ಮಂಗಳೂರು : ಮುಸಲ್ಮಾನ ಬಾಂಧವರು ತ್ಯಾಗ ಬಲಿದಾನದ ಹಬ್ಬವಾದ ಈದ್ -ಉಲ್- ಅದಾ(ಬಕೀದ್) ವನ್ನು ಭಾನುವಾರ ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಆಚರಿಸಿದರು.
ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಈದ್ಗಾ ಮೈದಾನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ ಮುಸ್ಲಿಂ ಭಾಂಧವರು ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಮಂಗಳೂರು ಕಾಜ್ಹಿ ತೋಕ ಅಹಮ್ಮದ್ ಮುಸ್ಲಿಯಾರ್ ಈದ್ -ಉಲ್- ಅದಾ ಸಂದೇಶವನ್ನು ನೀಡಿದರು. ಹಿಂದೆ ದೇವರ ಆಜ್ಞೆಯ ಮೇರೆಗೆ ಪ್ರವಾದಿ ಇಬ್ರಾಹಿಂ ರು ತನ್ನ ಮಗನನ್ನೇ ದೇವರಿಗೆ ಬಲಿ ನೀಡಲು ಮುಂದಾದ ಹಿನ್ನಲೆಯಲ್ಲಿ ಬಕ್ರೀದ್ ಹಬ್ಬ ಮಹತ್ವ ಪಡೆದುಕೊಂಡಿದೆ.
ಎಲ್ಲೆಡೆ ತ್ಯಾಗದ ಸಂಕೇತವಾಗಿ (ಕುರಿ, ಆಡು )ಪ್ರಾಣಿ ಬಲಿ ನೀಡಲಾಗುತ್ತಿದೆ.
ಬೆಳಗ್ಗಿನ ನಮಾಜ್ ಬಳಿಕ ಮುಸ್ಲಿಂ ಭಾಂದವರು ಬಣ್ಣದ ಬಟ್ಟೆ, ಸೆಂಟ್ ಮೊದಲಾದ ಪರಿಮಳಯುಕ್ತ ದ್ರವ್ಯ ಸಿಂಪಡಿಸಿ, ಸ್ನೇಹಿತರ ಮನೆಗೆ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡಿ ಹಬ್ಬದ ಖಾದ್ಯಗಳನ್ನು ಸವಿಯುತ್ತಾರೆ.
Click this button or press Ctrl+G to toggle between Kannada and English