್ದೇವೆ. ಮಂಗಳೂರು ಗುಣಮಟ್ಟದ ವಿದ್ಯುತ್ ಹೊಂದಬೇಕು. ರೈತರು ಸ್ಟಾರ್ ಮಾಕರ್್ ಇರುವ ಪಂಪ್ಸೆಟ್ನ್ನು ಬಳಸಬೇಕು. ಕಡಿಮೆ ವಿದ್ಯುತ್ ಹೀರಿಕೆಯ ಬಲ್ಬ್ ಬಳಸಬೇಕು. ಇದರಿಂದ ವಿದ್ಯುಚ್ಛಕ್ತಿಯನ್ನು ಉಳಿಸಬಹುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದರು. ಪರಿಸರಕ್ಕೆ ಹಾನಿಮಾಡದೆ ವಿದ್ಯುತ್ ಉತ್ಪಾದಿಸುವುದರ ಬಗ್ಗೆ ಸರಕಾರ ಗಮನಹರಿಸುತ್ತಿದೆ ಎಂದು ಅವರು ಹೇಳಿದರು.
ಉಸ್ತುವಾರಿ ಸಚಿವ ಶ್ರೀ ಕೃಷ್ಣ ಜೆ. ಪಾಲೆಮಾರ್, ಮೇಯರ್ ಶ್ರೀ ರಜನಿ ದುಗ್ಗಣ್ಣ, ಯೋಗೀಶ್ ಭಟ್, ಗಣೇಶ್ ಕಾಣರ್ಿಕ್, ಶ್ರೀ ನಾಗರಾಜ ಶೆಟ್ಟಿ, ನಿತಿನ್ ಕುಮಾರ್, ಯು.ಟಿ. ಖಾದರ್, ಸಂತೋಷ್ ಕುಮಾರ್ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English