ಕಲ್ಲಡ್ಕ : ಮುಲ್ತ ಸಂಸ್ಕೃತಿ ಆಚಾರ ವಿಚಾರ ಭಾರೀ ಪೊರ್ಲು ಉಂಡು. ಎಂಕ್ ಮಸ್ತ್ ಖುಷಿ ಅಂಡ್ ಎಂದು ತುಳುವಿನಲ್ಲಿ ಮಾತು ಆರಂಭಿಸಿದ ಬಲೇ ತೆಲಿಪುಲೇ ನಾಟಕದ ರೂವಾರಿ ಹಾಗೂ ನೇತಾಜಿ ನರ್ಸಿಂಗ್ ಕಾಲೇಜಿನ ನಿದೇಶರ್ಕರಾದ ಡಾ. ಶಿವಶರಣ್ ಇವರು ಸಂವಾದ ಮತ್ತು ನಾಯಕತ್ವ ಇದೊಂದು ತೆರನಾದ ಕೌಶಲ್ಯ. ನಾಯಕತ್ವಕ್ಕೆ ಬೇಕಾದುದು ನಿರ್ಧಿಷ್ಟವಾದ ಗುರಿ. ಆ ಗುರಿ ಸಾಧಿಸಲು ನಾಯಕರಿಗೆ ಪ್ರಬಲವಾದ , ಉತ್ತಮವಾದ ಸಂಘಟನೆ ಶಕ್ತಿಯ ಅಗತ್ಯವಿದೆ. ಆಗ ತಾನೇ ನಾಯಕ ಯಶಸ್ಸಿನ ಗುರಿ ತಲುಪಲು ಸಾಧ್ಯ ಎಂದರು.
ಅವರು ಇಲ್ಲಿನ ಶ್ರೀ ರಾಮ ಪ್ರಥಮದರ್ಜೆ ಕಾಲೇಜಿನ 2014-15ನೇ ಸಾಲಿನ ಪ್ರಣವ ವಿದ್ಯಾರ್ಥಿ ಸಂಘವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿ ನಾಯಕರು ಜನರೊಂದಿಗೆ ಬೆರೆತು, ಜನರೊಂದಿಗೆ ಸೇರಿ ದುಡಿದಾಗ, ಮಾತ್ರ ಜನರನ್ನು ಅರ್ಥ ಮಾಡಲು ಸಾಧ್ಯ. ನಾಯಕರಿಗೆ ಮುಖ್ಯವಾಗಿ ಊಹಿಸುವ ಶಕ್ತಿ, ಆಲೋಚನಾ ಶಕ್ತಿ, ವರ್ತಮಾನದ ಬಗೆಗಿನ ಆಸಕ್ತಿ ಮತ್ತು ಭವಿಷ್ಯದ ಬಗ್ಗೆ ಗುರಿ ಬೇಕಾಗಿದೆ ಎಂದರು.
ಶ್ರೀ ರಾಮ ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಹಾಗೂ ಕಾರ್ಯಕ್ರಮದ ಅಧ್ಯಕ್ಷರಾದ ವಸಂತ ಮಾಧವ ವಿವಿಧ ಸಂಘಗಳ ಕಾರ್ಯ ಚಟುವಟಿಕೆಯನ್ನು ಪ್ರೋಜೆಕ್ಟರ್ ರಿಮೋಟ್ ಬಳಸಿ ಉದ್ಘಾಟಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಭಾರತ ದೇಶದ ವಿಶಾಲತೆಯ ಬಗ್ಗೆ ಮಾತನಾಡಿ ಹಿರಿಯರನ್ನು, ರಾಷ್ಟ್ರವನ್ನು ಪ್ರೀತಿಸಬೇಕು. ನಮ್ಮದು, ನಮ್ಮ ಎನ್ನುವ ಅಭಿಮಾನ ಬೆಳೆದಾಗ ಮತ್ರ ನಾಯಕತ್ವ ಉತ್ತಮವಾಗುತ್ತದೆ. ಮೋದಿಯ ಅಭಿಮಾನದ ಜೊತೆ ಶ್ರೀ ರಾಮನ ಗುಣವಿದ್ದಾಗ ಮಾತ್ರ ನಾಯಕತ್ವ ಬಲವಾಯಿತು ಎಂದರು.
ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ವಿದ್ಯಾರ್ಥಿ ನಾಯಕರುಗಳಿಗೆ, ವಿವಿಧ ಸಂಘಗಳ ಪದಾಧಿಕಾರಿಗಳಿಗೆ, ತರಗತಿ ಪ್ರತಿನಿಧಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಉಪನ್ಯಾಸಕಿ ರೇಖಾ ಸ್ವಾಗತಿಸಿ, ಯತಿರಾಜ್ ವಂದಿಸಿ, ಶೈಲಜಾ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English