ಪತ್ರಿಕಾ ದಿನಾಚರಣೆ ರೋನ್ಸ್ ಬಂಟ್ವಾಳ್ ಗೆ ದಶಮಾನದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ

9:14 PM, Thursday, July 3rd, 2014
Share
1 Star2 Stars3 Stars4 Stars5 Stars
(4 rating, 5 votes)
Loading...
Press Day

ಮುಂಬಯಿ: ಪತ್ರಕರ್ತರ ವೇದಿಕೆ ಬೆಂಗಳೂರು, ಕರ್ನಾಟಕ ಮೀಡಿಯಾ ಮತ್ತು ನ್ಯೂಸ್ ಸೆಂಟರ್ ಇವರ ವತಿಯಿಂದ ಕಳೆದ ಮಂಗಳವಾರ ಸಂಜೆ ಪತ್ರಿಕಾ ದಿನಾಚರಣೆ-2014 ಸಂಭ್ರಮಿಸಲಾಗಿದ್ದು, ಇದೇ ಸಂದರ್ಭದಲ್ಲಿ ದಶಮಾನದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಲಾಯಿತು.

ಕರ್ನಾಟಕ ರಾಜಧಾನಿಯಲ್ಲಿನ ಬೆಂಗಳೂರು ಕನ್ನಡ ಭವನದ ನಯನ ಸಭಾಂಗಣದಲ್ಲಿ ನೇರವೇರಿಸಲಾಗಿದ್ದು, ಹಿರಿಯ ಪತ್ರಕರ್ತ ಕೆ.ಜಿ.ನಾಗಲಕ್ಷ್ಮೀ ಭಾಯಿ ಅವರ ಅಧ್ಯಕ್ಷತೆಯಲ್ಲಿ ನೇರವೇರಿದ ಸಮಾರಂಭದಲ್ಲಿ ಚಿತ್ರನಟಿ ಕು| ರೂಪಿಕಾ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹಮೂರ್ತಿ ಹಾಗೂ ಗೌರವ ಅತಿಥಿಗಳಾಗಿ ಬೆಳಗಾಂ ಹಸಿರು ಕ್ರಾಂತಿಯ ಸಂಪಾದಕ ಕಲ್ಯಾಣರಾವ್ ಮುಚಳಂಬಿ, ಹಿರಿಯ ನ್ಯಾಯವಾದಿ ಕೆ.ಎಲ್.ಕುಂದರಗಿ, ದಲಿತ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಅಧ್ಯಕ್ಷ ವಿ.ಎಸ್.ಕೃಷ್ಣ, ಕರ್ನಾಟಕ ದಲಿತ ಪತ್ರಕರ್ತರ ವೇದಿಕೆ ಬೆಂಗಳೂರು ಇದರ ಅಧ್ಯಕ್ಷ ವೈ. ಮಂಜುನಾಥ್, ದಕ್ಷಿಣ ಕನ್ನಡ (ಮೂಡಬಿದಿರೆ) ಅಲ್ಲಿನ ಹಿರಿಯ ಪತ್ರಕರ್ತ ಶೇಖರ್ ಅಜೆಕಾರು ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಉಡುಪಿಯ ಜನಬಿಂಬ ಪತ್ರಿಕೆಯ ಸಂಪಾದಕ ರಾಧಾಕೃಷ್ಣ ತೋಡಿಕಾನ, ಮುಂಬಯಿಯಲ್ಲಿನ ಯುವ ಪತ್ರಕರ್ತ ರೋನ್ಸ್ ಬಂಟ್ವಾಳ್ ಸೇರಿದಂತೆ ರಾಜ್ಯದಾದ್ಯಂತದ ಅನೇಕ ಸಾಧಕ ಪತ್ರಕರ್ತರಿಗೆ ಅತಿಥಿವರ್ಯರು ದಶಮಾನೋತ್ಸವದ ಹೂಗಾರ ಸ್ಮಾರಕ ಮಾಧ್ಯಮ ಪ್ರಶಸ್ತಿ ಪ್ರದಾನಿಸಿ ಶುಭಾರೈಸಿದರು. ಆ ಮುನ್ನ ನಟಿ ರೂಪಿಕಾ ಅವರು ಪತ್ರಿಕೆಗಳ ಲಾಂಗೆಸ್ಟ್ ಲ್ಯಾಮಿನೇಷನ್ ಅನಾವರಣಗೊಳಿಸಿದರು.

ಪತ್ರಕರ್ತ ವೇದಿಕೆ ಬೆಂಗಳೂರು ಇದರ ಅಧ್ಯಕ್ಷ ಮಹೇಶ್ ಬಾಬು, ಕಣ್ಣಾ ಮುಚ್ಚಾಲೆ ಸಂಪಾದಕ ವೈ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದು, ಪತ್ರಿಕಾ ದಿನಾಚರಣಾ ಸಾಂಸ್ಕೃತಿಕ ಅಂಗವಾಗಿ ರಾಜ್ಯದಾದ್ಯಂತದ ವಿವಿಧ ನೃತ್ಯ ತಂಡಗಳು ಸಮೂಹ ನೃತ್ಯ, ಭರತನಾಟ್ಯ, ಜನಪದ ನೃತ್ಯ ಮೊದಲಾದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರಪಡಿಸಿದರು. ಮಹೇಶ್ ಬಾಬು ಸ್ವಾಗತಿಸಿದರು. ಮಂಜು ಪಾಂಡವಪುರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Press Day
Press Day
Press Day

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English