ರಸ್ತೆಯನ್ನೆ ನುಂಗಿದ ಪ್ಲಾಮ ಬಿಲ್ಡರ್ ಕಟ್ಟಡ, ಶಾಸಕ, ಅಧಿಕಾರಿಗಳಿಗೆ ಕ್ಯಾರೇ ಅನ್ನದ ಮಾಲೀಕ

6:43 PM, Wednesday, September 3rd, 2014
Share
1 Star2 Stars3 Stars4 Stars5 Stars
(4 rating, 6 votes)
Loading...
Plama

ಮಂಗಳೂರು : ನಗರದಲ್ಲಿ ಕಟ್ಟಡ ನಿಯಮಾವಳಿಗಳ ಉಲ್ಲಂಘನೆ ಸರ್ವೇ ಸಮಾನ್ಯವಾಗಿದ್ದರೂ, ಈಗ ಸಾರ್ಜನಿಕರ ರಸ್ತೆಯವನ್ನೇ ಆಕ್ರಮಿಸಿ ಅಪಾರ್ಟ್ ಮೆಂಟ್ ನಿರ್ಮಿಸುತ್ತಿರುವ ಪ್ರಕರಣ ಫಳ್ನೀರ್ ಕಾಪ್ರಿಗುಡ್ಡದಲ್ಲಿ ಬೆಳಕಿಗೆ ಬಂದಿದೆ.

ಸ್ಥಳೀಯ ಶಾಸಕ ಮತ್ತು ಮಹಾನಗರಪಾಲಿಕೆ ನಗರ ಯೋಜನೆ ಅಧಿಕಾರಿಗಳ ಸೂಚನೆಗೂ ಕ್ಯಾರೇ ಅನ್ನದ ಬಿಲ್ಡರ್, ಸರಕಾರಕ್ಕೆ ಮಾಹಿತಿ ನೀಡಿದ ಸಾರ್ವಜನಿಕರಿಗೆ ಬೆದರಿಕೆಯೊಡ್ಡಿರುವುದು ಮಂಗಳೂರು ನಗರ ಪಾಲಿಕೆಯಲ್ಲಿ ಇತ್ತೀಚಿಗಿನ ದಿನಗಳಲ್ಲಿ ಯಾವ ಕಾನೂನು ಪಾಲನೆ ಆಗುತ್ತಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ.

ಫಳ್ನೀರಿನ ಕಾಪ್ರಿಗುಡ್ಡೆಯಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಮ ಗಾರ್ಡೇನಿಯ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಮಾಲೀಕ ರಸ್ತೆಯಲ್ಲೇ ಗೇಟ್ ಕೀಪರ್ ರೂಮ್ ನಿರ್ಮಿಸಿದ್ದಾರೆ. ಮೂವತ್ತು ಅಡಿ ಅಗಲವಿದ್ದ ರಸ್ತೆಯಲ್ಲಿ ಮೂರು ಅಡಿ ರಸ್ತೆಯನ್ನು ಕಾವಲುಗಾರನ ಕೊಠಡಿಗಾಗಿ ಆಕ್ರಮಿಸಲಾಗಿದೆ.

ಕಾನೂನು ಬಾಹಿರವಾಗಿ ರಸ್ತೆಯಲ್ಲಿ ಕಟ್ಟಡ ನಿರ್ಮಿಸುತ್ತಿರುವುದನ್ನು ಕೆಲವೇ ಕೆಲವು ಮಂದಿ ಸಾರ್ವಜನಿಕರು ಆಕ್ಷೇಪಿಸಿ ಸ್ಥಳೀಯ ಶಾಸಕ ಜೆ.ಆರ್.ಲೋಬೊ ಅವರಿಗೆ ದೂರು ನೀಡಿದ್ದರು. ಶಾಸಕರು ಮಹಾನಗರಪಾಲಿಕೆಯ ನಗರ ಯೋಜನೆ ಅಧಿಕಾರಿ ಬಾಲಕೃಷ್ಣ ಗೌಡ ಅವರಿಗೆ ಸೂಚನೆ ನೀಡಿರುವ ಮೇರೆಗೆ ಸ್ಥಳಕ್ಕೆ ಜುಲೈ 29ರಂದು ಭೇಟಿ ನೀಡಿ ಕಾನೂನು ಬಾಹಿರ ನಿರ್ಮಾಣವನ್ನು ಸ್ಥಗಿತ ಮಾಡಿ ಅಕ್ರಮವಾಗಿ ನಿರ್ಮಿಸಲಾದ ಗೋಡೆಯನ್ನು ಕೆಡವವುವಂತೆ ಆದೇಶ ನೀಡಿದ್ದರು.

