ಕುರ್ನಾಡು-ಚೇಳೂರಿನಲ್ಲಿ ಜಿಲ್ಲಾ ಕಾರಾಗೃಹ ನಿರ್ಮಾಣ ಯೋಜನೆ: ಕೆ.ಜೆ. ಜಾರ್ಜ್

11:44 PM, Thursday, July 24th, 2014
Share
1 Star2 Stars3 Stars4 Stars5 Stars
(4 rating, 5 votes)
Loading...

KJ-George

ಮಂಗಳೂರು : ಮಂಗಳೂರಿನಲ್ಲಿ ಗರಿಷ್ಠ ಭದ್ರತೆ ಇರುವ ಕಾರಾಗೃಹ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಅದಕ್ಕಾಗಿ ಬಂಟ್ವಾಳ ತಾಲೂಕಿನ ಕುರ್ನಾಡು ಮತ್ತು ಚೇಳೂರು ಗ್ರಾಮಗಳ ವ್ಯಾಪ್ತಿಯಲ್ಲಿ 100 ಎಕರೆ ಜಮೀನು ಗುರುತಿಸಲಾಗಿದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾರವರ ನಗರ ಹೊರ ವಲಯದಲ್ಲಿ ಕಾರಾಗೃಹ ನಿರ್ಮಾಣದ ಯೋಜನೆ ಸರಕಾರದ ಮುಂದೆ ಇದೆಯೇ ಎಂಬ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, 63 ಎಕರೆ 89 ಸೆಂಟ್ಸ್ ಜಮೀನು ಇಲಾಖೆಯ ವಶದಲ್ಲಿದೆ. 41 ಎಕರೆ ಜಮೀನನನ್ನು ಕಐಎಡಿಬಿಯವರಿಂದ ವಶಕ್ಕೆ ಪಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನಡಿದ್ದಾರೆ.

200 ಖೈದಿಗಳ ಸಾಮಥ್ರ್ಯದ ಮಂಗಳೂರಿನ ನೂತನ ಕಾರಾಗೃಹದಲ್ಲಿ ಈಗ 12 ಮಹಿಳಾ ಬಂಧಿಗಳ ಸಹಿತ 373 ಖೈದಿಗಳಿದ್ದಾರೆ. ಹಳೆ ಕಾರಾಗೃಹವನ್ನು ದುರಸ್ಥಿಗೊಳಿಸಿ ಕುಖ್ಯಾತ ಕೈದಿಗಳನ್ನು ಅದರಲ್ಲಿ ಪ್ರತ್ಯೇಕವಾಗಿ ಇಡುವ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English