ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ್ ಗಾಂಧಿ ಹಾಗೂ ದೇವರಾಜ್ ಅರಸ್ ಜನ್ಮ ದಿನಾಚರಣೆ

12:01 AM, Thursday, August 21st, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Rajiv-gandhi-birthday

ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜೀ ಪ್ರಧಾನಿ ದಿ| ರಾಜೀವ ಗಾಂಧಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ| ದೇವರಾಜ್ ಅವರಸ್ ರವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಶ್ರೀ ಜಿ.ಆರ್.ಲೋಬೋರವರು ಮಾತನಾಡುತ್ತಾ, ಇಬ್ಬರು ಮಹಾ ನಾಯಕರು ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿದವರು ರಾಜೀವ್ ಗಾಂಧಿಯವರು ದೇಶದ ಪ್ರಧಾನಿಯಾಗಿ ದೇಶದ ಆಥರ್ಿಕತೆ, ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಪಣ ತೊಟ್ಟಿದ್ದರು. ಅದೇ ರೀತಿ ದೇವರಾಜ್ ಅರಸ್ರವರು ಬಡವರಿಗೆ, ದೀನ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಮಹತ್ತರ ಸೇವೆ ಸಲ್ಲಿಸಿದರು. ಭೂ ಸುಧಾರಣೆ ಕಾಯಿದೆಯನ್ನು ಪರಿಣಾಮಕಾರಿಯಾಗಿ ರಾಜ್ಯದಲ್ಲಿ ಅಳವಡಿಸಿದರು.

ಮೇಯರ್ ಮಹಾಬಲ ಮಾರ್ಲರವರು ಮಾತನಾಡುತ್ತಾ ರಾಜೀವ್ ಗಾಂಧಿಯವರು ದೇಶದ ಯುವ ಜನತೆಗೆ 18 ವಯಸ್ಸಿಗೆ ಮತದಾನದ ಹಕ್ಕನ್ನು ಕೊಡಿಸುವಲ್ಲಿ ಸಫಲರಾದರು. ದೇವರಾಜ ಅರಸುರವರು ಹಿಂದುಳಿದ ವರ್ಗಗಳ, ದೀನ ದಲಿತರ ಹರಿಕಾರರಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.

ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾರವರು ಮಾತನಾಡುತ್ತಾ ದಿ| ರಾಜೀವ್ ಗಾಂಧಿಯವರು ಮೊಬೈಲ್ ಕ್ರಾಂತಿಯನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾಗಿ, ಆಧುನಿಕ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ದಿ| ದೇವರಾಜ್ ಅರಸುರವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿ, ಇಂದಿರಾಗಾಂಧಿಯವರ ಭೂ ಸುಧಾರಣಾ ಕಾಯಿದೆಯನ್ನು ಜಾರಿಗೆ ತಂದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಸದಾಶಿವ ಉಳ್ಳಾಲ, ಕಳ್ಳಿಗೆ ತಾರಾನಾಥ ಶೆಟ್ಟಿ, ಪದ್ಮನಾಭ ನರಿಂಗಾನ, ಸುರೇಶ್ ಬಲ್ಲಾಳ್, ಧರಣೀಂದ್ರ ಕುಮಾರ್, ಶಶಿಧರ ಹೆಗ್ಡೆ, ಅಪ್ಪಿ, ಟಿ.ಕೆ. ಸುಧೀರ್, ಫಾರೂಕ್ ಉಳ್ಳಾಲ್, ನಜೀರ್ ಬಜಾಲ್, ಎಸ್. ಅಬ್ಬಾಸ್, ಮನುರಾಜ್, ನವೀನ ಡಿ’ಸೋಜ, ರಮಾನಂದ ಪೂಜಾರಿ, ಅಶೋಕ್ ಡಿ.ಕೆ., ಮೋಹನ್ ಮೆಂಡನ್, ಜಸಿಂತಾ ಆಲ್ಫ್ರೆಡ್, ನಾಗವೇಣಿ, ಭಾರತಿ ಬಿ.ಎಂ, ಮಮತಾ ಶೆಣೈ, ಆಶಾ ಡಿ’ಸಿಲ್ವ, ಅಖಿಲಾ ಆಳ್ವ, ಶೈಲಜ, ಸಿದ್ಧೀಕ್ ಪಾರೆ, ಗಣೇಶ್ ಗುರುಪುರ, ನಾಗೇಶ್ ಕಂಬ್ಲ, ಲಕ್ಷ್ಮೀ ನಾಯರ್, ಸ್ಟೀವನ್ ಮರೋಳಿ, ಹಸನಬ್ಬ ಮೊದಲಾದರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English