ಆಟಿ ಸ್ಪೆಷಲ್ : ಕೆ.ಎಸ್.ಅರ್.ಟಿ.ಸಿ ಪ್ರಯಾಣದಲ್ಲಿ ರಿಯಾಯಿತಿ ದರ
12:18 AM, Friday, July 18th, 2014
Loading...
ಮಂಗಳೂರು : ವಾರದ ದಿನಗಳಲ್ಲಿ ನಿಗಮದ ಸೇವೆಗಳತ್ತ ಸಾರ್ವಜನಿಕ ಪ್ರಯಾಣಿಕರನ್ನು ಆಕರ್ಷಿಸಲು ಪ್ರಯಾಣೋತ್ಸವ ಯೋಜನೆಯನ್ನು ಪರಿಚಯಿಸುತ್ತಿದೆ. ಆಟಿ ವಿಶೇಷ ಕೊಡುಗೆಯಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕೆ.ಎಸ್.ಅರ್.ಟಿ.ಸಿ ಸೇವೆಗಳಲ್ಲಿ ಮಂಗಳವಾರ, ಬುಧವಾರ ಹಾಗೂ ಗುರುವಾರಗಳಂದು ಪ್ರಯಾಣಿಸಲು ಮುಂಗಡ ಬುಕ್ಕಿಂಗ್ ಮಾಡುವ ಪ್ರಯಾಣಿಕರಿಗೆ ಮಾತ್ರ ಪ್ರಯಾಣದರದಲ್ಲಿ ಶೇ. 10% ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇದು ಜುಲೈ14ರಿಂದ ಸೆಪ್ಟಂಬರ್ 18ರವರೆಗೆ ಜಾರಿಯಲ್ಲಿರುತ್ತದೆ ( ಈ ರಿಯಾಯಿತಿಯು ಆಗಸ್ಟ್ 14, 27 ಮತ್ತು 28ರಂದು ಅನ್ವಯವಾಗುವುದಿಲ್ಲ).
ಇದಲ್ಲದೆ ಆನ್ಲೈನ್ ಮುಖಾಂತರ ಇ-ಟಿಕೆಟ್/ಎಂಟಿಕೇಟ್ ಮುಂಗಡ ಬುಕ್ಕಿಂಗ್ ಮಾಡುವ ಪ್ರಯಾಣಿಕರಿಗೆ 4ನೇ ಬಾರಿ ಪ್ರಯಾಣದಲ್ಲಿ ನೇರ 30% ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಎಲ್ಲಾ ಟಿಕೇಟುಗಳನ್ನು www.ksrtc.in ನಲ್ಲಿ ಇ-ಬುಕಿಂಗ್ ಅಥವಾ ಎಂ-ಬುಕಿಂಗ್ ಮೂಲಕವೇ ಪಡೆದಿರಬೇಕು.ಇ-ಟಿಕೇಟಿನ ನೊಂದಣಿಕೃತ ಬಳಕೆದಾರರ ಐಡಿ ಬಳಸಿ ನಾಲ್ಕು ಟಿಕೇಟುಗಳನ್ನು ಕಾಯ್ದಿರಿಸುವ ಪ್ರಯಾಣಿಕರಿಗೆ ಈ ಕೊಡುಗೆ ಲಭ್ಯವಾಗುತ್ತದೆ. ಬುಕಿಂಗ್ ಮತ್ತು ಪ್ರಯಾಣದ ದಿನಾಂಕಗಳು 14-7-2014 ರಿಂದ 18-9-2014 ರೊಳಗಿರಬೇಕು. ಈ ರಿಯಾಯಿತಿಯು ನಾಲ್ಕನೇ ಟಿಕೇಟಿನಲ್ಲಿ ಕಾಯ್ದಿರಿಸುವ ಒಂದು ಆಸನಕ್ಕೆ ಮಾತ್ರ ಅನ್ವಯವಾಗುತ್ತದೆ ಹಾಗೂ ಈ ಹಿಂದೇ ಕಾಯ್ದಿರಿಸಿರುವ ಯಾವುದೇ ಟಿಕೇಟುಗಳನ್ನು ರದ್ದು ಪಡಿಸಿರಬಾರದು.ಈ ರಿಯಾಯಿತಿಯು ಎಲ್ಲಾ ನಾಲ್ಕು ಟಿಕೇಟುಗಳು ಪ್ರಯಾಣಕ್ಕೆ ಅರ್ಹವಾಗಿದ್ದಲ್ಲಿ ಮಾತ್ರ ದೊರಕುವುದು.ಈ ರಿಯಾಯಿತಿಯು ಮುಂಗಡ ಬುಕಿಂಗ್ ವ್ಯವಸ್ಥೆ ಇರುವ ಕರಾರಸಾನಿಗಮದ ಸಾರಿಗೆಗಳಿಗೆ ಮಾತ್ರ ಅನ್ವಯವಾಗುತ್ತದೆ.ಕರಾರಸಾನಿಗಮದ ಇತರೆ ಯಾವುದೇ ರಿಯಾಯಿತಿ ಜೊತೆಗೆ ಈ ಕೊಡುಗೆಯನ್ನು ಒಟ್ಟಿಗೆ ಪಡೆಯಲು ಹಾಗೂ ಇತರರಿಗೆ ವರ್ಗಾಯಿಸಲು ಅವಕಾಶವಿರುವುದಿಲ್ಲ. ಒಂದು ಬಾರಿಗೆ ಒಂದು ರಿಯಾಯಿತಿಯನ್ನು ಮಾತ್ರ ನೀಡಲು ಅವಕಾಶವಿರುತ್ತದೆ.ನಾಲ್ಕನೇ ಟಿಕೇಟ್ ಬುಕಿಂಗ್ ಮಾಡಿದ ನಂತರ ಯಾವುದೇ ಟಿಕೇಟನ್ನು ರದ್ದುಗೊಳಿಸಿದ್ದಲ್ಲಿ ಈ ರಿಯಾಯಿತಿಯನ್ನು ವಾಪಸ್ಸು ಪಡೆಯಲಾಗುವುದು.ಈ ರಿಯಾಯಿತಿ ಪಡೆಯಲು ಬಳಕೆದಾರರು ನಾಲ್ಕನೇ ಬಾರಿ ಬುಕ್ ಮಾಡುವಾಗ ಪ್ರಯಾಣಿಕ ವರ್ಗದಲ್ಲಿ ಲಾಯಲ್ಟಿ ಡಿಸ್ಕೌಂಟ್ ಎಂಬುದನ್ನು ಆಯ್ಕೆ ಮಾಡಬೇಕು ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿರುತ್ತಾರೆ.