ಮಂಗಳೂರು: ನಗರದ ಬಂಟ್ಸ್ ಹಾಸ್ಟೆಲ್‌ನ ಸಿದ್ಧಿವಿನಾಯಕ ಪ್ರತಿಷ್ಠಾನ, ಸಾರ್ವಜನಿಕ ಗಣೇಶೋತ್ಸವ ಸಮಿತಿಯಿಂದ ಆಗಸ್ಟ್ 29 ರಿಂದ 31 ರವರೆಗೆ ತೆನೆಹಬ್ಬ, ಗಣೇಶೋತ್ಸವ, ಅಷ್ಟೋತ್ತರ ಸಹಸ್ರ ನಾಳಿಕೇರ ಮಹಾಗಣಯಾಗ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಿದ್ಧಿ ವಿನಾಯಕ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್ ೨೮ರಂದು ನಗರದ ರಾಧಾಕೃಷ್ಣ ಮಂದಿರದಿಂದ ಬಂಟ್ಸ್‌ಹಾಸ್ಟೆಲ್‌ಗೆ ದೇವರ ವಿಗ್ರಹ ತರಲಾಗುವುದು. 29ರಂದು ಬೆಳಿಗ್ಗೆ ತೆನೆಹಬ್ಬ. ದೇವರ ಪ್ರತಿಷ್ಠೆ ಮೊದಲಾದ ಕಾರ್ಯಕ್ರಮವನ್ನು ಫಾದರ್ ಮುಲ್ಲರ್ ಆಸ್ಪತ್ರೆಯ ಡೀನ್ ಡಾ. ಜಯಪ್ರಕಾಶ್ ಆಳ್ವ ಉದ್ಘಾಟಿಸುವರು. ಸಚಿವರಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಯುಟಿ ಖಾದರ್ , ಸಂಸದ ನಳಿನ್ ಕುಮಾರ್ ಕಟೀಲ್ ಮೊದಲಾದವರು ಭಾಗವಹಿಸುವರು. ಸಂಜೆ 5ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಸಚಿವ ದಿನೇಶ್ ಗುಂಡುರಾವ್ ಮತ್ತಿತರರು ಭಾಗವಹಿಸುವರು. ಇದೇ ಸಂದರ್ಭದಲ್ಲಿ ಸಾಧಕರನ್ನೂ ಸನ್ಮಾನಿಸಲಾಗುವುದು ಎಂದರು.
ಪ್ರತಿ ದಿನ ವೈದಿಕ ಕಾರ್ಯಕ್ರಮಗಳ ಜತೆಗೆ ಧಾರ್ಮಿಕ ಸಭೆ, ಸಾಂಸ್ಕೃತಿ ಕಾರ್ಯಕ್ರಮ, ಸನ್ಮಾನ, ಅನ್ನಸಂತರ್ಪಣೆ ಕಾರ್ಯಕ್ರಮಗಳೂ ನಡೆಯಲಿವೆ. ಸಚಿವ ಅಭಯಚಂದ್ರ ಜೈನ್, ಜಿಲ್ಲಾಧಿಕಾರಿ ಎಬಿ ಇಬ್ರಾಹಿಂ ಮತ್ತಿತರರು ಭಾಗವಹಿಸುವರು. ಆಗಸ್ಟ್ 31 ರಂದು ಬೆಳಿಗ್ಗೆ 8.30 ಕ್ಕೆ 1008 ತೆಂಗಿನ ಕಾಯಿ ಮಹಾಗಣಯಾಗ ಆರಂಭಗೊಳ್ಳಲಿದ್ದು ಬೆಳಿಗ್ಗೆ 11 ಪೂರ್ಣಹುತಿ ನಡೆಯಲಿದೆ. ಬಳಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಆಗಸ್ಟ್ ೩೧ರಂದು ಮಧ್ಯಾಹ್ನ 3.30 ಕ್ಕೆ ಭಜನಾ ಕಾರ್ಯಕ್ರಮದ ಜತೆಗೆ ನಡೆಯುವ ಶೋಭಾ ಯಾತ್ರೆಯನ್ನು ಮುಂಬೈನ ಬಂಟರ ಸಂಘದ ಅಧ್ಯಕ್ಷ ಶಂಕರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಡಾ.ನರೇಶ್ ಶೆಟ್ಟಿ ಉದ್ಘಾಟಿಸುವರು ಎಂದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಕೃಷ್ಣಪ್ರಸಾದ್ ರೈ, ರವಿರಾಜ್ ಶೆಟ್ಟಿ , ದಿವಾಕರ ಸಾಮಾನಿ, ಜಯ ರಾಮ ಸಾಂತ, ಜಗನ್ನಾಥ್ ಶೆಟ್ಟಿ ಬಾಳ, ಸುಧಾಕರ ಪೂಂಜಾ ಹೊಸಬೆಟ್ಟು, ಶಶಿರಾಜ್ ಶೆಟ್ಟಿ ಕೊಳಂಬೆ, ಡಾ. ಆಶಾ ಜ್ಯೋತಿ ರೈ, ಜಯಲಕ್ಷೀ ಹೆಗ್ಡೆ, ಉಮೇಶ್ ರೈ, ಕೃಷ್ಣ ರಾಜ ಸುಲಾಯ, ಶ್ರೀನಿವಾಸ ಆಳ್ವ, ಸುರೇಶ್ ರೈ, ಸಂದೀಪ್ ಶೆಟ್ಟಿ ಮತ್ತಿತರರು ಇದ್ದರು.
Click this button or press Ctrl+G to toggle between Kannada and English