ಬೆಂಗಳೂರು : ದೇಶಾದ್ಯಂತ ಕುತೂಹಲ ಕೆರಳಿಸಿರುವ, ಸುಮಾರು 18 ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಅಂತಿಮ ತೀರ್ಪು ಹೊರ ಬಿದ್ದಿದ್ದು ಅವರನ್ನು ದೋಷಿ ಎಂದು ಶನಿವಾರ ನ್ಯಾಯಾಲಯ ಹೇಳಿದೆ.
ಬೆಂಗಳೂರಿನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಾನ್ ಮೈಕಲ್ ಕುನ್ಹಾ ಅವರು ಜಯಲಲಿತಾ ಅವರ ವಿರುದ್ದ ಮಾಡಲಾಗಿರುವ ಆರೋಪ ಭೃಷ್ಟಾಚಾರ ತಡೆ ಖಾಯ್ದೆ ಸೆಕ್ಷನ್ 13(1)ಇ ಅಡಿ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದಾರೆ.
ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಜಯಲಲಿತಾ ಅವರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಜಯಲಲಿತಾ ಅವರು ಶಾಸಕತ್ವ ಅನರ್ಹ ವಾಗಿದ್ದು, ಹೈಕೋರ್ಟ್‌ನಿಂದ ತೀರ್ಪಿಗೆ ತಡೆ ಬಂದಲ್ಲಿಮಾತ್ರ ಶಾಸಕತ್ವದಲ್ಲಿ ಮುಂದುವರಿಯಬಹುಗಿದೆ.
ಸಿಎಂ ಹುದ್ದೆಯನ್ನು ಜಯಲಲಿತಾ ತೆರವುಗೊಳಿಸಬೇಕಾಗಿದ್ದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಹಣಕಾಸು ಸಚಿವ ಓ.ಪನೀರ್‌ಸೆಲ್ವಂ ಅವರು ಮುಖ್ಯಮಂತ್ರಿ ಹುದ್ದೆಗೆರುವ ಸಾಧ್ಯತೆಗಳಿವೆ.
Click this button or press Ctrl+G to toggle between Kannada and English