ವೈಜ್ಙಾನಿಕ ಕೋಳಿ ತ್ಯಾಜ್ಯ ವಿಲೆಗೆ ಸ್ಥಳೀಯ ಆಡಳಿತಗಳು ಕ್ರಮವಹಿಸಿ-ಎ.ಬಿಇಬ್ರಾಹಿಂ

11:51 PM, Wednesday, August 27th, 2014
Share
1 Star2 Stars3 Stars4 Stars5 Stars
(5 rating, 4 votes)
Loading...

dc ab ibrahim

ಮಂಗಳೂರು : ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೋಳಿ ಮಾಂಸದಂಗಡಿಗಳು, ಇತರೆ ಮಾಂಸದಂಗಡಿಗಳು ತಮ್ಮಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಸಮರ್ಪಕವಾಗಿ/ವೈಜ್ಙಾನಿಕವಾಗಿ ವಿಲೆ ಮಾಡದೆ ಅವುಗಳನ್ನು ನದಿಗಳಲ್ಲಿ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಬಿಸಾಡುತ್ತಿರುವುದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿರುವುದರ ಬಗ್ಗೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಕಳವಳ ವ್ಯಕ್ತಪಡಿಸಿದ್ದು, ಕೂಡಲೇ ಎಲ್ಲಾ ಸ್ಥಳೀಯ ಆಡಳಿತ ಸಂಸ್ಥೆಗಳು ಇನ್ನು ಒಂದು ತಿಂಗಳಲ್ಲಿ ತಮ್ಮಲ್ಲಿರುವ ಇಂತಹ ಅಂಗಡಿಗಳ ಸಮೀಕ್ಷೆ ನಡೆಸಿ ಅವುಗಳಿಂದ ಉತ್ಪತ್ತಿಯಾಗುವ ತ್ಯಾಜ್ಯ ಬಗ್ಗೆ ವರದಿಯನ್ನು ತಯಾರು ಮಾಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಅವರು ಇಂದು ಈ ಬಗ್ಗೆ ತಮ್ಮ ಕಛೇರಿಯಲ್ಲಿ ಈ ಬಗ್ಗೆ ಚರ್ಚಿಸಿ ನಂತರ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆಪ್ಟೆಂಬರ್ ಮಾಹೆಯಲ್ಲಿ ಸಮೀಕ್ಷೆ ನಡೆಸಿ ತ್ಯಾಜ್ಯವನ್ನು ಸಮರ್ಪಕವಾಗಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಹಾಗೂ ಜಲಮೂಲಗಳು ಕಲುಷಿತವಾಗದಂತೆ ತ್ಯಾಜ್ಯ ವಿಲೆ ಮಾಡುವಂತೆ ಎಲ್ಲಾ ಮಾಂಸದಂಗಡಿಗಳಿಗೆ ನೋಟೀಸ್ ನೀಡುವಂತೆ ಹಾಗೂ ಕಾನೂನು ಉಲ್ಲಂಘಿಸುವವರ ವಿರುದ್ದ ಮುನಿಸಿಪಲ್ ಕಾಯ್ದೆಯಡಿಯಲ್ಲಿ ಅಕ್ಟೋಬರ್ ಮಾಹೆಯಿಂದ ಕ್ರಮ ಜರುಗಿಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಸಭೆಯಲ್ಲಿ ಮಂಗಳೂರು ಉಪವಿಭಾಗಧಿಕಾರಿ ಡಾ|ಅಶೋಕ್, ಯೋಜನಾ ನಿರ್ದೇಶಕರು ಮುನಿಸಿಪಲ್ ಕೋಶ ತಾಕತ್ರಾವ್ ಮುಂತಾದವರು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English