ಕಟೀಲು ಸೀಯಾಳಭಿಷೇಕ ವಿವಾದ ಅತ್ತೂರು, ಕೊಡೆತ್ತೂರು ಗ್ರಾಮಸ್ಥರಿಂದ ಪ್ರತಿಭಟನೆ ಎಚ್ಚರಿಕೆ

9:00 PM, Wednesday, July 2nd, 2014
Share
1 Star2 Stars3 Stars4 Stars5 Stars
(4 rating, 5 votes)
Loading...
Kateel coconut

ಮೂಲ್ಕಿ: ಕಟೀಲು ಕಿನ್ನಿಗೋಳಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕಟೀಲು ದೇವಳದಲ್ಲಿ ನಡೆಯುತ್ತಿದ್ದ ಸೀಯಾಳಭಿಷೇಕ ಕುರಿತು ಪರಂಪರಾಗತವಾಗಿ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಅರ್ಚಕರು ಆಸ್ಪದ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಶೀಘ್ರ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶಾಸಕರು, ಸಂಸದರಿಗೆ ಮನವಿ ಸಲ್ಲಿಸಲು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಗ್ರಾಮಸ್ಥರ ಆಶಯವನ್ನು ಪುರಸ್ಕರಿಸುವಂತೆ ಮಾಡಬೇಕು. ತಪ್ಪಿದಲ್ಲಿ ಗ್ರಾಮದ ವೈದಿಕರಿಂದ ದಿನ ನಿರ್ಣಯಿಸಿ, ಗ್ರಾಮಸ್ಥರು ಸೇರಿ ದೇವಳಕ್ಕೆ ಬಂದು ಭಜನಾ ಸಂಕೀರ್ತನೆ ನಡೆಸುವ ಮೂಲಕ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಅತ್ತೂರು ಮತ್ತು ಕೊಡೆತ್ತೂರು ಗ್ರಾಮಸ್ಥರು ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜೂನ್ ತಿಂಗಳಲ್ಲಿ ಕಟೀಲು ದೇವರಿಗೆ ನಡೆಯುವ ಸೀಯಾಳಭಿಷೇಕಕ್ಕೆ ಅತ್ತೂರು, ಕೊಡೆತ್ತೂರು ಗ್ರಾಮಸ್ಥರು ಮೆರವಣಿಗೆ ಮೂಲಕ ಸೀಯಾಳಗಳನ್ನು ತಂದು ಅವರ ಉಪಸ್ಥಿತಿಯಲ್ಲಿ ದೇವರಿಗೆ ಅಭಿಷೇಕ ನಡೆಸುವುದು ಪದ್ಧತಿಯಾಗಿತ್ತು. ಆದರೆ, ಇದೀಗ ಅಷ್ಟಮಂಗಲ ಪ್ರಶ್ನೆಯ ನೆಪವೊಡ್ಡಿ ಪರಂಪರಾಗತವಾಗಿ ಬಂದ ಗ್ರಾಮದ ಸಂಪ್ರದಾಯವನ್ನು, ಗ್ರಾಮಸ್ಥರ ಕೋರಿಕೆಯನ್ನು ದೇವಳದ ಆಡಳಿತಾಧಿಕಾರಿ ಹಾಗೂ ಅರ್ಚಕರು ವಿರೋಧಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೊಡೆತ್ತೂರು ದೇವಿ ಪ್ರಸಾದ್ ಶೆಟ್ಟಿ, ಭುವನಾಭಿರಾಮ ಉಡುಪ, ದೇವಿ ಪ್ರಸಾದ್ ಶೆಟ್ಟಿ ಮಾತನಾಡಿದರು. ಅತ್ತೂರು ಗುತ್ತು ಪ್ರಸನ್ನ ಶೆಟ್ಟಿ, ಕೊಡೆತ್ತೂರು ಬಾಬುಶೆಟ್ಟಿ, ಕೆ. ಪುರುಷೋತ್ತಮ ಶೆಟ್ಟಿ, ಈಶ್ವರ ಕಟೀಲು, ಬೇಬಿ ಕೋಟ್ಯಾನ್, ಕಾವರ ಮನೆ ನಿತಿನ್ ಹೆಗ್ಡೆ, ಕೊಡೆತ್ತೂರು ಗುತ್ತು, ರಮನಾಥ ಶೆಟ್ಟಿ ಅತ್ತೂರು, ಶ್ರೀಧರ ಶೆಟ್ಟಿ ಕೊಡೆತ್ತೂರು ಹಾಗೂ ಅತ್ತೂರು, ಕೊಡೆತ್ತೂರು ಮತ್ತು ಎಕ್ಕಾರು ಗ್ರಾಮಸ್ಥರು ಇದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English