ಕೆ.ಎಸ್.ಆರ್.ಟಿ.ಸಿ ವೋಲ್ವೊ ಬಸ್ ದರ-ಬೆಜ್ಜಿಬಿದ್ದ ಪ್ರಯಾಣಿಕರು

12:43 AM, Wednesday, October 22nd, 2014
Share
1 Star2 Stars3 Stars4 Stars5 Stars
(5 rating, 4 votes)
Loading...
ksrtc

ಮುಂಬಯಿ : ಮಂಗಳೂರು-ಮುಂಬಯಿ ಅಥವಾ ಮುಂಬಯಿ-ಮಂಗಳೂರು ಪ್ರಯಾಣ ತುಳು ಕನ್ನಡಿಗರ ಪಾಲಿಗೆ ಕಂಠಕವಾಗುತ್ತಿದ್ದು, ಈ ಮಾರ್ಗವಾಗಿ ಸೇವೆಗೈಯುವ ಬಸ್ ಗಳಲ್ಲಿ ಯಾವುದೇ ಸುಸಮಯ ಬಂದಾಗ (ಸೀಝನ್) ಅತೀಯಾದ ದರ ಬೆಳೆಸಿ ಪ್ರಯಾಣಿಕರನ್ನು ಸಂಕಷ್ಟಕ್ಕೊಳ ಪಡಿಸುವ ಬಸ್ ಸಂಸ್ಥೆಗಳ ಉಪಟಲ ತೀರಾ ಖಂಡನೀಯ ಎಂದು ಪ್ರಯಾಣಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಅದಕ್ಕೆ ಪೂರಕ ಎಂಬಂತೆ ಈ ಬಾರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಸಂಸ್ಥೆಯ ವೋಲ್ವೊ ಬಸ್ ದರವೂ ಪ್ರಯಣಿಕರನ್ನು ಕೆರಳಿಸಿದೆ. ಮಂಗಳೂರು-ಮುಂಬಯಿ ಮತ್ತು ಬೆಂಗಳೂರು-ಮುಂಬಯಿ ಪ್ರಯಾಣ ಅಂತರ ಅಂದಾಜು ಏಕ ಸಮಾನ ಆಗಿದ್ದರೂ ಪ್ರಯಾಣ ದರದಲ್ಲಿ ಮಾತ್ರ ತುಂಬಾ ವ್ಯತ್ಯಾಸ ಇರುವುದು ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ವಿಶೇಷ ಎಂದರೆ ವಾರದ ದಿನಗಳಲ್ಲಿ ಕೆಎಸ್ಆರ್ಟಿಸಿ ಮಲ್ಟಿಎಕ್ಸೆಲ್ ವೋಲ್ವೊ ಬಸ್ ದರ 1,750/- ರೂಪಾಯಿ ಆದರೆ ವಾರದ ಕೊನೆಯ ಶುಕ್ರವಾರ ಮತ್ತು ಆದಿತ್ಯವಾರ ಗಳಲ್ಲಿ ಮುಂಬಯಿ-ಮಂಗಳೂರು ಪ್ರಯಾಣ ದರ 2,000/- ಆಗುತ್ತದೆ. ಅದೇ ಖಾಸಾಗಿ ಮಲ್ಟಿಎಕ್ಸೆಲ್ ವೋಲ್ವೊ ಬಸ್ ದರ 1,370/- ರೂಪಾಯಿ, ಸ್ಲೀಪರ್ ಕೋಚ್ ದರ ರೂಪಾಯಿ 1,575/- ರೂಪಾಯಿ ಆದರೆ ಸಾಮಾನ್ಯ ಬಸ್ ಪ್ರಯಾಣ ದರ 1,300/- ರೂಪಾಯಿ ಆಗಿದೆ. ಇದರಿಂದ ಅತೃಪ್ತಿಗೊಂಡ ಪ್ರಯಾಣಿಕರು ಸಂಬಂಧಪಟ್ಟ ಏಜೆಂಟರುಗಳಲ್ಲಿ ಕೇಳಿದರೆ ಅದಕ್ಕೆ ಸೂಕ್ತ ಉತ್ತರವೇ ಇಲ್ಲ ಎನ್ನುತ್ತಾರೆ ಪ್ರಯಾಣಿಕರು.

ಕೆಎಸ್ಆರ್ಟಿಸಿಗೆ ಪ್ರೆಶ್ನಿಸುವಷ್ಟು ಪುರುಸೊತ್ತು ನಮ್ಮವರಿಗಿಲ್ಲ ಎನ್ನುವ ಕಾರಣದಿಂದಾಲೇ ಇದರ ಲಾಭವನ್ನು ಪಡೆಯುವಂತಿದೆ. ಇದೇನಾ ಕರ್ನಾಟಕ ಸರಕಾರಿ ಬಸ್ಗಳ ಕೊಡುಗೆ…? ಈ ಬಸ್ ದರ ಹೆಚ್ಚಳದಿಂದಾಗಿ ಪ್ರಾಯಾಣಿಕರು ಗೋಳಾಡುವಂತಾಗಿದೆ. ಇದು ಎಷ್ಟು ಸಮಂಜಸ..? ಎನ್ನುವುದು ಇದೀಗ ಪ್ರಯಾಣಿಕ ವಾದ.