ಆದರೆ, ಆಗಸ್ಟ್ 25ರಂದು ಮತ್ತೆ ಅಕ್ರಮ ಗೋಡೆ ನಿರ್ಮಾಣ ಕಾರ್ಯ ಆರಂಭವಾದಾಗ ಮತ್ತೆ ಸಾರ್ವಜನಿಕರು ಅತಿಕ್ರಮಣ ವಿರುದ್ಧ ಪಾಲಿಕೆಗೆ ದೂರು ನೀಡಿದರು.
ಸೆಪ್ಟೆಂಬರ್ 3ರಂದು ಸ್ಥಳಕ್ಕೆ ಸ್ಥಳೀಯ ಮನಪಾ ಸದಸ್ಯ ರವೂಫ್ ಅವರೊಂದಿಗೆ ಭೇಟಿ ನೀಡಿದ ನಗರ ಯೋಜನೆ ಅಧಿಕಾರಿ ಬಾಲಕೃಷ್ಣ ಗೌಡ ಅವರು ಅಕ್ರಮ ನಿರ್ಮಾಣವನ್ನು ಸ್ಥಗಿತ ಮಾಡಲು ಸೂಚಿಸಿದಲ್ಲದೆ, ಸ್ಥಳ ಗುರುತು ಮಾಡಿದ್ದರು. ಮಾತ್ರವಲ್ಲದೆ, ಮತ್ತೆ ಉಲ್ಲಂಘನೆ ನಡೆಸಿದರೆ ಕಾನೂನು ಕ್ರಮಕೈಗೊಳ್ಳಬೇಕೆಂದು ಸೂಚಿಸಿದ್ದರು.

ಮನಪಾ ಸದಸ್ಯ ಮತ್ತು ಅಧಿಕಾರಿ ಸ್ಥಳದಿಂದ ತೆರಳಿದ ಕೂಡಲೇ ಅಲ್ಲಿಗೆ ಆಗಮಿಸಿದ ಕಟ್ಟಡದ ಮಾಲೀಕನು ರಸ್ತೆಯಲ್ಲಿ ಕಟ್ಟಡ ನಿರ್ಮಿಸಿದರೆ ಕೇಳುವವರು ಯಾರು. ಎಲ್ಲಿ ಬೇಕಾದರು ನಿರ್ಮಿಸುತ್ತವೆ ಅದನ್ನು ಕೇಳುವ ಜನ ಯಾರು ಎಂದು ಈ ದೇಶದ ಕಾನೂನು ವ್ಯವಸ್ಥೆಯನ್ನೇ ಪ್ರಶ್ನಿಸಿ ಸ್ಥಳೀಯರಿಗೆ ಬೆದರಿಕೆ ಹಾಕಿದ ಘಟನೆ ನಡೆಯಿತು.

ಮಂಗಳೂರಿನಲ್ಲಿ ಪರಿಸ್ಥಿತಿ ಹೀಗಾದರೆ ಯಾರಿಗೆ ದೂರು ನೀಡಬೇಕು ಎಂದು ಸ್ಥಳೀಯರು ಸರಕಾರವನ್ನು ಪ್ರಶ್ನಿಸಿದ್ದಾರೆ.

Plama

ಮುದ್ರಿಸಿ ಮುದ್ರಿಸಿ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English