ಫೆ.20ರಂದು ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ (21 ಮತ್ತು 6 ಕಿ.ಮೀ)

8:13 PM, Saturday, February 5th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ವಿಜಯಾ ಬ್ಯಾಂಕಿನವರ ಸಂಯೋಜನೆ ಪ್ರಾಯೋಜಕತೆಯಲ್ಲಿ ಮುಂದಿನ ಫೆ.20ರಂದು ಬೆಳೆಗ್ಗೆ 6ಗಂಟೆಗೆ ನೆಹರೂ ಮೈದಾನದಿಂದ ಹೊರಟು ನಗರ ಉತ್ತರ ಭಾಗದ ಮಂಗಳಾ ಕ್ರೀಡಾಂಗಣದ ತನಕ ‘ಹಾಫ್ ಮ್ಯಾರಥಾನ್ ಓಟ-2011’ ಜರಗಲಿದೆಯೆಂದು ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಇಂದು ಬೆಳಿಗ್ಗೆ ತಮ್ಮ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯೊಂದರಲ್ಲಿ ವಾರ್ತಾಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ಬಂದರು ಹಾಗೂ ಉಸ್ತುವಾರಿ ಮಂತ್ರಿ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ನಗರದ ಸಂಸದರಾದ ನಳಿನ್ ಕುಮಾರ ಹಾಗೂ ಪೊಲೀಸು ಇಲಾಖಾಧಿಕಾರಿಗಳಾದ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್, ಸೀಮಾಂತ್ ಕುಮಾರ್ ಸಿಂಗ್, ಪ್ರಭುಲಿಂಗ ಕಾವಳಕಟ್ಟಿ (ಉಪ ಜಿಲ್ಲಾಧಿಕಾರಿ) ಹಾಗೂ ಶಾಸಕ ಕೆಳಮನೆ ಉಪಸಭಾಧಿಪತಿ ನಂದಾವರ ಯೋಗೀಶ್ ಭಟ್ ಹಾಜರಿದ್ದರು.
ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟಸಭೆಯನ್ನುದೇಶಿಸಿ ಮಾತಾಡಿದ ಉಸ್ತುವಾರಿ ಮಂತ್ರಿ ಕೃಷ್ಣ ಪಾಲೆಮಾರ್ ಮಂಗಳೂರಿನ ಸಮಗ್ರ ಚಿತ್ರಣ ಹಾಗೂ ಅಭಿವೃದ್ಧಿಯ ಗುರಿಯೊಂದಿಗೆ ನಗರದ ಹಸಿರು ಪ್ರಾಂತ್ಯವನ್ನೂ ಮಾಡುವ ಆಸೆ ವ್ಯಕ್ತಪಡಿಸಿದರು. ಈ ಪ್ರಯುಕ್ತ ಜಿಲ್ಲೆಯ ಎಲ್ಲಾ ದೃಢಕಾಯ ನಾಗರಿಕರು ಸೇರಿ
ಒಮ್ಮನಿಸ್ಸಿನಿಂದ ಈ ಬಂದರು ನಗರದಲ್ಲಿ ಸುಮಾರು 21 ಕಿ.ಮೀ ಅರೆ ಸುದೀರ್ಘ ಓಟ ಹಾಗೂ 6ಕಿ.ಮೀ ಅಡ್ಡ ಹಾದಿಯ ಓಟವನ್ನೂ ಮುಂದಿನ 20ನೇ ದಿನಾಂಕ, ಸೇರಿಸಿ ನಡೆಸುವ ನಿರ್ಧಾರ ಕೈಗೊಂಡ ಬಗ್ಗೆ ಸೂಚಿಸಿದರು.
ಜನತೆಯ ಏಕತೆಯ ಚಿಹ್ನೆಯಾಗಿ ಈ ಎರಡು ಓಟಗಳಲ್ಲಿ ಎಲ್ಲಾವರ್ಗಗಳ ಜನರು ಪಾಲುಗೊಳ್ಳುವಂತೆ ಅವರು ವಿನಂತಿಸಿದರು. ಓಟದ ಮೂಲ ಘೋಷಣೆ  “Clean, Green Progressive Mangalore”
(ಅಂದರೆ ಸ್ವಚ್ಛ, ಹಸಿರಾದ, ಮುನ್ನಡೆಯುಳ್ಳ ಮಂಗಳೂರು ಶಹರ) ಎಂಬುದಾಗಿ ಸಂಘಟಕರು ತೀರ್ಮಾನಿಸಿದ್ದಾರೆ ಎಂದರು.
ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟಅಥಿತಿಗಳು ಮ್ಯಾರಥಾನಿನ ವಿವಿಧ ಬ್ಯಾನರ್ ಗಳನ್ನು ಬಿಡುಗಡೆಗೊಳಿಸಿದರು,
ಓಟವು ನೆಹರು ಮೈದಾನ , ಹಂಪಣ ಕಟ್ಟೆ, ಬಾವುಟಗುಡ್ಡೆ, ಜ್ಯೋತಿ ಸಿನಿಮಾ ವರ್ತುಲ, ಬಂಟರ ಹಾಸ್ಟೆಲ್, ಕರಂಗಲಪಾಡಿ, ಜೈಲು ರಸ್ತೆ, ಕೆನರಾ ಉನ್ನತ ಶಾಲಾ ರಸ್ತೆ, ಮಹಾತ್ಮಾ ಗಾಂಧೀ ರಸ್ತೆ, ಲೇಡಿಹಿಲ್ ರಸ್ತೆ ದಾರಿಯಾಗಿ ಮಂಗಳಾ ಕ್ರೀಡಾಂಗಣ ತಲುಪುವಂತೆ ಕೋರಲಾಗಿದೆ.
ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟಓಟದಲ್ಲಿ ಆಸಕ್ತರೆಲ್ಲರೂ ಭಾಗವಹಿಸಿ ನಗದು ಬಹುಮಾನವನ್ನು ಗೆಲ್ಲುವ ಅವಕಾಶವಿದೆಯೆಂದು ಡಿಸಿ ಯಾದವರು ಹೇಳಿದರು. ಆ ಪ್ರಕಾರ 21 ಕಿ.ಮೀ ಸುದೀರ್ಘ ಓಟಕ್ಕೆ ರೂ.21 ಸಾವಿರ, 10 ಸಾವಿರ, 5 ಸಾವಿರದ ಮೊದಲ ಮೂರು ವಿಜೇತರು ಪಡೆಯಲಿದ್ದಾರೆ. ಮುಂದೆ 3 ಸಾವಿರ (4ನೇ), 2 ಸಾವಿರ (5ನೇ) ಹಾಗೂ 1 ಸಾವಿರ ರೂಪಾಯಿಗಳ 5 ಬಹುಮಾನಗಳನ್ನು ಪ್ರಶಂಸಕವಾಗಿ ಆಯಾ ನಿರ್ಧಾರಿತ ಆಟಗಾರ ಆಟಗಾರ್ತಿಯರಿಗೆ ನೀಡಲಾಗುವುದೆಂದಿದ್ದಾರೆ.
ಅದೇ ರೀತಿ, 6 ಕಿ.ಮೀ ಒಳನಾಡಿನ ಓಟ (ಕ್ರಾಸ್ ಕಂಟ್ರಿ) ದಲ್ಲಿ ರೂ.3 ಸಾವಿರ, 2 ಸಾವಿರ ಹಾಗೂ 1 ಸಾವಿರದ ಮೂರು ಮೊದಲ ನಗದು ಬಹುಮಾನಗಳಿವೆ. ಅನಂತರ ರೂ.500 (4ನೇ), 500(5ನೇ) ಹಾಗೂ 6ನೇ ಸ್ಥಾನಕ್ಕೆ ರೂ 500 (ವಿಶೇಷ ಪುರಸ್ಕಾರ) ಕೊಡಲಾಗುವುದೆಂದರು.
ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟನೊಂದಾವಣೆಗಾಗಿ, ಜಿಲ್ಲಾಧಿಕಾರಿಯವರ ಕಚೇರಿಗೆ ಸಂಪರ್ಕ ಆನ್ಲೈನ್ ಯಾ ವೆಬ್ ಸೈಟ್, ಇಲ್ಲವೇ ವಿಜಯ ಬ್ಯಾಂಕಿನ ಅಧಿಕೃತ ವೆಬ್ ಸೈಟ್ ನೋಡಿ ಹಾಗೂ ಅರ್ಜಿಗಳನ್ನು ಭರ್ತಿ ಮಾಡಿ ಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ಯುವಜನ ಸೇವಾ ಕ್ರೀಡಾ ಇಲಾಖೆ (ಮಂಗಳಾ ಕ್ರೀಡಾಂಗಣ) ಅಥವಾ ಸಹಾಯಕ ಆಯುಕ್ತರ ಕಚೇರಿ, ಯಾ ರವೀಂದ್ರ ನಾಥ, ವಿಜಯಾ ಬ್ಯಾಂಕ್ ಇವರ ದೂರವಾಣಿಗೆ ಕರೆ ನೀಡಿ ತಿಳಿಯಬಹುದು ಎಂದಿದ್ದಾರೆ.

ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ

ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ

ಅರೆ ಮ್ಯಾರಥಾನ್ ಹಾಗೂ ಒಳನಾಡಿನ ಓಟ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English