ಮಂಗಳೂರು: ಸಿರಿ ಕ್ರಿಯೇಷನ್, ಮಂಗಳೂರು ಹಾಗೂ ಚಿತ್ರ ಸಂಗಮ, ಬೆಂಗಳೂರು ಅವರು ನೀಡುವ ಸಿರಿ ಸಿನಿಮಾ ಪ್ರಶಸ್ತಿ- 2014ಗೆ ಮಂಗಳೂರು ವಿಜಯ ಕರ್ನಾಟಕದ ಉಪಸಂಪಾದಕ ಹಾಗೂ ವರದಿಗಾರ ಸ್ಟೀವನ್ ರೇಗೊ, ದಾರಂದಕುಕ್ಕು ಆಯ್ಕೆಯಾಗಿದ್ದಾರೆ.
ಮುದ್ರಣ ಮಾಧ್ಯಮದಲ್ಲಿ ಕರಾವಳಿ ಸಿನಿಮಾ ಲೋಕದ ವಿಶೇಷ ವರದಿಗಳನ್ನು ಪರಿಗಣಿಸಿ ಸಿರಿ ಸಿನಿಮಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸ್ಟೀವನ್ ರೇಗೊ ಅವರಿಗೆ 2012 ರಲ್ಲಿ ಮಂಗಳೂರಿನ ಪ್ರತಿಷ್ಟಿತ ಮೆಗಾ ಮಿಡಿಯಾ ಪ್ರಶಸ್ತಿ ಲಭಿಸಿತ್ತು.
ಅವರ ಗ್ರಾಮೀಣ ವರದಿಗಾರಿಕೆಗೆ ಈ ಹಿಂದೆ ಕಿನ್ನಿಗೋಳಿಯ ಕೆ.ಜೆ. ಶೆಟ್ಟಿ ಕಡಂದಲೆ ಪ್ರಶಸ್ತಿ, ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಪದ್ಯಾಣ ಗೋಪಾಲಕೃಷ್ಣ ಪ್ರಶಸ್ತಿ( ಪ.ಗೋ) ದೊರೆತಿತ್ತು. ಅವರು ಮೂಲತಃ ಪುತ್ತೂರು ದಾರಂದಕುಕ್ಕು ನಿವಾಸಿ ಇಗ್ನೇಶಿಯಸ್ ರೇಗೊ ಹಾಗೂ ಹಿಲ್ಡಾ ರೇಗೊ ಅವರ ಪುತ್ರ.
Click this button or press Ctrl+G to toggle between Kannada and English