ಸೆ 8 ಕನ್ಯಾ ಮರಿಯಮ್ಮನವರ ಜಯಂತಿ ದ.ಕ ಮತ್ತು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆಗೆ ಮನವಿ

12:24 AM, Tuesday, September 2nd, 2014
Share
1 Star2 Stars3 Stars4 Stars5 Stars
(5 rating, 6 votes)
Loading...
Kanya Meri

ಮಂಗಳೂರು : ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮಂಗಳೂರಿನ ಬಿಷಪ್ ರೈ.ರೆ.ಡಾ ಅಲೋಶಿಯಸ್ ಪೌಲ್ ಡಿಸೋಜ, ಬೆಂಗಳೂರಿನ ಆರ್ಚ್ ಬಿಷಪ್ ರೈ.ರೆ.ಡಾ ಬರ್ನಾಡ್ ಮೋರಾಸ್ ರವರು ರಾಜ್ಯ ಸರಕಾರದ ಸಚಿವರಾದ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಆರೋಗ್ಯ ಸಚಿವರು, ಶ್ರೀ ವಿನಯಕುಮಾರ್ ಸೊರಕೆ ನಗರಾಬಿವ್ರದ್ದಿ ಸಚಿವರು,ಶ್ರೀ ಅಭಯಚಂದ್ರ ಕ್ರೀಡಾ ಮತ್ತು ಮೀನುಗಾರಿಕಾ ಸಚಿವರು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್ ಲೋಬೊ, ವಿದಾನ ಪರಿಶತ್ತಿನ ಸದಸ್ಯರಾದ ಶ್ರೀ ಐವನ್ ಡಿಸೋಜ ಹಾಗೂ ಮಾಜಿ ಸಚಿವ ಬಿ.ಎ ಮೊಹಿಯುದ್ದೀನ್ ಅವರನ್ನೊಳಗೊಂಡ ನೀಯೋಗ ಇಂದು ಬೆಂಗಳೂರಿನಲ್ಲಿ ಮನವಿಯನ್ನು ಸಲ್ಲಿಸಿ ಸೆ.8 ಕನ್ಯಾಮರಿಯಮ್ಮನವರ ಜನ್ಮದಿನಾಚರಣೆಯ ದಿವಸವನ್ನು ದ.ಕ ಮತ್ತು ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ ದಿವಸವನ್ನಾಗಿ ಘೊಷಿಸಬೇಕೆಂದು ಆಗ್ರಹಿಸಿದರು.

ಈ ಎರಡು ಜಿಲ್ಲೆಗಳಲ್ಲಿ ಕ್ರೈಸ್ತರು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಆ ದಿವಸದಂದು ಎಲ್ಲಾ ಚರ್ಚುಗಳಲ್ಲಿ ವಿಶೇಷ ಪೂಜೆ, ಮೆರವಣಿಗೆ ಹಾಗೂ ತೆನೆಗಳನ್ನು ವಿತರಿಸುವುದರ ಮೂಲಕ ಬಹಳ ಶ್ರಧ್ದೆಯಿಂದ ಆ ದಿವಸವನ್ನು ತೆನೆಹಬ್ಬವನ್ನಾಗಿ ಆಚರಿಸುತ್ತಿದ್ದಾರೆ. ಸುಮಾರು ೨೫,೦೦೦ ಕ್ಕೂ ಅಧಿಕ ಸಹಿಯುಳ್ಳ ಮನವಿ ಪತ್ರವನ್ನು ಮಾನ್ಯ ಮುಖ್ಯಮಂತ್ರಿಯವರಿಗೆ ಸಲ್ಲಿಸಿ ಇದನ್ನು ವಿಶೇಷವಾಗಿ ಪರಿಗಣಿಸಬೇಕೆಂದು ಆಗ್ರಹಿಸಿದರು. ಈಗಾಗಲೇ ಶಾಸಕರಾದ ಶ್ರೀ ಜೆ.ಆರ್ ಲೋಬೊರವರು ಮಂಗಳೂರು ಕಥೋಲಿಕ ಸಭಾದವರ ಬೇಡಿಕೆಯಂತೆ ಸರಕಾರಕ್ಕೆ ಮನವಿಯನ್ನು ಸಲ್ಲಿಸಿರುತ್ತಾರೆ ಅದೇ ರೀತಿ ದ.ಕ ಜಿಲ್ಲಾದಿಕಾರಿಯವರು ಕೂಡ ಸರಕಾರಕ್ಕೆ ಈ ಬಗ್ಗೆ ಮನವಿಯನ್ನು ಸಲ್ಲಿಸಿರುವ ಬಗ್ಗೆ ತಿಳಿದುಬಂದಿದೆ ಕೊಡಗು ಜಿಲ್ಲೆಯ ಅಲ್ಲಿಯ ಹುತ್ತೇರಿ ಹಬ್ಬಕ್ಕೆ ಈ ಹಿಂದೆಯೇ ಸರಕಾರವು ರಜೆಯನ್ನು ಘೊಷಿಸಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English