ಮಂಗಳೂರು : ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ರೋಗಗಳ ಬಗ್ಗೆ ಆಯುಷ್ ಜನಜಾಗೃತಿ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 08.07.2014 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜರುಗಿತು.
ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಜೀವನಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ ಹಮ್ಮಿಕೊಳ್ಳಲಾಯಿತು. ವೆನ್ಲಾಕ್ ಆಸ್ಪತ್ರೆಯ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಮುಂತಾದ ವೈದ್ಯಕೀಯ ಸೇವಾ ನಿರತರಿಗಾಗಿ ಈ ತರಬೇತಿಯು ಜರುಗಿತು.
ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರು ಆರೋಗ್ಯ ರಕ್ಷಣೆಗೆ ಅಗತ್ಯವುಳ್ಳ ಸರಳ ಯೋಗಾಸನಗಳು, ಪ್ರಾಣಾಯಾಮ, ಯೋಗ ಮುದ್ರೆಗಳು ಹಾಗೂ ಆಹಾರ ಸೇವನೆಯ ಕ್ರಮಗಳ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಜಿಲ್ಲಾ ಸರ್ಜನ್ ಡಾ| ರಾಜೇಶ್ವರಿ ದೇವಿಯವರು ಕರ್ಯಾಗಾರದ ವ್ಯವಸ್ಥೆ ಮಾಡಿದರು. ಆಯುಷ್ ವಿಶೇಷ ಕರ್ತವ್ಯಾಧಿಕಾರಿ ಡಾ| ಮೊಹಮ್ಮದ್ ಇಕ್ಬಾಲ್, ಆಯುಷ್ ವೈದ್ಯಾಧಿಕಾರಿಗಳಾದ ಡಾ|ದೇವದಾಸ್, ಡಾ| ಝೂಹಿದ್ ಹುಸೇನ್, ಡಾ|ಸಹನಾ ಪಾಂಡುರಂಗ ಉಪಸ್ಥಿತಿರಿದ್ದರು.
Click this button or press Ctrl+G to toggle between Kannada and English