ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವರಾತ್ರಿ ಮೆರವಣಿಗೆ ಶನಿವಾರ ಸಂಜೆ ಆರಂಭಗೊಂಡ ‘ಬೃಹತ್ ಮಂಗಳೂರು ದಸರಾ ಮೆರವಣಿಗೆ ರವಿವಾರ ಮುಂಜಾನೆ ಸಮಾಪನಗೊಂಡಿತು.
ಶೋಭಾ ಯಾತ್ರೆಯಲ್ಲಿ ಶ್ರೀಶಾರದೆ, ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರು, ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸ್ತಬ್ಧಚಿತ್ರಗಳು; ಕೇರಳದ ಚೆಂಡೆ ವಾದ್ಯ, ವಿವಿಧೆಡೆಯ ಜಾನಪದ ಕಲಾ ನೃತ್ಯ ತಂಡಗಳು, ಮಹಾರಾಷ್ಟ್ರದ ಡೋಲು, ಕರಾವಳಿ ಹುಲಿವೇಷ ಸಹಿತ ಪಾರಂಪರಿಕ ವೈವಿಧ್ಯ, ಆಂಧ್ರದ ಬಾಲಮುರಳೀಕೃಷ್ಣ ಕೋಲಾಟಂ, ಕಲ್ಲಡ್ಕದ ಶಿಲ್ಪ ಗೊಂಬೆ, ತ್ರಿಶ್ಯೂರಿನ ವರ್ಣದ ಕೊಡೆಗಳು, ವಾದ್ಯವೃಂದ, ಕರಾವಳಿಯ ಅನೇಕ ಪುಣ್ಯ ಕ್ಷೇತ್ರಗಳ ಸಹಕಾರದಿಂದ 100ಕ್ಕೂ ಹೆಚ್ಚು ಟ್ಯಾಬ್ಲೋಗಳು ಪಾಲ್ಗೊಂಡವು.
ಶ್ರೀ ಕ್ಷೇತ್ರದಿಂದ -ಕಂಬ್ಲ ಮಾರ್ಗವಾಗಿ ಮಣ್ಣಗುಡ್ಡೆ-ಲೇಡಿಹಿಲ್-ಲಾಲ್‌ಭಾಗ್, ಬಲ್ಲಾಳ್‌ಭಾಗ್, ಪಿವಿಎಸ್, ನವಭಾರತ್, ಕೆ.ಎಸ್. ರಾವ್ ರಸ್ತೆ-ವಿ.ವಿ. ಕಾಲೇಜು-ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ರಥಬೀದಿ-ಅಳಕೆ ಮೂಲಕ ಶ್ರೀಕ್ಷೇತ್ರಕ್ಕೆ ತಲುಪಿತು
ಶಾಸಕರಾದ ಜೆ.ಆರ್. ಲೋಬೋ, ಮೊದಿನ್ ಬಾವ, ಮೇಯರ್ ಮಹಾಬಲ ಮಾರ್ಲ, ಮಾಜಿ ಸಚಿವ ಕೆ. ವಿಜಯ್ ಕುಮಾರ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.
ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯ ಸಿ. ಸುವರ್ಣ, ಸಹಾಧ್ಯಕ್ಷೆ ಊರ್ಮಿಳಾ ರಮೇಶ್ ಕುಮಾರ್, ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಕೆ. ರಾಘವೇಂದ್ರ ಕೂಳೂರು, ಬಿ. ಮಾಧವ ಸುವರ್ಣ, ಪದ್ಮರಾಜ್ ಆರ್., ಹರಿಕೃಷ್ಣ ಬಂಟ್ವಾಳ್, ಬಿ.ಕೆ. ತಾರಾನಾಥ್, ರವಿಶಂಕರ ಮಿಜಾರ್, ಕೆ. ಮಹೇಶ್ಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಸೆ. 25ರಂದು ನವದುರ್ಗೆಯರು, ಶ್ರೀಶಾರದೆ, ಮಹಾಗಣಪತಿ ಪ್ರತಿಷ್ಠೆ ಸಹಿತ ಆರಂಭವಾದ ಈ ನವರಾತ್ರಿಯಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ ದಾಖಲೆ ನಿರ್ಮಾಣವಾಯಿತು.
Click this button or press Ctrl+G to toggle between Kannada and English