ಉಪ್ಪಳ : ತಮಿಳುನಾಡಿನ ತಿರುನಲ್ವೇಲಿಯಲ್ಲಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳನ್ನೊಳಗೊಂಡ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟವು ಅಕ್ಟೋಬರ್10 ರಿಂದ 12 ವರೆಗೆ ಜರಗಿತು. ಇದರಲ್ಲಿ ಕೊಂಡೆವೂರಿನ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ 10ನೇ ತರಗತಿ ವಿದ್ಯಾರ್ಥಿನಿ ಕು. ನಿಶಾ ವಿಜಯ್ 5000 ಮೀ ನಡುಗೆ ಸ್ಪರ್ಧೆಯಲ್ಲಿ 2 ನೇ ಸ್ಥಾನ,ಹ್ಯಾಮರ್ ಎಸೆತದಲ್ಲಿ 3 ನೇ ಸ್ಥಾನ, 9 ನೇ ತರಗತಿಯ ಕು. ಶ್ರೇಯಾ ಬಿ.ಎಮ್ 3000 ಮೀ ರೇಸ್ ನಲ್ಲಿ 3 ನೇ ಸ್ಥಾನ ಮತ್ತು 9 ನೇ ತರಗತಿಯ ಕು.ಸೃಷ್ಟಿ ಎ.ವಿ 400 ಮೀ ರೇಸ್ ನಲ್ಲಿ 3ನೇ ಸ್ಥಾನ, ಟ್ರಿಪಲ್ ಜಂಪ್ ನಲ್ಲಿ 3ನೇ ಸ್ಥಾನ ಪಡೆದಿರುತ್ತಾರೆ. ಅಲ್ಲದೆ 9ನೇ ತರಗತಿಯ ಪ್ರೀತಿ ಪಿ ಜ್ಯಾವೆಲಿನ್ ಎಸೆತದಲ್ಲಿ ಭಾಗವಹಿಸಿದ್ದಾರೆ. 10 ನೇ ತರಗತಿಯ ನಿಶಾ ವಿಜಯ್ 5000 ಮೀ ನಡುಗೆ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಅಕ್ಟೋಬರ್25 ರಂದು ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.
ತಮಿಳುನಾಡಿನಲ್ಲಿ ನಡೆದ ಕ್ಷೇತ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಪಡೆದ ಈ ಪ್ರತಿಭೆಗಳನ್ನು ಶ್ರೀ ನಿತ್ಯಾನಂದ ಯೋಗಾಶ್ರಮದ ಪ.ಪೂ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಶಾಲಾಭಿವೃದ್ಧಿ ಸಮಿತಿ ಮತ್ತು ಶಾಲೆಯ ಅಧ್ಯಾಪಕ ವೃಂದದವರು ಅಭಿನಂದಿಸಿದ್ದಾರೆ.
Click this button or press Ctrl+G to toggle between Kannada and English