ಬೋಳಾರದಲ್ಲಿ ನೂತನ ಬಸ್ಸು ತಂಗುದಾಣದ ಉದ್ಘಾಟನೆ

4:44 PM, Friday, October 17th, 2014
Share
1 Star2 Stars3 Stars4 Stars5 Stars
(4 rating, 5 votes)
Loading...
Mahabala Marla

ಮಂಗಳೂರು : ನಗರವನ್ನು ಸುಂದರವಾಗಿ ಇಡುವಲ್ಲಿ, ಸಾರ್ವಜನಿಕರಿಗೂ ಬದ್ಧತೆ ಇದೆ. ಎಲ್ಲ ಕೆಲಸಕ್ಕೂ ಸರಕಾರವನ್ನು ನಂಬಿ ಕುಳಿತುಕೊಳ್ಳುವುದಲ್ಲ. ಸಾರ್ವಜನಿಕರ ಸ್ಪಂದನೆ ದೊರಕಿದಾಗ, ನಗರ ಸುಂದರವಾಗಲು ಸಾಧ್ಯ ಎಂದು, ಮೇಯರ್ ಶ್ರೀ ಮಹಾಬಲ ಮಾರ್ಲ ಅಭಿಪ್ರಾಯಿಸಿದ್ದಾರೆ.

ಮಂಗಳೂರು ಹೊಯ್ಗೆ ಬಜಾರ್ ವಾರ್ಡ್ ಗೆ ಒಳಪಟ್ಟ ಬೋಳಾರ ಲಿವೆಲ್ ಪರಿಸರದಲ್ಲಿ ‘ಸಿಟಿ ಬೀಚ್’ ಪ್ರಾಯೋಜಕತ್ವದಲ್ಲಿ, ಮಾಯಾ ಸಮೂಹ ಸಂಸ್ಥೆಗಳು ಮತ್ತು ಬೋಳಾರ ಲಿವೆಲ್ ಓ.ಸಿ. ಫ್ರೆಂಡ್ಸ್ ಸಹಕಾರದಲ್ಲಿ ಪುನರ್ ನಿರ್ಮಿಸಲ್ಪಟ್ಟ ನೂತನ ಬಸ್ಸು ತಂಗುದಾಣವನ್ನು ಮೇಯರ್ ಶ್ರೀ ಮಹಾಬಲ ಮಾರ್ಲ ರಿಬ್ಬನ್ ಕತ್ತರಿಸಿ ಲೋಕಾರ್ಪಣೆ ಮಾಡಿದರು.

ಸಿಟಿ ಬೀಚ್ ರೆಸಾರ್ಟ್ ನ ಪ್ರವರ್ತಕರು, ಬಸ್ಸು ತಂಗುದಾಣದ ಪ್ರಾಯೋಜಕರು ಉದ್ಯಮಿ ಶ್ರೀ ರಾಮದಾಸ್ ಕಾಮತ್ ಮತ್ತು ಶ್ರೀಮತಿ ಜಯಶ್ರೀ ರಾಮದಾಸ್, ದಂಪತಿಗಳು ದೀಪ ಬೆಳಗಿಸಿ, ಬಸ್ ತಂಗುದಾಣ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಏರ್ಪಡಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೇಯರ್ ಶ್ರೀ ಮಹಾಬಲ ಮಾರ್ಲ, ನಮ್ಮ ನಗರವನ್ನು ಸ್ವಚ್ಚ, ಸುಂದರವಾಗಿ ಇಡುವಲ್ಲಿ ಎಲ್ಲರಿಗೂ ಬದ್ಧತೆ ಬೇಕು. ಎಲ್ಲದಕ್ಕೂ ಸರಕಾರವನ್ನು ಅವಲಂಭಿಸುವುದು ಸರಿಯಲ್ಲ ಎಂದು ತಿಳಿಸಿ, ಸುಂದರವಾಗಿ ಬಸ್ಸು ತಂಗುದಾಣ ನಿರ್ಮಿಸಿಕೊಟ್ಟ ಉದ್ಯಮಿ ಶ್ರೀ ರಾಮದಾಸ್ ಕಾಮತ್ ದಂಪತಿಗಳನ್ನು, ಮಾಯಾ ಸಮೂಹ ಸಂಸ್ಥೆಗಳ ಸಹೋದರರನ್ನು ಹಾಗೂ ಸಹಕಾರ ನೀಡಿದ ಓ.ಸಿ ಪ್ರೆಂಡ್ಸ್ ಸದಸ್ಯರನ್ನು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ, ಶ್ರೀ ರಾಮದಾಸ್ ಕಾಮತ್, ತಾನು, ಎಲ್ಲ ದೇಶಗಳನ್ನು ಸುತ್ತಿದರೂ, ತನ್ನ ಊರಿನ ಅಭಿವೃದ್ಧಿಗಾಗಿ ಕೊಡುಗೆ ನೀಡಬೇಕೆಂಬ ಹಂಬಲದಿಂದ ಇದೀಗ ಮಂಗಳೂರಿನಲ್ಲಿಯೇ ನೆಲೆಸಿದ್ದೇನೆ. ಪ್ರವಾಸೋದ್ಯಮಕ್ಕೆ ಅನುಕೂಲವಾಗುವ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗುವ ರೀತಿಯಲ್ಲಿ ಸಿಟಿ ಬೀಚ್ ಸಂಸ್ಥೆಯನ್ನು ಇಲ್ಲಿಯ ನದಿ ಕಿನಾರೆಯಲ್ಲಿ ನಿರ್ಮಿ ಸುತ್ತಿದ್ದೇವೆ. ಇದೇ ಉದ್ದೇಶದಿಂದ ಈ ಪರಿಸರದ ಜನರಿಗೆ ಪ್ರಯೋಜನಕ್ಕೆ ಬರುವ ರೀತಿಯಲ್ಲಿ ಓ.ಸಿ. ಫ್ರೆಂಡ್ಸ್ ಸಹಕಾರದಲ್ಲಿ ಬಸ್ಸು ತಂಗುದಾಣ ಒದಗಿಸಿ ಕೊಟ್ಟಿದ್ದೇವೆ ಎಂದು, ಶ್ರೀ ರಾಮದಾಸ ಕಾಮತ್ ತಿಳಿಸಿದರು.

