ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪರಿಶಿಷ್ಟ ವರ್ಗದ ವಿಧವೆಯರಿಂದ ಅರ್ಚನೆ

12:26 AM, Tuesday, September 30th, 2014
Share
1 Star2 Stars3 Stars4 Stars5 Stars
(5 rating, 5 votes)
Loading...

Kudroli priest

ಮಂಗಳೂರು: ಪರಿಶಿಷ್ಟ ವರ್ಗದ ಇಬ್ಬರು ಮಹಿಳೆಯರು ಅರ್ಚಕಿ ಸ್ಥಾನ ಸ್ವೀಕರಿಸಿ ಕುದ್ರೋಳಿ ಶ್ರೀ ಗೋಕರ್ಣನಾಥ ಹಾಗೂ ಪರಿವಾರ ದೇವರುಗಳ ಗರ್ಭಗುಡಿ ಪ್ರವೇಶಿಸಿ ಪೂಜಾ ವಿಧಾನಗಳನ್ನು ನೆರವೇರಿಸಿದರು.

ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿದ ಮಂಗಳೂರು ಉರ್ವ ಚಿಲಿಂಬಿಯ ದಿ| ಸದಾಶಿವ ಅವರ ಪತ್ನಿ ಲಕ್ಷ್ಮೀ (65) ಹಾಗೂ ಉಳ್ಳಾಲ ಕುತ್ತಾರು ರಾಣಿಪುರದ ದಿ| ಕೃಷ್ಣಪ್ಪ ಅವರ ಪತ್ನಿ ಚಂದ್ರಾವತಿ (46) ಅವರು ನವರಾತ್ರಿ ಹಾಗೂ ದಸರಾ ಸಂಭ್ರಮದ ಸಂದರ್ಭದಲ್ಲಿ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯದಲ್ಲಿ ಅರ್ಚಕ ಸ್ಥಾನ ಸ್ವೀಕರಿಸಿದರು. ಲೋಕೇಶ ಶಾಂತಿ ಇವರಿಗೆ ಪೂಜಾ ವಿಧಿವಿಧಾನಗಳ ಬಗ್ಗೆ ತರಬೇತಿ ನೀಡಿದ್ದಾರೆ.

2 ವರ್ಷಗಳ ಹಿಂದೆ ಇಂತಹ 5,000 ಮಹಿಳೆಯರ ಪಾಲ್ಗೊಳ್ಳುವಿಕೆಯೊಂದಿಗೆ ಚಂಡಿಕಾ ಹೋಮ, ಬೆಳ್ಳಿರಥೋತ್ಸವ ಹಾಗೂ ಸೀರೆ, ಕುಂಕುಮ, ಹೂವು ಮತ್ತು ಬಳೆಯನ್ನು ಪ್ರಸಾದ ರೂಪದಲ್ಲಿ ನೀಡಿ ಸಾಮಾಜಿಕ ಪರಿವರ್ತನೆಯೊಂದಕ್ಕೆ ನಾಂದಿ ಹಾಡಿದ್ದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಪತಿಯರನ್ನು ಕಳೆದುಕೊಂಡ ಇಬ್ಬರು ಮಹಿಳೆಯರನ್ನು ಕಳೆದ ವರ್ಷ ಅರ್ಚಕರಾಗಿ ನೇಮಕ ಮಾಡಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English