ಮಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ಪ್ರಥಮ ಇ-ಲಾಬಿಯನ್ನು ಬ್ಯಾಂಕಿನ ಕಂಕನಾಡಿ ಶಾಖೆಯಲ್ಲಿ ಸೈಂಟ್ ವಿನ್ಸೆಂಟ್ ಫೆರಾರಿ ಚರ್ಚ್ ನ ಧರ್ಮಗುರುಗಳಾದ ರೆ.ಫಾ. ಜೇಮ್ಸ್ ಡಿ ಸೋಜರವರು ಇಂದು ಉದ್ಘಾಟಿಸಿದರು.
ದಿನವಿಡೀ ಸಾರ್ವಜನಿಕರಿಗೆ ತೆರೆದಿರುವ ಇ-ಲಾಬಿ’ಯಲ್ಲಿ ಸ್ಟೇಟ್ ಬ್ಯಾಂಕಿನ ಡೆಬಿಟ್ ಕಾರ್ಡ್ ದಾರರು, ನಗದು ಸ್ವೀಕೃತಿಯಂತ್ರ (ಕ್ಯಾಶ್ ಡಿಪಾಸಿಟ್ ಮಷೀನ್ ನ) ಮೂಲಕ ನಗದು ಜಮಾ ಮಾಡುವಿಕೆ, ಎಟಿಎಂ ನಿಂದ ಹಣ ಹಿಂಪಡೆಯುವಿಕೆ, ಸ್ವಯಂ ಸೇವಾ ಕಿಯೋಸ್ಕ್ ನ ಮೂಲಕ ಪಾಸು ಪುಸ್ತಕ ಪ್ರಿಂಟಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಟಿಕೆಟ್ ಬುಕ್ಕಿಂಗ್ ಮುಂತಾದ ಸೌಲಭ್ಯಗಳನ್ನು ಪಡೆಯಬಹುದು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಎಂ. ಆರ್. ಜಯೇಶ್ ರವರು ಮಂಗಳೂರು ನಗರದಲ್ಲಿ ಇನ್ನೂ ಹಲವು ಎಟಿಎಂಗಳು ಮತ್ತು ನಗದು ಸ್ವೀಕೃತಿ ಯಂತ್ರಗಳನ್ನು ಸ್ಥಾಪಿಸಲು ಬ್ಯಾಂಕು ಉದ್ದೇಶಿಸಿದೆ ಎಂದರು.
ಬ್ಯಾಂಕಿನಗ್ರಾಹಕರಾದ ಶ್ರೀ ವಾಲ್ಟರ್ ಸ್ವೀಫನ್ ಮೆಂಡಿಸ್ ಮತ್ತು ಶ್ರೀ ವಿ. ದಿವಾಕರ್ರವರು ಶುಭ ಹಾರೈಸಿದರು. ಬ್ಯಾಂಕಿನ ಮುಖ್ಯ ವ್ಯವಸ್ಥಾಪಕರಾದ ಶ್ರೀ ಮೆಲ್ವಿನ್ ಆರಾನ್ಹಾ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English