ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕುಟುಂಬ ಸಮೇತರಾಗಿ ಶುಕ್ರವಾರದಿಂದ ಹತ್ತು ದಿನಗಳ ಕಾಲ ಜರ್ಮನಿ ದೇಶದ ಪ್ರವಾಸ ಮಾಡುವರು.
ಪ್ರಾಂಕ್ ಫರ್ಟ್ ದಲ್ಲಿ ಪೂಜ್ಯ ರವಿಶಂಕರ ಗುರೂಜಿಯವರ ಆಶ್ರಮದಲ್ಲಿ ಕೆಲವು ದಿನ ಸತ್ಸಂಗದಲ್ಲಿ ಅವರು ಭಾಗವಹಿಸುವರು. ಬಳಿಕ ಜರ್ಮನಿಯ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವರು. ಜು. 30 ರಂದು ವಿದೇಶ ಪ್ರವಾಸದಿಂದ ಡಾ. ಹೆಗ್ಗಡೆಯವರು ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Click this button or press Ctrl+G to toggle between Kannada and English