ಮಂಗಳೂರು ವಿಮಾನ ನಿಲ್ದಾಣದಲ್ಲಿ 27.10 ಲಕ್ಷ ಮೌಲ್ಯದ ಆಕ್ರಮ ಚಿನ್ಟ ಸಾಗಟ ಪತ್ತೆ

11:41 PM, Tuesday, October 14th, 2014
Share
1 Star2 Stars3 Stars4 Stars5 Stars
(5 rating, 4 votes)
Loading...

Gold Smuggler

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಲೈಫ್‌ಜಾಕೆಟ್‌ ಬ್ಯಾಗಿನೊಳಗೆ ಹುದುಗಿಸಿಟ್ಟು ಅಕ್ರಮವಾಗಿ ಸಾಗಿಸುತ್ತಿದ್ದ 27.10 ಲಕ್ಷ ರೂ. ಮೌಲ್ಯದ 1 ಕಿಲೋ ಚಿನ್ನವನ್ನು ಸೋಮವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ.

ಕೊಡಗು ನಾಪೊಕ್ಲು ನಿವಾಸಿ ಮಡಪಳ್ಳಿ ಮಹಮ್ಮದ್‌ ಇಸ್ಮಾಯಿಲ್‌ ಬಂಧಿತ ಆರೋಪಿಯಾಗಿದ್ದಾನೆ.

ಜೆಟ್‌ ಏರ್‌ವೇಸ್‌ನಲ್ಲಿ ದುಬಾೖಯಿಂದ ಮಂಗಳೂರಿಗೆ ಮಂಗಳವಾರ ಬೆಳಗ್ಗೆ 9 ಗಂಟೆಗೆ ಆಗಮಿಸಿದ ಆರೋಪಿಯು ಚಿನ್ನ ಹುದುಗಿಸಿಟ್ಟಿದ್ದ ಲೈಫ್‌ ಜಾಕೆಟ್‌ ಬ್ಯಾಗನ್ನು ವಿಮಾನದ ಸೀಟಿನಡಿಯಲ್ಲಿ ಅಡಗಿಸಿಟ್ಟಿದ್ದ. ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮವಾಗಿಟ್ಟಿದ್ದ ಚಿನ್ನ ಪತ್ತೆಯಾಯಿತು.

ಆರೋಪಿಯನ್ನು ಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸ‌ಲಾಗಿದೆ.

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಉಪ ಆಯುಕ್ತ ಕೃಷ್ಣಕುಮಾರ್‌ ಪ್ರಸಾದ್‌ ಅವರ ಉಸ್ತುವಾರಿಯಲ್ಲಿ ಅಧೀಕ್ಷಕರಾದ ಎಚ್‌. ಬಿ. ವೆಂಕಟೇಶ, ಆರ್‌. ಎನ್‌. ವೆಂಕಟ್ರಾಮನ್‌, ಎ. ಪಾಂಡುರಂಗ ನಾೖಕ್‌, ಆರ್‌. ಜಿ. ಗಾಂವ್ಕರ್‌, ಕೆ. ರಾಮಕೃಷ್ಣನ್‌, ಕೆ. ನಿರ್ಮಲ ಹಾಗೂ ಇನ್ಸ್‌ಪೆಕ್ಟರ್‌ಗಳಾದ ಸುಬೇಂಧು ರಂಜನ್‌ ಬೆಹರಾ, ಕಮಲೇಶ್‌ಕುಮಾರ್‌ ಮೀನಾ, ರಾಜೇಶ್‌ ಝಾ, ಹವಾಲ್ದಾರ್‌ ಮಂಜುನಾಥ್‌ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಮಂಗಳೂರು ಕಸ್ಟಮ್ಸ್‌ ಆಯುಕ್ತರ ಮಾರ್ಗದರ್ಶನದಲ್ಲಿ ಮುಂದಿನ ತನಿಖೆ ಪ್ರಗತಿಯಲ್ಲಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English