ಮಂಗಳೂರು, ನಗರದ ಸೂರ್ಯ ನಾರಾಯಣ ದೇವಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯ ಐವ್‌ನ್ ಡಿಸೋಜಾ ಸೋಮವಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ದೇವಸ್ಥಾನದ ನವೀಕರಣವಾಗುತ್ತಿರುವ ಮಾಹಿತಿ ನೀಡಿದರು.
16ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನ ನವೀಕರಿಸಲಾಗುತ್ತಿದ್ದು, ಇದಕ್ಕೆ ಸರಕಾರದ ವತಿಯಿಂದ ಸಹಾಯಧನ ಒದಗಿಸಲು ಸಹಕರಿಸುವಂತೆ ಕೋರಿದರು. ಪ್ರವಾಸೋಧ್ಯಮ ಇಲಾಖೆಯಿಂದ ವಿಶ್ರಾಂತಿ ಧಾಮವನ್ನಾಗಿ ಬೆಳೆಸುವ ಯೋಜನೆಯ ಪ್ರಸ್ತಾಪ ಕೂಡ ಇಡಲಾಯಿತು. ಮಂಗಳೂರು ದಸರಾ ಉದ್ಘಾಟನೆಗಾಗಿ ಮಂಗಳೂರಿಗೆ ಬರುವ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ದೇವಸ್ಥಾನಕ್ಕೆ ಕರೆತರುವಂತೆ ಕೂಡ ದೇವಸ್ಥಾನದ ಆಡಳಿತ ಮಂಡಳಿಯವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಪೊರೇಟರ್‌ಗಳಾದ ಪ್ರವೀಣ್ ಆಳ್ವಾ, ಆಶಾ ಡಿಸಿಲ್ವಾ, ಪ್ರಕಾಶ್ ಮತ್ತಿತರರು ಇದ್ದರು.
ರಾಜ್ಯದಲ್ಲಿರುವ ಎಂಟು ಸೂರ್ಯನಾರಾಯಣ ದೇವಸ್ಥಾನಗಳಲ್ಲಿ ಮಂಗಳೂರಿನ ದೇವಸ್ಥಾನ ಪ್ರಮುಖ ಎಂದು ಪರಿಗಣಿತವಾಗಿದೆ.

Click this button or press Ctrl+G to toggle between Kannada and English