ಮಂಗಳೂರು : ನಮ್ಮ ಪ್ರಗತಿಯ ಯೋಜನೆಗಳನ್ನೆಲ್ಲಾ ಇತಿಮಿತಿಯಿಲ್ಲದ ಜನಸಂಖ್ಯಾ ಸ್ಪೋಟ ನುಂಗಿ ಹಾಕುತ್ತಿದೆ. ನಾವು ಪ್ರಗತಿ ಹೊಂದ ಬೇಕಾದರೆ ಮೊದಲು ನಾವು ಸಣ್ಣ ಪರಿವಾರದ ಆಯ್ಕೆ ಮಾಡಿಕೊಂಡು ನಮ್ಮ ಜನಸಂಖ್ಯೆ ನಿಯಂತ್ರಿಸುವುದೊಂದೇ ನಮಗಿರುವ ದಾರಿ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಆಶಾ ತಿಮ್ಮಪ್ಪ ಅವರು ಕರೆ ನೀಡಿದ್ದಾರೆ.
ಅವರು ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಪುರುಷರ ವಸತಿಗೃಹ ಸಭಾ ಮಂಟಪದಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗಿರುವುದರಿಂದ ಶೇಕಡಾ 50 ಜನ ಸ್ವಯಂ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡು ಕುಟುಂಬಕ್ಕೊಂದು ಮಗು ನೀತಿ ಅನುಸರಿಸುತ್ತಿದ್ದಾರೆ. ಇನ್ನು ಶೇಕಡಾ 35 ರಷ್ಟು ಜನ ಕುಟುಂಬಕ್ಕೆರಡು ಮಕ್ಕಳ ನೀತಿ ಅನುಸರಿಸುತ್ತಿದ್ದಾರೆ. ಆದ್ದರಿಂದ ಜಿಲ್ಲೆ ಇತರ ಜಿಲ್ಲೆಗಳಿಗಿಂತ ಜನಸಂಖ್ಯೆ ಏರಿಕೆಯಲ್ಲಿ ಕಳೆದ 10 ವರ್ಷಗಳಲ್ಲಿ ಶೇಕಡಾ 9.8 ರಷ್ಟು ಪ್ರಮಾಣವಾಗಿದೆ ಎಂದರು. ಈ ಜಿಲ್ಲೆಯಲ್ಲಿ ಜನನ ಪ್ರಮಾಣ ಶೇಕಡಾ 11 ರಷ್ಟಿದ್ದರೆ ಮರಣ ಪ್ರಮಾಣ ಶೇಕಡಾ 3.8 ರಷ್ಟು ಪ್ರಮಾಣದಷ್ಟಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಇಂದು ತಾಂತ್ರಿಕತೆ ವಿಜ್ಞಾನದ ಪ್ರಗತಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಅವಿಭಕ್ತ ಕುಟುಂಬಗಳು ಮಾಯವಾಗಿ ಸಣ್ಣ ಕುಟುಂಬಗಳು ಚಾಲ್ತಿಗೆ ಬಂದಿದ್ದು, ಇದರಿಂದ ನೆಮ್ಮದಿಗಿಂತ ಸಮಸ್ಯೆಗಳೇ ಹೆಚ್ಚಾಗುತ್ತಿವೆ .ನಾವು ನಮ್ಮ ಜನಸಂಖ್ಯೆ ಪ್ರಮಾಣನಿಯಂತ್ರಿಸದಿದ್ದರೆ ಮುಂದೊಂದು ದಿನ ಆಹಾರ ಬೆಳೆಯಲಿಕ್ಕೆ ಭೂಮಿ ಇಲ್ಲವಾಗಬಹುದೆಂಬ ಆತಂಕ ವ್ಯಕ್ತ ಪಡಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್ ಸಿಹೆಚ್ ಅಧಿಕಾರಿ ಡಾ.ರುಕ್ಮಿಣಿ ವಿಶ್ವದ ಜನಸಂಖ್ಯೆ 7 ಬಿಲಿಯನ್ ಗೂ ಹೆಚ್ಚಾಗಿದ್ದು ದೇಶದ ಜನಸಂಖ್ಯೆ 107 ಕೋಟಿ ಇದ್ದರೆ ಕನರ್ಾಟಕದ ಜನಸಂಖ್ಯೆ 6.4 ಕೋಟಿಗೂ ಹೆಚ್ಚು . ನಾವು ಜನಸಂಖ್ಯೆ ನಿಯಂತ್ರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದರು.
ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿದರ್ೇಶಕಿ ಗಟ್ರೂಡ್ ವೇಗಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ಶಿವಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದ ಎನ್ ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಪ್ರೊ.ವಿನೀತ.ಕೆ., ಮುಂತಾದವರು ಹಾಜರಿದ್ದರು.
Click this button or press Ctrl+G to toggle between Kannada and English