ಮಂಗಳೂರು : ಕೇಂದ್ರ ರೈಲ್ವೇ ಸಚಿವ ಡಿ.ವಿ.ಸದಾನಂದ ಗೌಡ ಅವರ ಸಹೋದರಿ ಯಳಂದೂರು ಜಿಲ್ಲಾ ಪಂಚಾಯತ್ ಸದಸ್ಯೆ ಸಾವಿತ್ರಿ ಶಿವರಾಂ ಅವರು ಮಂಗಳವಾರ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಸಾವಿತ್ರಿ ಅವರಿಗೆ 55 ವರ್ಷ ಪ್ರಾಯವಾಗಿದ್ದು, ಕೆಲ ಸಮಯಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಸಾವಿತ್ರಿ ಶಿವರಾಂ ಅವರು ಸುಳ್ಯ ತಾಲೂಕಿನ ಪೆರಾಜೆಯವರಾಗಿದ್ದು 2009 ರಿಂದ 2011 ರ ವ್ರೆಗೆ ಪುತ್ತೂರು ತಾಲೂಕು ಪಂಚಾಯತ್ ನ ಅಧ್ಯಕ್ಷರಾಗಿದ್ದರು.
ಮೃತ ಸಾವಿತ್ರಿ ಅವರು ಪತಿ ಶಿವರಾಂ, ಇಬ್ಬರು ಪುತ್ರಿಯರು, ನಾಲ್ವರು ಸಹೋದರರನ್ನು ಅಗಲಿದ್ದಾರೆ.
ಕ್ಯಾನ್ಸರ್‌ಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಎಂದು ತಿಳಿದು ಬಂದಿದೆ.
ಸಾವಿತ್ರಿ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸಲ್ಲಿಸಿದ್ದಾರೆ. ಪೆರಾಜೆಯ ಅವರ ಪನೆಯಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲದಿಂದ ತಿಳಿದು ಬಂದಿದೆ.
Click this button or press Ctrl+G to toggle between Kannada and English