ನವದೆಹಲಿ: ಪರಿಸರ ಸ್ನೇಹಿ ಹಾಗೂ ವಿದ್ಯುತ್ ಉಳಿತಾಯಕ್ಕೆ ಹೆಸರುವಾಸಿಯಾಗಿರುವ ಎಲ್‌ಇಡಿ ಬಲ್ಬ್‌ಗಳನ್ನು ಸಂಶೋಧಿಸಿದ ಮೂವರು ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಪುರಸ್ಕಾರ ನೀಡಿದ ಮರುದಿನವೇ ಕೇಂದ್ರ ಸರ್ಕಾರ ಆ ಬಲ್ಬ್‌ಗಳನ್ನು ಕೇವಲ 10 ರುಪಾಯಿಗೆ ಮಾರಲು ಮುಂದಾಗಿದೆ.
ಈಗ 400 ರುಪಾಯಿ ಇರುವ ಎಲ್‌ಇಡಿ ಬಲ್ಬ್ ಇನ್ನುಮುಂದೆ ಕೇವಲ 10 ರುಪಾಯಿಗೆ ಸಿಗಲಿದೆ. ಇಂಧನ ಉಳಿತಾಯ ಮಾಡುವ ಉದ್ದೇಶದಿಂದ ಕೇಂದ್ರ ಇಂಧನ ಸಚಿವಾಲಯವು ಗೃಹ ಬಳಕೆಗಾಗಿ 10 ರುಪಾಯಿಗೆ ಒಂದು ಎಲ್‌ಇಡಿ ಬಲ್ಬ್ ನೀಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಧನ ಸಚಿವಾಲಯವು ಈ ಸಂಬಂಧ ಇಂಧನ ಉಳಿತಾಯ ಮಂಡಳಿ(ಬಿಇಇ) ಹಾಗೂ ಇಂಧನ ಉಳಿತಾಯ ಸೇವಾ ಸಂಸ್ಥೆ(ಇಇಎಸ್‌ಎಲ್)ನೊಂದಿಗೆ ಅತಿ ಕಡಿಮೆ ಬೆಲೆಗೆ ಎಲ್‌ಇಡಿ ಬಲ್ಬ್ ನೀಡುವ ಯೋಜನೆ ಸಕಾರಕ್ಕೆ ಮುಂದಾಗಿದೆ. ಇದಕ್ಕೆ ವಿದ್ಯುತ್ ಹಂಚಿಕೆ ಮಾಡುವ ಆಯಾ ರಾಜ್ಯಗಳ ಇಂಧನ ಇಲಾಖೆಯ ನೆರವನ್ನು ಪಡೆಯಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದಕ್ಕೆ ಬಂದಿರುವ ಇಇಎಸ್‌ಎಲ್ ಎರಡು ಮಿಲಿಯನ್ ಎಲ್‌ಇಡಿ ದೀಪ ಒದಗಿಸಲು ಮುಂದಾಗಿದೆ.
Click this button or press Ctrl+G to toggle between Kannada and English