ಬೋಳಾರ ವಾರ್ಡ ನ ಮನಪಾ ಸದಸ್ಯೆ ಶ್ರೀಮತಿ ರತಿಕಲಾ, ಬಸ್ಸು ತಂಗುದಾಣ ನಿರ್ಮಾಣಕ್ಕೆ ಕಾರಣವಾದ ಎಲ್ಲರನ್ನೂ ಅಭಿನಂಧಿಸಿ, ಜನರಿಗೆ ಒಳ್ಳೆಯ ರೀತಿಯಲ್ಲಿ ಉಪಯೋಗವಾಗಲಿ ಎಂದು ಹಾರೈಸಿದರು.

ಸ್ಥಳೀಯ ಕಾಂಗ್ರೆಸ್ ಸಮಿತಿಯ ವಾರ್ಡ್ ಅಧ್ಯಕ್ಷ ಶ್ರೀ ಹುಸೈನ್, ಪ್ರಸ್ತಾವನೆಯ ಮಾತುಗಳನ್ನಾಡಿದರು.

ಉಪಮೇಯರ್ ಶ್ರೀಮತಿ ಕವಿತಾ ವಾಸು, ಸ್ಥಾಯೀ ಸಮಿತಿ ಅಧ್ಯಕ್ಷೆ ಶ್ರೀಮತಿ ಜೆಸಿಂತಾ ವಿಜಯಾ ಆಲ್ಫ್ರೆಡ್, ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ರಮಾನಾಥ ಹೆಗ್ಡೆ, ಶ್ರೀಮತಿ ಜಯಶ್ರೀ ರಾಮದಾಸ್, ಸ್ಥಳೀಯ ಪ್ರಮುಖರು ಸರ್ವಶ್ರೀ ಬೆನೆಟ್ ಡಿಮೆಲ್ಲೋ, ಚಿತ್ತರಂಜನ್ ದಾಸ್ ಬಂಗೇರ, ಮಾಯಾ ಸಮೂಹ ಸಂಸ್ಥೆಗಳ ಸರ್ವಶ್ರೀ ಹರೀಶ್ ಕಾಮತ್, ವಾಸುದೇವ ಕಾಮತ್, ಓ.ಸಿ. ಫ್ರೆಂಡ್ಸ್ನ ಅಧ್ಯಕ್ಷ ಶ್ರೀ ನವೀನ್, ಕಾರ್ಯದರ್ಶಿ ಶ್ರೀ ರಮಾನಂದ, ಆಸಿಫ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇಂಜಿನಿಯರ್ ಶ್ರೀ ಸುಂದರ್ ರಾಮ, ಗುತ್ತಿಗೆದಾರ ಶ್ರೀ ಪ್ರವೀಣ್ ಮತ್ತು ಮೇಲ್ಛಾವಣಿ ನಿರ್ಮಿಸಿದ ಶ್ರೀ ಮನೋಜ್ ಇವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದರು.

ಕುರಲ್ ಮೀಡಿಯಾ ಸಂಸ್ಥೆಯ ನಿರ್ದೇಶಕ ಶ್ರೀ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಬಸ್ಸು ತಂಗುದಾಣ ಉದ್ಘಾಟಿಸಿದ ಮೇಯರ್ ಮಹಾಬಲ ಮಾರ್ಲ, ಬಸ್ಸಿನಲ್ಲಿ ಸಾಂಕೇತಿಕವಾಗಿ ಪ್ರಯಾಣಿಸಿ, ಬಸ್ಸು ತಂಗುದಾಣದ ಮಹತ್ವವನ್ನು ತೋರಿಸಿದರು.
Mahabala Marla

Mahabala Marla

Mahabala Marla

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English