ಪಯ್ಣಾರಿ ಮಾಜಿ ಉಪ ಸಂಪಾದಕ, ಹಿರಿಯ ಪತ್ರಕರ್ತ ಫೆಲಿಕ್ಸ್ ಎ. ಡಿ’ಸೋಜಾ ಬೆಂದೂರು ನಿಧನ

8:30 PM, Wednesday, July 9th, 2014
Share
1 Star2 Stars3 Stars4 Stars5 Stars
(5 rating, 5 votes)
Loading...
Felix A Dsouza

ಮುಂಬಯಿ : ಮುಂಬಯಿ ಕೇಂದ್ರವಾಗಿರಿಸಿ ಸುಮಾರು ಸುವರ್ಣಯುಗ ಪೂರೈಸಿದ್ದ ಪಯ್ಣಾರಿ ಕೊಂಕಣಿ ವಾರಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕೊಂಕಣಿ ಪತ್ರಕರ್ತ ಸೇವಕ ಫೆಲಿಕ್ಸ್ ಅಂತೋನಿ ಡಿ’ಸೋಜಾ ಅವರು ಅನಾರೋಗ್ಯದಿಂದಾಗಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಕೆನಡಾದಲ್ಲಿನ ಸುಪುತ್ರನ ನಿವಾಸದಲ್ಲಿ ನಿಧನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂದೂರು ಮೂಲದವರಾಗಿದ್ದ ಮೃತರು ಪತ್ನಿ ಶ್ರೀಮತಿ ಸೆಲಿನ್, ಡಿ’ಸೋಜಾ ಒಂದು ಹೆಣ್ಣು ಡಿ’ಸೋಜಾ (ಲಿನೇಟ್ ಆಶಾ ಡಿ’ಸೋಜಾ), ಒಂದು ಗಂಡು (ಅರುಣ್ ಡಿ’ ಸೋಜಾ) ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ನಟರತ್ನ, ಕಲಾರತ್ನ ಬಿರುದಾಂಕಿತ ಹೆಸರಾಂತ ಕೊಂಕಣಿ ನಾಟಕ ಬರಹಗಾರ, ನಿರ್ದೇಶಕ ಮತ್ತು ನಟ ಬಿರುದಾಂಕಿತ ಸನ್ನಿ ಎ.ಡಿ’ಸೋಜಾ ಅವರ ಸಹೋದರರಾಗಿದ್ದ ಫೆಲಿಕ್ಸ್ ಡಿ’ಸೋಜಾ ಅವರು ಮಾತ್ರ್ಯಾಂಚೆಂ ದಾನ್, ವಾಟೆವಂಯ್ಲೊ ಫಾತೊರ್, ಪಯ್ಣಾರ್ ವಿಂಚ್ಲೆಲಿಂ ಮೊತಿಯಾಂ, ತುರುಫಾಚ್ಯೊತೀನ್ ರಾಣಿಯೋ ಇವರ ಪ್ರಕಟಿತ ಪುಸ್ತಕಗಳಾಗಿದ್ದು, ಪಯ್ಣಾರಿ, ರಾಕ್ಣೊ, ಝೆಲೊ, ಕೊಂಕಣ್ದಾಯ್ಜ್, ಜಾಗ್ಮಾಗ್, ಖಣಸ್, ವಿಶಾಲ್ ಕೊಂಕಣ್, ದಿವೋ, ಕುಟಾಮ್, ನಮಾನ್ ಬಾಳೊಕ್ ಜೆಜು, ಎಕ್ಝಾಮಿನರ್ ಮತ್ತು ಫ್ರೀಪ್ರೆಸ್ ಜರ್ನಲ್ ಆಂಗ್ಲ ಭಾಷಾ ಪತ್ರಿಕೆಗಳಲ್ಲೂ ಇವರ ಲೇಕನಗಳು ಪ್ರಕಟವಾಗಿದ್ದವು. ಕಲಾಸಾಗರ್ ಮುಂಬಯಿ ಸಂಸ್ಥೆಯು `ಕಲಾವಿಭೂಷಣ್’ ಬಿರುದು ಪ್ರದಾನಿಸಿ ಗೌರವಿಸಿದ್ದು, ಕೊಂಕ್ಣಿ ಸಾಂಗತಿ ಕೆನಡಾ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಇತ್ಯಾದಿ ಹಲವಾರು ಸಂಸ್ಥೆಗಳಿಂದ ಪುರಸ್ಕೃತರಾಗಿದ್ದ ಫೆಲಿಕ್ಸ್ ಅವರು ಆಕಾಶವಾಣಿ ಕಲಾಕಾರ, ನಾಟಕ ಕಲಾವಿದನಾಗಿದ್ದರು.

ಮೃತರು ಮುಂಬಯಿ ಉಪನಗರದ ಬೊರಿವಿಲಿ ಐಸಿ ಕಾಲೋನಿಯ ಸನಿಹದ ಕಾಂದರ್ಪಾಡದಲ್ಲಿ ವಾಸವಾಗಿದ್ದು, ಇತ್ತೀಚೆಗಷ್ಟೇ ಕೆನಡಾಕ್ಕೆ ತೆರಳಿದ್ದರು. ಮೃತರ ಅಂತ್ಯಕ್ರಿಯೆಯ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English