ಮಂಗಳೂರು : ಮಂಗಳೂರಿನಿಂದ ಕುವೈತ್ ಗೆ ನೇರ ವಿಮಾನ ರದ್ದು ಪಡಿಸಿದ್ದರ ಹಿಂದೆ ಲಾಭಿ ಕೆಲಸ ಮಾಡಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಖಾಸಗಿ ವಿಮಾನ ಸಂಸ್ಥೆಯ ಸಹಯೋಗ ಪಡೆದು ಕುವೈತ್ ವಿಮಾನ ಪುನಾರಂಭಿಸುವಂತೆ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಇಂದು ಮೂಲಬೂತ ಸೌಲಭ್ಯ ಅಭಿವೃದ್ದಿ ಸಚಿವ ರೋಷನ್ ಬೇಗ್ ರಿಗೆ ಕುವೈತ್ ಗೆ ವಿಮಾನ ಆರಂಭಿಸಲು ಇರುವ ತೊಡಕುಗಳ ಬಗ್ಗೆ ಪ್ರಶ್ನಿಸಿದ್ದು, ಪ್ರಯಾಣಿಕರ ಕೊರತೆಯಿಂದ ವಿಮಾನ ರದ್ದು ಪಡಿಸಲಾಗಿದೆ ಎಂಬ ಉತ್ತರಕ್ಕೆ ಮಂಗಳೂರಿನಿಂದ 60 ಸೀಟ್ ಕಾಯ್ದಿರಿಸಿ ಕ್ಯಾಲಿಕಟ್ ಗೆ 120 ಸೀಟ್ ಬಿಟ್ಟು ಕೊಡಲಾಗಿದೆ. ಮಂಗಳೂರಿನ ಸೀಟ್ ಗಳು ಭರ್ತಿಯಾಗುತ್ತಿದೆ. ಕ್ಯಾಲಿಕಟ್ ಸೀಟ್ ಗಳು ಖಾಲಿ ಇರುತಿತ್ತು. ಕ್ಯಾಲಿಕಟ್ ನಿಂದ ಸೀಟ್ ಗಳು ಬರುತ್ತಿರಲಿಲ್ಲ. ಕುವೈತ್ ಗೆ ಹೋಗುವ ಏರ್ ಕ್ರಾಪ್ಟ್ ರದ್ದು ಪಡಿಸಿದ್ದರೆ, ಅದರ ಬದಲಿಗೆ ಖಾಸಗಿ ವಿಮಾನ ಸಂಸ್ಥೆಗಳಿಗೆ ಅನುವು ಮಾಡಿಕೊಡಬೇಕು ಎಂದು ಐವನ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರೋಷನ್ ಬೇಗ್ ಐವನ್ ಡಿಸೋಜಾ ಭಾವನಾತ್ಮಕವಾಗಿ ಮಾತನಾಡುತ್ತಿದ್ದಾರೆ. ಕೇಂದ್ರದಲ್ಲಿ ನಮ್ಮವರೇ ಆದ ಸಿದ್ದೇಶ್ವರರವರು ವಿಮಾನಯಾನ ರಾಜ್ಯ ಸಚಿವರಾಗಿದ್ದಾರೆ ಅವರೊಂದಿಗೆ ಈ ವಿಷಯದಲ್ಲಿ ಚರ್ಚಿಸುತ್ತೇನೆ. ಐವನ್ ಡಿಸೋಜಾರವರನ್ನೂ ಕೇಂದ್ರ ಸಚಿವ ಸಿದ್ದೇಶ್ವರರ ಬಳಿ ಕರೆದುಕೊಂಡು ಹೋಗುತ್ತೇನೆ ಎಂದು ರೋಶನ್ ಬೇಗ್ ಪ್ರತಿಕ್ರಿಯಿಸಿದರು.
ಕುವೈತ್ ನಲ್ಲಿರುವ 7.62 ಲಕ್ಷ ಎನ್.ಆರ್.ಐ ಗಳಲ್ಲಿ ಕರಾವಳಿಯವರೇ 1.3 ಲಕ್ಷ ಮಂದಿ ಇದ್ದಾರೆ. ಅವರಿಗೆ ಸೌಲಭ್ಯ ಒದಗಿಸಬೇಕಾಗಿದೆ ಎಂದು ಐವನ್ ಒತ್ತಾಯಿಯಿಸಿದರು.
ಪಿಪಿಪಿ ಮಾದರಿಯಲ್ಲಿ ರನ್ ವೇ ವಿಸತಿರಣೆಗೆ ಚಿಂತನೆ.
ರನ್ವೇ ವಿಸ್ತರಣೆಗೆ ಸಂಬಂಧಿಸಿದಂತೆ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ರೋಶನ್ ಬೇಗ್, ಒಂದು ಕಿ.ಮೀ, ರನ್ ವೇ ವಿಸ್ತರಿಸುವ ಉದ್ದೇಶದ ವರದಿ ಸಿದ್ದಪಡಿಸಿದ್ದು ಅದಕ್ಕಾಗಿ 1120 ಕೋಟಿ ರೂ. ಬೇಕಾಗುತ್ತದೆ. ಮಂಗಳೂರು ವಿಮಾನ ನಿಲ್ದಾಣ ಟೇಬಲ್ ಟಾಪ್ ಆಗಿರುವುದರಿಂದ ರನ್ವೇ ಮಾಡಲು ಕಣಿವೆಗಳನ್ನು ಮಣ್ಣಿನಿಂದ ತುಂಬ ಬೇಕಾಗುತ್ತದೆ. ಆದುದರಿಂದ ರನ್ವೇ ನಿಮಾಣದ ವೆಚ್ಚವನ್ನು ಪೂರ್ತಿ ಸರಕಾರವೇ ಭರಿಸುವ ಬದಲು ಪಿಪಿಪಿ ಮಾದರಿಯಲ್ಲಿ ಮಾಡುವ ಬಗ್ಗೆ ಮುಖ್ಯಮಂತ್ರಿ ಯೋಚಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಒಂದು ಕಿ.ಮೀ. ರನ್ ವೇ ವಿಸತಿರಿಸಲು 289.33 ಎಕ್ರೆ ಭೂಮಿ ಆವಶ್ಯಕತೆ ಇದೆ. ಕಣಿವೆಗಳನ್ನು ತುಂಬಲು ಈಗಾಗಲೇ ಮೂರು ಗುಡ್ಡಗಳನ್ನು ಸ್ವಾದೀನ ಪಡಿಸಿಕೊಳ್ಳಲಾಗಿದೆ ಎಂದು ರೋಶನ್ ಬೇಗ ಮಾಹಿತಿ ನೀಡಿದರು.
Click this button or press Ctrl+G to toggle between Kannada and English