ಮುಂಬಯಿ-ಮಂಗಳೂರು ಪ್ರಯಾಣಕ್ಕೆ ಸಾಮಾನ್ಯ ಆಯಾಕಾಲಾವಧಿ (ಸೀಝನಲ್) ಟಿಕೇಟು ದರ ಇಷ್ಟು ದುಬಾರಿ ಆಗುತ್ತದೆಯೋ ಜನಸಾಮಾನ್ಯ ಪ್ರಯಾಣಿಕರ ಪಾಡಿಗೆ ಹೇಳತೀರದ ಗೋಳಾಗುತ್ತದೆ. ಸದಾ ಜನಸೇವೆಗೆ ಬದ್ಧರಾಗಿದ್ದೇವೆ ಎನ್ನುವ ಮುಂಬಯಿಯಲ್ಲಿನ ಸರಕಾರೇತರ ಸಂಸ್ಥೆಗಳು, ಜಾತೀಯ, ಭಾಷೆ, ಪ್ರಾಂತ್ಯ, ಜನಾಂಗೀಯ ಸಂಘ-ಸಂಸ್ಥೆಗಳು ಯಾಕೆ ಧ್ವನಿ ಎತ್ತುತ್ತಿಲ್ಲ ಎನ್ನುವುದೇ ಸಂಶಯಾಸ್ಪದ ವಿಷಯ. ಬರೇ ಊರ ಪ್ರಗತಿ, ಯೋಜನೆಗಳು ನಮ್ಮ ಸಾಧನೆ ಎಂದು ಬೊಬ್ಬಿಡುವ ಸಂಸ್ಥೆಗಳು ಸಾಮಾನ್ಯ ಜನತೆಗಾಗುವ ತೀವ್ರ ಅನ್ಯಾಯದ ಬಗ್ಗೆ ಮೌನ ವಹಿಸುತ್ತವೆ. ಉದಾಹರಣೆಗೆ ತಮ್ಮ ನೌಕರರಿಗೆ ತಾವು ನೀಡುವ ಮಾಸಿಕ ಸಂಬಳದ ಕನಿಷ್ಠ 8,000/- ಬಗ್ಗೆ ಅರಿತಿರುವ ಯಜಮಾನರು ತಮ್ಮ ನೌಕರ ವಾಷಿಕವಾಗಿ ಒಂದು ಬಾರಿ ತನ್ನ ಪರಿವಾರದೊಂದಿಗೆ ತಾಯ್ನಾಡಿಗೆ ಹೋಗಿ ಬರಲು ಪಡುವ ಸಂಕಷ್ಟವನ್ನು ಅರಿಯುತ್ತಿಲ್ಲ (ಪತಿ, ಪತ್ನಿ, 2-ಮಕ್ಕಳು ಸೇರಿಸಿ ಪ್ರಯಾಣಕ್ಕಾಗಿ 16,000/- ಅಂದರೆ ಒಬ್ಬ ನೌಕರನ ಎರಡು ತಿಂಗಳ ಸಂಪೂರ್ಣ ಸಂಬಳ ಬರೇ ಮುಂಬಯಿ-ಮಂಗಳೂರು ಪ್ರಯಾಣಕ್ಕೆ ಮೀಸಲಾಗಿರಿಸ ಬೇಕಾಗುತ್ತದೆ) ಎನ್ನುವುದನ್ನು ತಿಳಿಯದ ಅದೇ ಯಜಮಾನ ನಗರದ ಸಂಸ್ಥೆಯ ಪದಾಧಿಕಾರಿಯಾಗಿ ಊರ ಪ್ರಗತಿ, ಸಾಧನೆ ಬಗ್ಗೆ ಭಾಷಣ ಬಿಗಿಯುತ್ತಾರೆ. ಆದರೆ ಇಂತಹ ಸಾಮಾನ್ಯ ಬಸ್, ರೈಲು ಪ್ರಯಾಣ ವಿಚಾರವಾಗಿ ಮಾತನಾಡುವ ಗೋಜಿಗೆ ಹೋಗುತ್ತಿಲ್ಲ ಮಾತ್ರವಲ್ಲದೆ ತಲೆಯೂ ಕೆಡಿಸುತ್ತಿಲ್ಲ. ನಗರಕ್ಕಾಗಮಿಸುವ ಮಂತ್ರಿ ಮಹೋದಯರು, ಶಾಸಕರು, ಧರ್ಮದರ್ಶಿ, ಸ್ವಾಮೀಜಿಗಳೆನ್ನುವವರಿಗೆ ರೆಡ್ ಕಾರ್ಪೇಟ್ ಸ್ವಾಗತ ಕೋರಿ ಪಾದಪೂಜೆ ಗೈಯುವ ಯಜಮಾನರು ತನ್ನ ನೌಕರನೊಬ್ಬನ ಬಗ್ಗೆ ತಿಳಿಯುತ್ತಿಲ್ಲ ಎಂದು ಇದೇ ವೇಳೆ ಹೊಟೇಲು ಕಾರ್ಮಿಕನೋರ್ವ ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ವಾರ್ಷಿಕವಾಗಿ ಮೇ-ಜೂನ್, ಡಿಸೆಂಬರ್, ದಸರಾ-ದೀಪಾವಳಿ ಹಬ್ಬಶುಭದಿನಗಳು ಇತ್ಯಾದಿ ಸೀಸನಲ್ ಸಮಯದಲ್ಲಿ ಬಸ್ನವರು ತಮ್ಮ ಅನುಕೂಲಕ್ಕಾಗಿ ಸೀಸನಲ್ ದರ ತೀವ್ರವಾಗಿ ಏರಿಸಿ ಪ್ರಯಾಣಿಕರನ್ನು ವಂಚಿಸಿ ಹಗಲು ದರೋಡೆಗೈಯುವ ಬಗ್ಗೆ ಇನ್ನಾದರೂ ಸಂಘ-ಸಂಸ್ಥೆಗಳು ಕಡಿವಾಣ ಹಾಕುವಂತೆ ಪ್ರಯಾಣಿಕನೋರ್ವ ತಮ್ಮ ಕಳಕಳಿ ವ್ಯಕ್ತ ಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English